UN networks
ಮಂಗಳಗಂಗೋತ್ರಿ: ಮಂಗಳೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗದ ವತಿಯಿಂದ ಪ್ರಕಟಿಸಲಾದ ‘ನುಡಿಕನ್ನಡ, ಕನ್ನಡೇತರರಿಗೆ ಕನ್ನಡ’ ಪಠ್ಯ ಪುಸ್ತಕದ ಬಿಡುಗಡೆ ಕಾರ್ಯಕ್ರಮವು ಬುಧವಾರ ಮಂಗಳೂರು ವಿವಿಯ ಸಿಂಡಿಕೇಟ್ ಸಭಾಂಗಣದಲ್ಲಿ ನಡೆಯಿತು.
ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಮಂಗಳೂರು ವಿಶ್ವವಿದ್ಯಾನಿಲಯದ ಪೆÇ್ರ|ಪಿ.ಎಸ್.ಯಡಪಡಿತ್ತಾಯ ಅವರು, ಮಂಗಳೂರು ವಿವಿಯ ಪ್ರಸಾರಾಂಗದ ವತಿಯಿಂದ ಪ್ರಕಟಿಸಲಾಗಿರುವ ನುಡಿಕನ್ನಡ ಪುಸ್ತಕವು ಕನ್ನಡೇತರರಿಗೂ ಅತ್ಯಂತ ಸುಲಭವಾಗಿ ಕನ್ನಡ ಕಲಿಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಇದರಲ್ಲಿ ಅಕ್ಷರಗಳ ಪರಿಚಯ, ವ್ಯಂಜನಗಳು, ಕಾಗುಣಿತ, ಒತ್ತಕ್ಷರಗಳು, ಪದಸಂಪತ್ತು, ಸರ್ವನಾಮಗಳು ಹಾಗೂ ಸಾಮಾನ್ಯವಾಗಿ ಜನಬಳಕೆಯ ಪದಗಳ ಬಗ್ಗೆ ಬಹಳ ಅತ್ಯುತ್ತಮವಾದ ಮಾಹಿತಿಯನ್ನು ಈ ಪುಸ್ತಕವು ಒದಗಿಸುತ್ತದೆ. ಇದು ವಿದ್ಯಾರ್ಥಿಗಳಿಗೆ ಬಹಳಷ್ಟು ಅನುಕೂಲತೆಯನ್ನು ಒದಗಿಸಿಕೊಡಲಿದೆ ಎಂದರು.
ಮಂಗಳೂರು ವಿವಿ ಕುಲಸಚಿವ ಡಾ| ಕಿಶೋರ್ ಕುಮಾರ್ ಸಿ.ಕೆ ಅವರು ಕೃತಿ ರಚನೆಯ ಅಧ್ಯಯನ ಮಂಡಳಿ ಹಾಗೂ ಸಂಪಾದಕ ಮಂಡಳಿ ಸದಸ್ಯರ ಕಾರ್ಯವನ್ನು ಶ್ಲಾಘಿಸಿದರು.
ಕಾರ್ಯನಿರ್ವಾಹಕ ಸಂಪಾದಕರಾದ ಡಾ| ಮಾಧವ ಎಂ ಕೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಪ್ರಸಾರಾಂಗದ ನಿರ್ದೇಶಕ ಪೆÇ್ರ| ಸೋಮಣ್ಣ ಸ್ವಾಗತಿಸಿದರು. ಪೆÇ್ರ| ಪ್ರಶಾಂತ್ ನಾಯ್ಕ ಅವರು ವಂದಿಸಿದರು. ಪ್ರಸಾರಾಂಗದ ಸಿಬ್ಬಂದಿಗಳಾದ ಭರತ್ ವಿ.ಜೆ ಹಾಗೂ ಜೆಸ್ಸಿ ಮೇರಿ ಡಿ ಸೋಜಾ ಉಪಸ್ಥಿತರಿದ್ದರು.
