Site icon Ullalavani

ವಕ್ಪ್ ಬೋರ್ಡ್ ನ ಉಪಾಧ್ಯಕ್ಷರಾಗಿ ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ ಆಯ್ಕೆ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಕಲ್ಕಟ್ಟ :ವಕ್ಪ್ ಬೋರ್ಡ್ ಉಡುಪಿ ಜಿಲ್ಲೆಯ ಉಪಾಧ್ಯಕ್ಷರಾಗಿ ಅಯ್ಕೆಗೊಂಡ ಮಂಜನಾಡಿಯ ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ ಅವರನ್ನು ಕಲ್ಕಟ್ಟ ಇಲ್ಯಾಸ್ ಜುಮಾ ಮಸೀದಿಯಲ್ಲಿ ಎಸ್ಸೆಸ್ಸೆಫ್, ತಕ್ವುವತುಲ್ ಇಸ್ಲಾಂ ಮತ್ತು ಕಲ್ಕಟ್ಟ ನಾಗರೀಕರು ಸೇರಿ ಸನ್ಮಾನಿಸಿದರು.

ಸರ್ಫುದ್ದೀನ್ ತಂಙಳ್ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಖತೀಬ್ ಮುಹಮ್ಮದ್ ಹನೀಫ್ ಸಖಾಫಿ ಅಧ್ಯಕ್ಷತೆ ವಹಿಸಿದ್ದರು.

ಸಿನಾನ್ ಹನೀಫಿ, ಮಸೀದಿಯ ಉಪಾಧ್ಯಕ್ಷ ಮಹಮ್ಮದ್ ಕಂಡಿಕ, ಮೊೈದಿನ್ ಕುಂಞ ಕಲ್ಕಟ್ಟ, ಎಸ್‍ವೈಎಸ್ ಅಧ್ಯಕ್ಷ ಮೋನು ಕಲ್ಕಟ್ಟ, ಅಬ್ಬಾಸ್ ಮದನಿ, ಮುಹಮ್ಮದ್ ಮದನಿ, ಹಸೈನಾರ್ ತಟ್ಲ, ಎಸ್ಸೆಸ್ಸೆಫ್ ಅಧ್ಯಕ್ಷ ಕೆ.ಐ. ಅಬ್ದುಲ್ ರಝಾಕ್, ನಿಸಾರ್ ಸಖಾಫಿ, ಹಬೀಬ್ ಅಹ್ಸನಿ ಉಪಸ್ಥಿತರಿದರು.
ಎಸ್‍ವೈಎಸ್ ಮುಖಂಡ ಕೆ.ಎಚ್.ಇಬ್ರಾಹಿಂ ಮದನಿ ಕಾರ್ಯಕ್ರಮ ನಿರೂಪಿಸಿದರು.

Exit mobile version