
UN NEWS NETWORKS
ಉಳ್ಳಾಲ: ತ್ಯಾಗ ಬಲಿದಾನದ ಹಬ್ಬ ಬಕ್ರೀದ್ ಪ್ರವಾದಿ ಇಬ್ರಾಹಿಂ ಅವರ ಹಜ್ ಹಾಗೂ ಬಲಿದಾನ ನೀಡಿದ್ದನ್ನು ಸ್ಮರಿಸುತ್ತದೆ. ಈ ಸಂದರ್ಭವನ್ನು ಎಲ್ಲರೂ ಸೌಹಾರ್ದಯುತವಾಗಿ ಆಚರಿಸಿ ಸಂತೋಷವನ್ನು ಹಂಚಿರಿ ಎಂದು ಉಳ್ಳಾಲ ಸೈಯ್ಯದ್ ಮದನಿ ದರ್ಗಾ ಸಮಿತಿ ಅಧ್ಯಕ್ಷ ಅಬ್ದುಲ್ ರಶೀದ್ ಹೇಳಿದರು.
ಬಕ್ರೀದ್ ಹಬ್ಬದ ಪ್ರಯುಕ್ತ ಉಳ್ಳಾಲದ ಕೇಂದ್ರ ಮಸೀದಿ ಸೈಯ್ಯದ್ ಮದನಿ ದರ್ಗಾದಲ್ಲಿ ನಡೆದ ಈದುಲ್ -ಅಧ್ಹಾ ನಮಾಝ್ ಹಾಗೂ ಖುತುಬಾ ಪಾರಾಯಣದಲ್ಲಿ ಪಾಲ್ಗೊಂಡ ಬಳಿಕ ಮಾತನಾಡಿದರು.
ಖುತುಬಾ ಪಾರಾಯಣ ಹಾಗೂ ದುಆ ಅನ್ನು ಅನ್ವರ್ ಆಲಿ ದಾರಿಮಿ ನೆರವೇರಿಸಿದರು. ಈ ಸಂದರ್ಭ ದರ್ಗಾ ಸಮಿತಿ ಸದಸ್ಯರುಗಳಾದ ಫಾರೂಕ್ ಉಳ್ಳಾಲ್, ಲತೀಫ್ ಮುಂತಾದವರು ಉಪಸ್ಥಿತರಿದ್ದರು.
