UN networks
ಮಂಗಳೂರು: ಮಳಲಿ ಮಸೀದಿಯ ಜಾಗಕ್ಕೆ ಸಂಬಂಧಿಸಿ ಮಸೀದಿ ಕಮಿಟಿ ಹಾಗೂ ವಿಎಚ್ ಪಿ ನಡುವೆ ಭುಗಿಲೇದಿದ್ದ ವಿವಾದದ ವಿಚಾರಣೆ ಇಂದಿನಿಂದ ಮತ್ತೆ ಆರಂಭವಾಗಲಿದೆ. ಮಂಗಳೂರಿನ ಮೂರನೇ ಹೆಚ್ಚುವರಿ ಸಿವಿಲ್ ಕೋರ್ಟ್ ನಲ್ಲಿ ಮಂಗಳವಾರದಿಂದ ಮತ್ತೆ ವಿಚಾರಣೆ ನಡೆಯಲಿದೆ. ನ್ಯಾಯಾಧೀಶರ ವರ್ಗಾವಣೆ ಹಿನ್ನೆಲೆ ಹೊಸ ಪೀಠದಲ್ಲಿ ಮತ್ತೆ ವಿಚಾರಣೆ ನಡೆಯಲಿದೆ.
ಈ ಹಿಂದಿನ ನ್ಯಾಯಾಧೀಶರು ವಾದ-ಪ್ರತಿವಾದ ಆಲಿಸಿ ತೀರ್ಪು ಕಾಯ್ದಿರಿಸಿದ್ದರು. ಆದರೆ ಹಿಂದಿನ ನ್ಯಾಯಾಧೀಶರ ವರ್ಗಾವಣೆ ಹಿನ್ನೆಲೆ ಇದೀಗ ಹೊಸ ಪೀಠದಲ್ಲಿ ಮತ್ತೆ ವಿಚಾರಣೆ ನಡೆಯಲಿದ್ದು ಮಸೀದಿ ಮತ್ತು ವಿಎಚ್ ಪಿ ವಕೀಲರ ವಾದವನ್ನು ಹೊಸ ಪೀಠ ಆಲಿಸಲಿದೆ.
ಮಳಲಿ ಮಸೀದಿಯ ಜಾಗಕ್ಕೆ ಸಂಬಂಧಿಸಿದಂತೆ ವಿಎಚ್ ಪಿ ಕೋರ್ಟ್ ಕಮಿಷನರ್ ನೇಮಿಸಿ ಸರ್ವೆಗೆ ಮನವಿ ಮಾಡಿತ್ತು. ಆದರೆ ಮಸೀದಿ ಕಾಮಗಾರಿ ತಡೆಯಾಜ್ಞೆ ತೆರವು ಮಾಡಿ ವಿಎಚ್ ಪಿ ಅರ್ಜಿ ವಜಾಗೆ ಮಸೀದಿ ಕಮಿಟಿ ಮನವಿ ಮಾಡಿತ್ತು.
ಹೀಗಾಗಿ ಮಸೀದಿ ಕಮಿಟಿ ಅರ್ಜಿಯ ಪರ ವಿಚಾರಣೆ ಕೈಗೆತ್ತಿಕೊಂಡಿದ್ದ ಹಿನ್ನೆಲೆ ವಿಎಚ್ ಪಿ ಹೈಕೋರ್ಟ್ ಮೆಟ್ಟಿಲೇರಿತ್ತು. ಆದರೆ ವಿಎಚ್ ಪಿ ಅರ್ಜಿ ವಜಾ ಮಾಡಿ ಮಂಗಳೂರು ಕೋರ್ಟ್ ನಿರ್ಧಾರಕ್ಕೆ ಬಿಟ್ಟಿದ್ದು ಎಂದು ಹೈ ಕೋರ್ಟ್ ಹೇಳಿತ್ತು. ಇದೀಗ ಹೊಸ ಪೀಠದಲ್ಲಿ ನಡೆಯಲಿರುವ ವಾದ- ಪ್ರತಿವಾದದಲ್ಲಿ ಯಾರ ಪರ ನ್ಯಾಯ ಸಿಗಬಹುದು ಎಂಬುವುದನ್ನು ಕಾದುನೋಡಬೇಕಿದೆ.