ಉಳ್ಳಾಲ: ಸಮಾಜದಲ್ಲಿರುವ ಕಟ್ಟಕಡೆಯ ವ್ಯಕ್ತಿಗಳನ್ನು ಗುರುತಿಸಿ ಸಹಾಯ ಮಾಡುವ ಕಾರ್ಯ ದ.ಕ ಗ್ಯಾರೇಜ್ ಮಾಲಕರ ಸಂಘದಿಂದ ಆಗಿದೆ. ಗ್ಯಾರೇಜ್ ವ್ಯವಹಾರ ಎಂದಲ್ಲಿ ಅಭಿವೃದ್ಧಿ ಹೊಂದುವ ಕ್ಷೇತ್ರ ಮುಂದಿನ ದಿನಗಳಲ್ಲಿ ಎಲೆಕ್ಟ್ರಾನಿಕ್ ವಾಹನಗಳ ಸವಾಲುಗಳು ಎದುರಾಗಲಿದೆ. ಅದರ ದುರಸ್ತಿ ತರಬೇತಿಯನ್ನು ಗ್ಯಾರೇಜ್ ಸಿಬ್ಬಂದಿಗೆ ನೀಡುವ ಕಾರ್ಯವಾಗಬೇಕಿದೆ ಎಂದು ಕಾಂಚನಾ ಮೋಟರ್ಸ್ ಸಂಸ್ಥೆ ಮಾಲೀಕ ಪ್ರಸಾದ್ ಕಾಂಚನ್ ಹೇಳಿದರು.
ಅವರು ದಕ್ಷಿಣ ಕನ್ನಡ ಗ್ಯಾರೇಜ್ ಮಾಲಕರ ಸಂಘ ಮಂಗಳೂರು ( ದ.ಕ ಮತ್ತು ಉಡುಪಿ ಜಿಲ್ಲೆ) ವತಿಯಿಂದ ಕಡೆಮೊಗರು ಸಂಘದ ಸಭಾಭವನದಲ್ಲಿ ಜರಗಿದ ವಾರ್ಷಿಕ ಮಹಾಸಭೆ-2020-21 ಕ್ಕೆ ಚಾಲನೆ ನೀಡಿ ಮಾತನಾಡಿದರು.
900 ಗ್ಯಾರೇಜ್ ಮಾಲಕರನ್ನು ಹೊಂದಿರುವ ಸಂಘ ರಾಜ್ಯಕ್ಕೆ ಮಾದರಿ. ದ.ಕ ಜನತೆಯಲ್ಲಿ ಶಿಸ್ತನ್ನು ತೋರಿಸಿದ ಗ್ಯಾರೇಜ್ ಮಾಲಕರ ಸಂಘ,ಕೋವಿಡ್ ಸಂಧಿಗ್ಧ ಸಂದರ್ಭ ಮೂರು ವರ್ಷಗಳಿಂದ ಸ್ಪೇರ್ ಪಾಟ್9 ಪೂರೈಕೆಯಲ್ಲಿ ಕೊರತೆಯಾಗಿದೆ. ಜನವರಿ ತಿಂಗಳಿನಲ್ಲಿ ಎಲ್ಲವೂ ಹಿಂದಿನಂತೆ ಆಗುವ ವಿಶ್ವಾಸವಿದೆ. ಗ್ಯಾರೇಜ್ ಮಾಲೀಕರು ಈ ಸಂದರ್ಭ ಸಹಕರಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು (ದ.ಕ ಮತ್ತು ಉಡುಪಿ ಜಿಲ್ಲೆ) ಗ್ಯಾರೇಜ್ ಮ್ಹಾಲಕರ ಸಂಘದ ಅಧ್ಯಕ್ಷ ದಿನೇಶ್ ಕುಮಾರ್ ವಹಿಸಿದ್ದರು.
ಮಾಸ್ಟರ್ ಕೀ ಸಂಸ್ಥೆ ಮಾಲೀಕ ವಿನ್ಸೆಂಟ್ ಲೋಬೋ, ಮಂಗಳಾದೇವಿ ಸ್ಪೇರ್ ಪಾಟ್ರ್ಸ್ ಮಾಲೀಕ ಸಂತೋಷ್ ರಾವ್, ಗೋಲ್ಡನ್ ಆಯಿಲ್ ನ ರಾಜೇಶ್, ಜಿಲ್ಲಾ ಸಂಘದ ಅಧ್ಯಕ್ಷ ದಿನೇಶ್ ಕುಮಾರ್, ಸಂಘದ ಸ್ಥಾಪಕ ಕಾರ್ಯದರ್ಶಿ ಚೇರ್ ಮೆನ್ ಜನಾರ್ಧನ ಎ. ಅತ್ತಾವರ, ಕೋಶಾಧಿಕಾರಿ ಕೆ.ಎ ರಾಜಗೋಪಾಲ್ , ಹಿರಿಯ ನಿರ್ದೇಶಕರುಗಳಾದ ನಿರ್ದೇಶಕರುಗಳಾದ ಯಂ. ರುಕ್ಮಯ್ಯ ಗೌಡ, ದಿವಾಕರ್ ಯಂ., ಪುಂಡಲೀಕ ಸುವರ್ಣ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಂಗಳೂರು ಆಟೋ ಇಲೆಕ್ಟ್ರಿಕಲ್ಸ್ ಮಾಲೀಕ ಎಮ್.ಗಿರೀಶ್ ಕುಮಾರ್ ಅವರಿಗೆ ಸೇವಾ ರತ್ನ ಪ್ರಶಸ್ತಿ ಹಾಗೂ ಕೋಶಾಧಿಕಾರಿ ಗೋಪಾಲ್ ಅವರಿಗೆ ಸಮಾಜರತ್ನ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು.
