Site icon Ullalavani

ಹೃದಯಾಘಾತದಿಂದ ಅಪಘಾತ ರಿಕ್ಷಾ ಚಾಲಕ ಮೃತ್ಯು:ಮಾನವೀಯತೆ ಮೆರೆದ ಆಂಬ್ಯುಲೆನ್ಸ್ ಚಾಲಕ

UN networks

ಉಳ್ಳಾಲ: ಅಪಘಾತಕ್ಕೀಡಾದ ರಿಕ್ಷಾ ಚಾಲಕ ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿರುವ ಘಟನೆ ರಾ.ಹೆ 66 ರ ನೇತ್ರಾವತಿ ಸೇತುವೆಯಲ್ಲಿ ನಡೆದಿದೆ. ರಿಕ್ಷಾ ಹಿಂಬದಿಯಿದ್ದ ಆಂಬ್ಯುಲೆನ್ಸ್ ಚಾಲಕ ಮಾನವೀಯತೆ ಮೆರೆದು ರಿಕ್ಷಾ ಚಾಲಕನ ಪ್ರಾಥಮಿಕ ಚಿಕಿತ್ಸೆಗೆ ನೀಡಲು ಯತ್ನಿಸಿ ಆಸ್ಪತ್ರೆಗೆ ದಾಖಲಿಸಿದರೂ ಫಲಕಾರಿಯಾಗಲಿಲ್ಲ.


ಮೊಹಮ್ಮದ್ ಹನೀಫ್(40) ಮೃತರು. ಮಂಗಳೂರು ನಗರದಿಂದ ಕಲ್ಲಾಪು ಗ್ಲೋಬಲ್ ಮಾರುಕಟ್ಟೆಗೆ ತರಕಾರಿ ಖರೀದಿಸಲೆಂದು ಇಂದು ನಸುಕಿನಲ್ಲಿ ವ್ಯಾಪಾರಿಯೋರ್ವರನ್ನು ಕರೆತರುತ್ತಿದ್ದ ವೇಳೆ ಹೃದಯಾಘಾತ ಸಂಭವಿಸಿದೆ. ಮಂಗಳೂರಿನಿಂದ ಜಪ್ಪಿನ ಮೊಗರು ಹೆದ್ದಾರಿಯಲ್ಲೇ ಚಾಲಕನಿಗೆ ಕಣ್ಣು ಮಂಜಾಗಿದ್ದು ರಸ್ತೆ ಮಧ್ಯದ ವಿಭಜಕಕ್ಕೆ ಡಿಕ್ಕಿ ಹೊಡೆದಿದ್ದರು. ಈ ವೇಳೆ ಆಂಬ್ಯುಲೆನ್ಸ್ ಚಾಲಕ ಕಣ್ಣೂರು ಮಟ್ಟನ್ನೂರಿನ ಟೀಂ ಎಇಟಿ ಗೆ ಸೇರಿದ ಆಂಬ್ಯುಲೆನ್ಸ್ ಚಾಲಕ ಆಕಾಶ್ ವಿಜಯನ್ ಪ್ರಾಥಮಿಕ ಚಿಕಿತ್ಸೆ ನೀಡಿದ್ದರು. ಅಲ್ಲಿಂದ ಮತ್ತೆ ಚಾಲಕ ಎದುರು ಹೋಗುತ್ತಿದ್ದಂತೆ ಹೃದಯಾಘಾತಕ್ಕೆ ಒಳಗಾಗಿದ್ದಾರೆ. ಕೂಡಲೇ ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಲಾಯಿತಾದರೂ , ಅದಾಗಲೇ ಮೃತಪಟ್ಟಿದ್ದಾರೆ.

Exit mobile version