Site icon Ullalavani

ಭಗತ್‌ ಸಿಂಗ್‌ ಸೇವಾ ಪ್ರತಿಷ್ಠಾನದಿಂದ ತೊಕ್ಕೊಟಿನಲ್ಲಿ ವೃಕ್ಷ ತೋರಣ

UN NEWS NETWORKS
ಉಳ್ಳಾಲ: ಸಸ್ಯ ಸಂಕುಲ ಉಳಿದರೆ ಜಗತ್ತು ಉಳಿಯುತ್ತದೆ. ಇಂದಿನ ಪ್ರಕೃತಿಯ ಮುನಿಸಿಗೆ ಮನುಷ್ಯ ಪರಿಸರದ ಮೇಲೆ ನಡೆಸಿದ ಅನಾಚಾರ ಕಾರಣ. ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ನಡೆಸುತ್ತಿರುವ ಭಗತ್ ಸಿಂಗ್ ಸಂಸ್ಥೆಯ ಕಾರ್ಯ ಸಮಾಜಕ್ಕೆ ಮಾದರಿಯಾಗಿದೆ ಎಂದು ಅರಣ್ಯ ಇಲಾಖೆಯ ಡೆಪ್ಯೂಟಿ ರೇಂಜರ್ ಮಹಾಬಲ ಅಭಿಪ್ರಾಯ ಪಟ್ಟರು.

ತೊಕ್ಕೊಟ್ಟುವಿನಲ್ಲಿ ಭಗತ್‌ ಸಿಂಗ್‌ ಸೇವಾ ಪ್ರತಿಷ್ಠಾನದ ವತಿಯಿಂದ ವೃಕ್ಷ ತೋರಣ ಭಾನುವಾರ ನಡೆಯಿತು.

ಅವರು ಭಗತ್ ಸಿಂಗ್ ಸೇವಾ ಪ್ರತಿಷ್ಠಾನದ ವತಿಯಿಂದ ಅರಣ್ಯ ಇಲಾಖೆಯ ಸಹಭಾಗಿತ್ವದಲ್ಲಿ ತೊಕ್ಕೊಟಿನಲ್ಲಿ ನಡೆದ ವೃಕ್ಷ ತೋರಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯರಾದ ಕೆ.ಟಿ.ಸುವರ್ಣ, ಶ್ರೀ ಮಲರಾಯ ದೇವಸ್ಥಾನದ ಅರ್ಚಕರಾದ ಲತೀಶ ಯಾನೆ ಮುಂಡ ಪೂಜಾರಿ, ಧರ್ಮಸ್ಥಳ ಸ್ವ ಸಹಾಯ ಸಂಘದ ಜಯಂತಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಧನಲಕ್ಷ್ಮೀ ಗಟ್ಟಿ, ಉಳ್ಳಾಲಗುತ್ತು ಮಲರಾಯ ಬಂಟ ಚಾವಡಿಯ ಪ್ರಮುಖರಾದ ಬಾಲಕೃಷ್ಣ ಶೆಟ್ಟಿ, ತುಳುನಾಡ ರಕ್ಷಣ ವೇದಿಕೆಯ ಸ್ಥಾಪಕಧ್ಯಕ್ಷ ಯೋಗೀಶ್ ಶೆಟ್ಟಿ, ಭಗವತೀ ಸಹಕಾರಿ ಬ್ಯಾಂಕಿನ ನಿರ್ದೇಶಕರಾದ ಹರೀಶ್ , ಮುನ್ನೂರು ಯುವಕ ಮಂಡಲದ ಟ್ರಸ್ಟೀ ಹರೀಶ್ ಮುಂಡೋಳಿ ಉಪಸ್ಥಿತರಿದ್ದರು.
ಪ್ರತಿಷ್ಠಾನದ ಅಧ್ಯಕ್ಷ ಜೀವನ್ ಕುಮಾರ್ ತೊಕ್ಕೊಟು ಪ್ರಾಸ್ತಾವಿಕ ವಾಗಿ ಮಾತನಾಡಿದರು, ಉಪಾಧ್ಯಕ್ಷರಾದ ಪ್ರವೀಣ್ ಬಸ್ತಿ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಗಣೇಶ್ ಕಾಪಿಕಾಡ್ ವಂದಿಸಿದರು. ಈ ಸಂದರ್ಭ ಪರಿಸರ ಪ್ರೇಮಿ, ಪ್ರತಿಷ್ಠಾನದ ಉಪಾಧ್ಯಕ್ಷರಾದ ಮಾಧವ ಉಳ್ಳಾಲ ರವರನ್ನು ಅಭಿನಂದಿಸಲಾಯಿತು.

Exit mobile version