Site icon Ullalavani

ಕೋಟೆಕಾರು ಪ.ಪಂ ನಾಳೆ ಚುನಾವಣೆ ಆರನೇ ವಾರ್ಡಿನಲ್ಲಿ ಗಲಾಟೆ ಸಂಭವ

UN networks

ಉಳ್ಳಾಲ: ಕೋಟೆಕಾರು ಪಟ್ಟಣ ಪಂಚಾಯಿತಿ ಆಡಳಿತಕ್ಕೆ ನಾಳೆ ಮತದಾನ ನಡೆಯಲಿದ್ದು, ಮತದಾನ ನಡೆಯುವ ಆರನೇ ವಾರ್ಡಿನಲ್ಲಿ ಗಲಾಟೆ ನಡೆಯುವ ಸಂಭವ ಇದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ಖಾಸಗಿ ಕಾಲೇಜುಗಳಲ್ಲಿ ಕಲಿಯುತ್ತಿರುವ ಕೇರಳ ಹಾಗೂ ಇತರೆ ರಾಜ್ಯದ ವಿದ್ಯಾರ್ಥಿಗಳನ್ನು ಮತದಾರ ಪಟ್ಟಿಯಲ್ಲಿ ಸೇರ್ಪಡೆ ಮಾಡಲಾಗಿದ್ದು, ಅವರೇ ಮತಗಟ್ಟೆಗೆ ಬಂದು ಮತ ಹಾಕಲು ಯತ್ನಿಸಿದಲ್ಲಿ ಹಲ್ಲೆ ನಡೆಯುವ ಸಾಧ್ಯತೆಗಳಿವೆ ಅನ್ನುವ ಚರ್ಚೆಗಳು ನಡೆಯುತ್ತಿದೆ. ಮತದಾರರ ಪಟ್ಟಿಯಲ್ಲಿ ಕೇರಳದ ವಿದ್ಯಾರ್ಥಿಗಳನ್ನು ದಾಖಲಿಸಿರುವ ಕುರಿತು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ದೂರಿಗೆ ಪ್ರತಿಯಾಗಿ ಚುನಾವಣಾಧಿಕಾರಿ ಜಿಲ್ಲಾಧಿಕಾರಿಗಳಿಗೆ ತನಿಖೆ ನಡೆಸುವಂತೆ ಆದೇಶಿಸಿತ್ತು. ಅದರಂತೆ ಜಿಲ್ಲಾಧಿಕಾರಿಗಳು ಸಹಾಯಕ ಆಯುಕ್ತರಿಗೆ, ತಹಸೀಲ್ದಾರ್ ಅವರಿಗೆ ಸೂಕ್ತ ಕ್ರಮಕೈಗೊಳ್ಳುವಂತೆ ಸೂಚಿಸಿದ್ದರೂ, ಈವರೆಗೆ ತಾಲೂಕಾಡಳಿತ ಯಾವುದೇ ಕ್ರಮ ಕೈಗೊಳ್ಳದೆ ವಿಫಲವಾಗಿದೆ. ಇದರಿಂದಾಗಿ ಚುನಾವಣೆ ವೇಳೆ ಮತಗಟ್ಟೆಯಲ್ಲಿ ನಡೆಯುವ ಗೊಂದಲಗಳಿಗೆ ತಾಲೂಕಾಡಳಿತವೇ ನೇರ ಹೊಣೆಯಾಗಲಿದೆ ಅನ್ನುವ ಆರೋಪಗಳು ಕೇಳಿಬರುತ್ತಿದೆ.

ಜಿಲ್ಲಾಧಿಕಾರಿ , ಈ ಕೂಡಲೇ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಂಡಿರುವ ವಿದ್ಯಾರ್ಥಿಗಳಿರುವ ಶಿಕ್ಷಣ ಸಂಸ್ಥೆಗಳ ಜೊತೆಹೆ ಮಾತುಕತೆ ನಡೆಸಿ ಗೊಂದಲ ಪರಿಹರಿಸಬೇಕಾಗಿದೆ.

Exit mobile version