UNNEWS NETWORKS
ಉಳ್ಳಾಲ: ಉಳ್ಳಾಲ ತಾಲೂಕಿನ ಕಿನ್ಯಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಸರ್ಕಾರದ ‘ಪೌತಿ ಖಾತೆ ” ಆಂದೋಲನದಡಿ ತಮ್ಮ ಜಾಗದ ದಾಖಲೆಯನ್ನು ಸರಿಪಡಿಸುವ ಬಗ್ಗೆ ಪೂರ್ವಭಾವಿ ಮಾಹಿತಿ ನೀಡುವ ಸಭೆ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ಪಂಚಾಯತ್ ಅಧ್ಯಕ್ಷೆ ಲಕ್ಷಿ÷್ಮ ಕಾರ್ಯಕ್ರಮದ ಅಧ್ಯಕ್ಷ ತೆ ವಹಿಸಿದ್ದರು. ಜನರು ತಮ್ಮದಾಖಲೆಗಳ ಸಮಸ್ಯೆಗಳನ್ನು ಹೇಳುವುದರ ಮೂಲಕ ಅದನ್ನು ಸರಿಪಡಿಸುವುದರ ಒಂದು ಮಾಹಿತಿಯನ್ನು ಗ್ರಾಮ ಕರಣಿಕೆ ಅಕ್ಷತಾಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಪಂಚಾಯತ್ ಸದಸ್ಯರಾದ ಸಿರಾಜುದ್ದೀನ್,ಗ್ರಾಮ ಸಹಾಯಕ ರೊನಾಲ್ಡ್ ಡಿಸೋಜ, ಪಂಚಾಯತ್ ಸಿಬ್ಬಂದಿಯವರು ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ಧಿ ಅಽಕಾರಿವಿಶ್ವನಾಥ ಬಿ ಇವರು ಸ್ವಾಗತಿಸಿ ವಂದಿಸಿದರು.