Site icon Ullalavani

ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದ ರ‍್ಮಾಧಿಕಾರಿ ಹೆಗ್ಗಡೆಯವರಿಗೆ ಕುಂಪಲ ಮಂದಿರದಿಂದ ಅಭಿನಂದನೆ

UN NEWS NETWORKS
ಉಳ್ಳಾಲ: ರಾಜ್ಯ ಸಭಾ ಸದಸ್ಯರಾಗಿ ನೇಮಕಗೊಂಡ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಽಕಾರಿಗಳಾದ ಪದ್ಮಭೂಷಣ ರಾಜರ್ಷಿ ಡಾ| ಡಿ. ವಿರೇಂದ್ರ ಹೆಗ್ಗಡೆಯವರಿಗೆ ಕುಂಪಲ ಬಾಲಕೃಷ್ಣ ಮಂದಿರದ ವತಿಯಿಂದ ಧರ್ಮಸ್ಥಳದಲ್ಲಿ ಗೌರವ ಅಭಿನಂದನೆಗಳನ್ನು ಅರ್ಪಿಸಲಾಯಿತು.

ಧರ್ಮಸ್ಥಳದ ಧರ್ಮಾಧಿಕಾರಿಗಳನ್ನು ಕುಂಪಲ ಶ್ರೀ ಬಾಲಕೃಷ್ಣ ಭಜನಾ ಮಂದಿರದ ಆಶ್ರಯದಲ್ಲಿ ಅಭಿನಂದಿಸಲಾಯಿತು

ಶ್ರೀ ಬಾಲಕೃಷ್ಣ ಮಂದಿರದ ಅಧ್ಯಕ್ಷ ಸತೀಶ್ ಕುಂಪಲ ಈ ವೇಳೆ ಮಾತನಾಡಿ ಮೋದಿಜಿಯವರು ವೀರೇಂದ್ರ ಹೆಗ್ಗಡೆಯವರನ್ನ ರಾಜ್ಯಸಭಾ ಸದಸ್ಯರನ್ನಾಗಿ ನೇಮಿಸಿದ್ದು ರಾಜ್ಯ,ರಾಷ್ಟçದ ಆಸ್ತಿಕರು,ಆಧ್ಯಾತ್ಮಿಕ ಚಿಂತಕರಿಗೆ ಪೂರಕ ವಾತಾವರಣ ಕಲ್ಪಿಸಿದಂತಾಗಿದೆ.ಹೆಗ್ಗಡೆಯವರು ವಿಶೇಷವಾಗಿ ಸಮಾಜದ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಅವಿರತವಾಗಿ ಶ್ರಮಿಸುತ್ತಿದ್ದಾರೆ.ಅನೇಕ ಧಾರ್ಮಿಕ ಕೇಂದ್ರ,ರುದ್ರಭೂಮಿ ನಿರ್ಮಾಣಕ್ಕೆ ಕ್ಷೇತ್ರದ ವತಿಯಿಂದ ಅನುದಾನ ನೀಡಿದ್ದು ಅವರಿಗೆ ರಾಜ್ಯಸಭಾ ಸದಸ್ಯತನ ಅರಸಿ ಬಂದದ್ದು ನಮಗೆಲ್ಲರಿಗೂ ಅತೀವ ಸಂತಸ ನೀಡಿದೆ ಎಂದರು.
ಈ ಸಂದರ್ಬದಲ್ಲಿ ಮಂದಿರದ ಕಾರ್ಯದರ್ಶಿ ರವೀಂದ್ರ ಕುಂಪಲ, ಸಂಘಟನಾ ಕಾರ್ಯದರ್ಶಿ ಪ್ರವೀಣ್ ಎಸ್. ಕುಂಪಲ, ಕೋಶಾಽಕಾರಿ ಸೋಮಶೇಖರ್ ಜಗತಾಪ್, ಉಪಾಧ್ಯಕ್ಷÀ ಚಂದ್ರಶೇಖರ್ ಬಿಜೆ, ಉತ್ಸವ ಸಮಿತಿ ಅಧ್ಯಕ್ಷ ಪ್ರಹ್ಲಾದ್ ಕುಮಾರ್ ಇಂದಾಜೆ, ರಜತ ಮಹೋತ್ಸವ ಸಮಿತಿ ಗೌರವಾದ್ಯಕ್ಷ ಮೋಹನ್ ಶೆಟ್ಟಿ, ಕಾರ್ಯಾದ್ಯಕ್ಷ ಜಗದೀಶ್ ಆಚಾರ್ಯ, ಮಂದಿರದ ಪದಾದಿಕಾರಿಗಳಾದ ಅಶೋಕ್ ಕೆ, ಶಿವಾನಂದ ಟೈಲರ್, ಕಿಶೋರ್ ಡಿಕೆ, ಸುಂದರ ಗಟ್ಟಿ, ಅನಿಲ್ ಬಗಂಬಿಲ, ಬಿಜೆಪಿ ಮಹಿಳಾ ಮೋರ್ಚ ಅಧ್ಯಕ್ಷೆ ಧನಲಕ್ಷಿ÷್ಮ ಗಟ್ಟಿ, ದಯಾನಂದ ತೊಕ್ಕೊಟ್ಟು, ಸಂಪತ್ ಕುಕ್ಯಾನ್, ಪ್ತದೀಪ್ ಶೆಟ್ಟಿ ಬೆರಿಕೆ, ರಾಜೇಶ್ ಪ್ರಕಾಶ್ ನಗರ ಮೊದಲಾದವರು ಉಪಸ್ಥಿತರಿದ್ದರು.

Exit mobile version