Site icon Ullalavani

ಕುಂಪಲ : ಕೇಸರಿ ಮಿತ್ರವೃಂದದಿದ “ಮನೆ- ಮನೆ ವೃಕ್ಷ ವನಮಹೋತ್ಸವ”ಕ್ಕೆ ಚಾಲನೆ

UN NewsNetworks
ಉಳ್ಳಾಲ: ಮರಗಳಿಗೆ ನಾವು ದೇವರ ರೂಪ ಕೊಟ್ಟಿದ್ದರಿಂದ ಮರಗಳು ಉಳಿದಿದೆ, ಇಲ್ಲದಿದ್ದರೆ ಮನುಷ್ಯರು ಮರಗಳನ್ನು ಕಡಿದು ನಾಶ ಪಡಿಸುತ್ತಿದ್ದರು, ಮುಂದಿನ ದಿನಗಳಲ್ಲಿ ನಾವು ಹೆಚ್ಚು ಹೆಚ್ಚು ಮರಗಳನ್ನು ನಡೋಣ, ಇದರಿಂದ ಮನುಷ್ಯರಿಗಳಲ್ಲದೆ ಪ್ರಾಣಿ ಪಕ್ಷಿಗಳಿಗೂ ಸಹಾಯವಾಗುತ್ತದೆ ಎಂದು ರೋಟರಿ ಕ್ಲಬ್ ಮಂಗಳೂರು ಇದರ ಮಾಜಿ ಅಧ್ಯಕ್ಷ ಡಾ| ನರೇಂದ್ರ ಕಾಮತ್ ಅಭಿಪ್ರಾಯಪಟ್ಟರು.

ಕುಂಪಲ ಕೇಸರಿ ಮಿತ್ರವೃಂದದಲ್ಲಿ ಮನೆ ಮನೆ ವೃಕ್ಷ ವನಮಹೋತ್ಸವಕ್ಕೆ ಚಾಲನೆ ನೀಡಲಾಯಿತು

ಕೇಸರಿ ಮಿತ್ರ ವೃಂದ ಸೇವಾ ಟ್ರಸ್ಟ್ , ಕೇಸರಿ ಮಾತೃ ಮಂಡಳಿ ಹಾಗೂ ರೋಟರಿ ಸಮುದಾಯ ದಳ ಕುಂಪಲ ಇದರ ಸಹಯೋಗದೊಂದಿಗೆ “ಮನೆ- ಮನೆ ವೃಕ್ಷ ವನಮಹೋತ್ಸವ” ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಆದಿತ್ಯವಾರ ಬೆಳಿಗ್ಗೆ ನಡೆಯಿತು.
ಕುಂಪಲ ಸರಕಾರಿ ಹಿರಿಯ ಪ್ರೌಢ ಶಾಲೆಯ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಯಾದವ್ ಕುಲಾಲ್, ಪ್ರಾಥಮಿಕ ಶಾಲೆಯ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ನವೀನ್ ಕುಜುಮಗದ್ದೆ, ಕೇಸರಿ ಮಾತೃ ಮಂಡಳಿ ಅಧ್ಯಕ್ಷೆ ಆಶಾ ಸುರೇಶ್, ಕೇಸರಿ ಮಿತ್ರ ವೃಂದ ಸೇವಾ ಟ್ರಸ್ಟ್ ಇದರ ಸ್ಥಾಪಕ ಅಧ್ಯಕ್ಷ ಬಿ.ನಾರಾಯಣ ಕುಂಪಲ, ಟ್ರಸ್ಟಿಗಳಾದ ವೆಂಕಟೇಶ್ ಕುಂಪಲ, ಭಗವಾನ್ ದಾಸ್ ಶೆಟ್ಟಿ, ಸುಧಾಕರ್ ಕುಂಪಲ ಮೊದಲಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಹಣ್ಣಿನ ಗಿಡಗಳನ್ನು ವಿತರಿಸಲಾಯಿತು. ಕುಂಪಲ ಆದಿಶಕ್ತಿ ದೇವಸ್ಥಾನದಲ್ಲಿ ವನಮಹೋತ್ಸವದ ಸಲುವಾಗಿ ಗಿಡಗಳನ್ನು ನಡಲಾಯಿತು.
ಕೇಸರಿ ಮಿತ್ರ ವೃಂದದ ಅಧ್ಯಕ್ಷ ಸಂದೀಪ್ ಕುಂಪಲ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿ, ಪ್ರಾಸ್ತವಿಕವಾಗಿ ಮಾತನಾಡಿ ವಂದಿಸಿದರು,

Exit mobile version