UN NEWS NETWORKS
ಉಳ್ಳಾಲ: ಪ್ರಸ್ತುತ ವರ್ಷದ ನಿಟ್ಟೆ ಡಾ. ಶಂಕರ್ ಅಡ್ಯಂತಾಯ ಸ್ಮಾರಕ ಪಿಯು ಕಾಲೇಜು ಫಲಿತಾಂಶ ನಿಟ್ಟೆ ಸಂಸ್ಥೆಯ ಗರಿಮೆಯನ್ನು ಹೆಚ್ಚಿಸಿದೆ. ಇದಕ್ಕೆ ಶ್ರಮಿಸಿದ ಕಾಲೇಜು ಪ್ರಾಂಶುಪಾಲರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯ ಶ್ರಮ ಶ್ಲಾಘನೀಯ ಎಂದು ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯದ ಸಹಕುಲಪತಿ ಡಾ| ಎಂ.ಎಸ್ ಮೂಡಿತ್ತಾಯ ಅಭಿಪ್ರಾಯಪಟ್ಟರು.
ಅವರು ದೇರಳಕಟ್ಟೆಯ ಕ್ಷೇಮ ಆಡಿಟೋರಿಯಂ ನಲ್ಲಿ ಶನಿವಾರ ನಡೆದ ನಿಟ್ಟೆ ಡಾ. ಎನ್ ಎಸ್ ಎ ಎಂ ಪಿಯು ಕಾಲೇಜಿನ ಸ್ಟೂಡೆಂಟ್ ಕೌನ್ಸಿಲ್ ಉದ್ಘಾಟನೆ ಹಾಗೂ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ನಿಸ್ವಾರ್ಥ, ಪ್ರತಿಫಲದಾಯಕ ಉಪನ್ಯಾಸಕರು ಅತ್ಯಂತ ಸಂತೋಷದಿಂದ ವಿದ್ಯಾರ್ಥಿಗಳ ಯಶಸ್ಸಿನತ್ತ ಪ್ರಯತ್ನಿಸುವರು. ಕಾಲೇಜಿನಲ್ಲಿ ಎಲ್ಲರೂ ತಂಡವಾಗಿ ದುಡಿದಾಗ ಸಂಸ್ಥೆಯ ನಿರ್ವಹಣೆಯೂ ಸುಗಮವಾಗುವುದು. ಔದ್ಯೋಗಿಕ ಕ್ಷೇತ್ರದಲ್ಲಿ ಉತ್ತಮವಾಗಿರಬೇಕು ಹಾಗೂ ತಮ್ಮೊಳಗಿರುವ ಪ್ರತಿಭೆಯನ್ನು ಹೊರತೆಗೆಯುವತ್ತ ನಿಟ್ಟೆ ಸಂಸ್ಥೆ ಜಾಗೃತವಾಗಿದೆ. ಇಂತಹ ಉದ್ದೇಶದಿಂದ ರಾಷ್ಟ್ರಮಟ್ಟದಲ್ಲಿ 150 ವಿಶ್ವವಿದ್ಯಾನಿಲಯಗಳ ಪೈಕಿ ನಿಟ್ಟೆ ಸಂಸ್ಥೆ 75ನೇ ಸ್ಥಾನವನ್ನು ಪಡೆದುಕೊಂಡಿದೆ. ಪೋಷಕರಲ್ಲಿ ಹೆಮ್ಮೆಯ ಭಾವನೆ ಮೂಡಿಸಬೇಕಾದ ವಿದ್ಯಾರ್ಥಿಗಳ ಮನಸ್ಥಿತಿಯಿಂದ ಸಾಮಾಜಿಕ ಸಮಸ್ಯೆಗಳನ್ನು ಬಗೆಹರಿಸುಬಹುದು. ಪ್ಲ್ಯಾನಿಂಗ್ ಮುಖ್ಯವಲ್ಲ ಅನುಷ್ಠಾನ ಮುಖ್ಯ ಎಂದರು.
ಕ್ಷೇಮ ವೈದ್ಯಕೀಯ ಅಕಾಡೆಮಿಯ ವೈಸ್ ಡೀನ್ ಡಾ| ಜಯಪ್ರಕಾಶ್ ಶೆಟ್ಟಿ ಕೆ. ಮಾತನಾಡಿ ಸಾಂಕ್ರಾಮಿಕ ನಡುವೆ ವಿದ್ಯಾರ್ಥಿಗಳು ಹಲವು ರೀತಿಯ ಕಷ್ಟ ಅನುಭವಿಸಿದರೂ, ಫಲಿತಾಂಶದಲ್ಲಿ ಉತ್ತಮ ದಾಖಲೆಯನ್ನು ನೀಡಿರುವುದು ಶ್ಲಾಘನಾರ್ಹ ಎಂದರು.
ಪ್ರಾಂಶುಪಾಲ ಡಾ.ನವೀನ್ ಶೆಟ್ಟಿ ಕೆ. , ಕಾಲೇಜು ಉಪಪ್ರಾಂಶುಪಾಲೆ ಪ್ರೊ.ಅನ್ನಪೂರ್ಣ ನಾಯ್ಕ್ , ಕಾರ್ಯಕ್ರಮ ಸಂಯೋಜಕಿ ವೀಣಾ ಉಳ್ಳಾಲ್, ಸ್ಟೂಡೆಂಟ್ ಕೌನ್ಸಿಲ್ ಅಧ್ಯಕ್ಷೆ ಪ್ರಣೀತಾ ಉಪಸ್ಥಿತರಿದ್ದರು.
ಉಪನ್ಯಾಸಕಿ ವಿಶ್ಮಿತಾ ಶೆಟ್ಟಿ ನಿರೂಪಿಸಿದರು. ಸುಮನ್ ಸ್ವಾಗತಿಸಿದರು. ಕಾರ್ಯದರ್ಶಿ ನೀಲಿಮಾ ಭಕ್ತಾ ವಂದಿಸಿದರು.