Site icon Ullalavani

ಸೋಮೇಶ್ವರ ಬೀಚ್ ಪ್ಲಾಸ್ಟಿಕ್ ಎಸೆದ ಯುವತಿಯರಿಗೆ ರೂ. 500 ದಂಡ

UN networks

ಸೋಮೇಶ್ವರ :ಸೋಮೇಶ್ವರ ಸಮುದ್ರ ತೀರದಲ್ಲಿ ಪ್ಲಾಸ್ಟಿಕ್ ಎಸೆದ ಪ್ರವಾಸಿ ಯುವತಿಯರಿಗೆ ಸೋಮೇಶ್ವರ ಪುರಸಭೆ ವತಿಯಿಂದ ರೂ. 500 ದಂಡ ವಿಧಿಸಲಾಯಿತು.

ಸಮುದ್ರ ತೀರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದು, ಸಮುದ್ರ ತೀರದಲ್ಲಿ ಪ್ಲಾಸ್ಟಿಕ್ ತ್ಯಾಜ್ಯವೂ ಹೆಚ್ಚಾಗಿ ಕಂಡುಬಂದಿತ್ತು. ಈ ಕುರಿತು ಸೋಮೇಶ್ವರ ಪುರಸಭೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ವಿವಿದ ಸಂಘ ಸಂಸ್ಥೆಗಳ ನೇತ್ರತ್ವದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಸಿ 1 ಟನ್ ನಷ್ಟು ಪ್ಲಾಸ್ಟಿಕ್ ಸಂಗ್ರಹಿಸಿತ್ತು. ಅಲ್ಲದೆ ಸ್ಥಳದಲ್ಲಿ ಪ್ಲಾಸ್ಟಿಕ್ ಹಾಕದಂತೆ ಎಚ್ಚರಿಸಿ ನಾಮಫಲಕವನ್ನು ಹಾಕಲಾಗಿತ್ತು. ಆದರೂ ಪ್ರವಾಸಿಗರು ಪ್ಲಾಸ್ಟಿಕ್ ಹಾಕಿದ ಹಿನ್ನೆಲೆಯಲ್ಲಿ ಪ್ರವಾಸಿಗರಿಗೆ ರೂ.500 ದಂಡ ವಿಧಿಸಿ, ಸ್ಥಳದಲ್ಲಿ ಕಾರ್ಯಾಚರಿಸುತ್ತಿರುವ ಅಂಗಡಿ ಮಾಲೀಕರಿಗೆ ನೋಟೀಸು ನೀಡಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ವಾಣಿ ಆಳ್ವ ತಿಳಿಸಿದ್ದಾರೆ.

Exit mobile version