ಇದೇ ವೇಳೆ ಸಂಘದ ಸದಸ್ಯರ ಪಿಯುಸಿ ಹಾಗೂ ಎಸ್ ಎಸ್ ಎಲ್ ಸಿ ಪರೀಕ್ಷೆಗಳಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಚೇರ್ ಮೆನ್ ಜನಾರ್ದನ ಸ್ವಾಗತಿಸಿದರು. ಪ್ರವೀಣ್ ಮೂಡುಶೆಡ್ಡೆ ನಿರೂಪಿಸಿದರು. ಪುರುಷೋತ್ತಮ್ ಕಮಿಲ ವಂದಿಸಿದರು.
`ಉಭಯ ಜಿಲ್ಲೆಗಳಲ್ಲಿ ಸಮಾವೇಶ ನಡೆಸಲು ಉದ್ದೇಶಿಸಲಾಗಿದೆ. ಗ್ಯಾರೇಜ್ ಮಾಲಕರ ಇತಿಹಾಸದಲ್ಲೇ ಮೊದಲ ಬಾರಿಗೆ ಸಮಾವೇಶ ನಡೆಸಲು ತೀರ್ಮಾನಿಸಲಾಗಿದೆ. ಒಂದು ದಿನ ಗ್ಯಾರೇಜ್ ಇಲ್ಲವೆಂದಾದಲ್ಲಿ ಮೆಕ್ಯಾನಿಕ್ ಗಳ ಬೆಲೆ ಅರ್ಥವಾಗುವುದು’
ಜನಾರ್ಧನ
ಸ್ಥಾಪಕ ಕಾರ್ಯದರ್ಶಿ
ಬಿಳಿ ವಸ್ತ್ರ ಹಾಕಲು ಬಟ್ಟೆಯಲ್ಲಿ ಮಡ್ಡಿ ಹೊತ್ತ ಅಪ್ಪನೇ ಕಾರಣ!
ಪಿಯುಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅಜ್ಮೀನ್ ಭಾನು ಎಂಬ ವಿದ್ಯಾರ್ಥಿನಿ ` ಇಂದು ನಾನು ಬಿಳಿ ವಸ್ತ್ರ ಹಾಕಿ ವೇದಿಕೆಯಲ್ಲಿದ್ದೇನೆ ಎಂದರೆ ಅದಕ್ಕೆ ರಾತ್ರಿ ಹಗಲು ಬಟ್ಟೆ ಪೂರ್ತಿ ಮಡ್ಡಿ ತೊಟ್ಟು ಕೆಲಸ ಮಾಡುವ ಅಪ್ಪನೇ ಕಾರಣ ಎಂದು ಬಾವುಕಳಾಗಿ ನುಡಿದರು. ಅಜ್ಞಾನದಿಂದ ಜ್ಞಾನದ ಕಡೆಗೆ ಹೋಗುವ ವಿದ್ಯಾರ್ಥಿಗಳಿಗೆ ಗ್ಯಾರೇಜ್ ಮಾಲಕರ ಸಂಘ ಆತ್ಮವಿಶ್ವಾಸವಾಗಿ ನಿಂತಿದೆ. ತರಗತಿಯಲ್ಲಿ ಇತರೆ ವಿದ್ಯಾರ್ಥಿಗಳು ವೈದ್ಯ, ಇಂಜಿನಿಯರ್ ಅವರ ಪುತ್ರಿ ಎಂದು ಹೇಳುವಾಗ ತಾನು ಹೆಮ್ಮೆಯಿಂದ ಮೆಕ್ಯಾನಿಕ್ ಅವರ ಪುತ್ರಿಯೆಂದು ಗಟ್ಟಿಯಾಗಿ ಹೇಳುತ್ತಿದ್ದೆ. ಉತ್ತಮ ಭವಿಷ್ಯ ರೂಪಿಸಲು ನಾಯಕರ ಅಗತ್ಯ, ಈ ನಿಟ್ಟಿನಲ್ಲಿ ಸಂಘ ನಮ್ಮಂತಹ ವಿದ್ಯಾರ್ಥಿಗಳಿಗೆ ನಾಯಕನಾಗಿದೆ ಎಂದರು.
