Site icon Ullalavani

ದೌರ್ಜನ್ಯಕ್ಕೊಳಗಾದ ಹಿಂದೂಗಳಿಗೆ ಸಂಘಟನೆಗಳು ಮೊದಲು ಸ್ಪಂಧಿಸಲಿ: ಈಶ್ವರ್ ಉಳ್ಳಾಲ್

ಉಳ್ಳಾಲ್ ನ್ಯೂಸ್ ಡೆಸ್ಕ್

ಉಳ್ಳಾಲ: ಹಿಂದೂ ಸಂಘಟನೆಗಳು ಹಿಂದೂಗಳಿಗೆ ಆದ ಅನ್ಯಾಯದ ವಿರುದ್ಧ ಮೊದಲು ದೂರು ನೀಡಲಿ. ಚುನಾವಣಾ ಅಜೆಂಡಾವನ್ನು ಮುಂದಿಟ್ಟುಕೊಂಡು ಯಾವುದೇ ಮತಕ್ಕೆ ಸೀಮಿತವಾಗಿರದ ಸಚಿವ ಖಾದರ್ ವಿರುದ್ಧ ಪ್ರತಿಭಟನೆ ನಡೆಸುವುದರಿಂದ ಹಿಂದೂ ಸಮಾಜಕ್ಕೆ ಏನನ್ನು ಕೊಡಲು ಸಾಧ್ಯವಿಲ್ಲ ಎಂದು  ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈಶ್ವರ್ ಉಳ್ಳಾಲ್ ಹೇಳಿದ್ದಾರೆ. ಅವರು ಹಿಂದೂ ಸಂಘಟನೆಗಳ ಪ್ರತಿಭಟನೆ ವಿರೋಧಿಸಿ ತೊಕ್ಕೊಟ್ಟು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಕರೆದ ಸುದ್ಧಿಗೋಷ್ಟಿಯಲ್ಲಿ ಭಾಗವಹಿಸಿ ಮಾತನಾಡಿದರು.
ಉಳ್ಳಾಲ ಠಾಣಾ ವ್ಯಾಫ್ತಿಯಲ್ಲಿ ಹಿಂದುಗಳಿಗೆ ಆದ ಅನ್ಯಾಯದ ವಿರುದ್ಧ ದೂರು ನೀಡಲು ಮುಂದಾಗುತ್ತಿಲ್ಲ. ಆರೋಪಿಗಳ ಜತೆಗೆ ಅವರೂ ಶಾಮೀಲಾಗಿರುವುದು ಈ ಮೂಲಕ ತಿಳಿಯಬೇಕಾಗಿದೆ.
ಟಾಗರ್ೆಟ್ ಪ್ರಕರಣದಲ್ಲಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಯೆನೆಪೋಯ ವೈದ್ಯರು ಯುವತಿಗೆ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಹಿಂದೂ ಸಂಘಟನೆಯವರೇ ಹಣ ಪಡೆದುಕೊಂಡು ಪ್ರಕರಣವನ್ನು ರಾಜಿಯಲ್ಲಿ ಮುಗಿಸಿದ್ದಾರೆ. ಖಾದರ್ ಯಾವುದೇ ಮತಕ್ಕೆ ಸೀಮಿತವಾದ ಜನ ಅಲ್ಲ. ಅವರ ಹೆಸರಿನಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಮೂಲಕ ಹಿಂದು ಮುಸ್ಲಿಂ ಸಾಮರಸ್ಯಕ್ಕೆ ಕುಂದು ತರುವ ಪ್ರಯತ್ನ ಹಿಂದು ಸಂಘಟನೆಗಳು ಮಾಡುತ್ತಿದೆ. ಬಿಜೆಪಿ ಸರಕಾರವಿದ್ದಾಗಲೂ ಗೋಸಾಗಾಟ, ಅಕ್ರಮ ಕಸಾಯಿಖಾನೆಗಳು ಕಾರ್ಯಾಚರಿಸುತ್ತಿತ್ತು. ಅವರೂ ಅದರಲ್ಲಿ ಶಾಮೀಲಾಗಿದ್ದರು ಎಂಬುದು ಇದಕ್ಕೆ ಸ್ಪಷ್ಟ ನಿದರ್ಶನ. ಹಿಂದೂ ವಿರೋಧಿ ಅನ್ನುವ ಸಚಿವರು ಉಳ್ಳಾಲದ ಶ್ರೀ ಚೀರುಂಭ ಭಗವತಿ ಕ್ಷೇತ್ರಕ್ಕೆ ರೂ. 30 ಲಕ್ಷ , ಕೊಲ್ಯ ಕುಲಾಲ ಭವನಕ್ಕೆ ರೂ.30 ಲಕ್ಷ, ಗಟ್ಟಿ ಸಮಾಜ ಭವನಕ್ಕೆ ರೂ. 25 ಲಕ್ಷ , ಇರಾ ಕಲ್ಲಾಡಿ ದೈವಸ್ಥಾನಕ್ಕೆ 15 ಲಕ್ಷ, ಉಳ್ಳಾಲ ಗಾಣಿಗ ಸಮಾಜಕ್ಕೆ ರೂ. 30 ಲಕ್ಷ, ಬಿಲ್ಲವ ಸಮಾಜ ಗ್ರಾಮಚಾವಡಿಗೆ ರೂ.98 ಲಕ್ಷ, ಕಾಪಿಕಾಡು ಕುದ್ಮುಲ್ ರಂಗರಾವ್ ಸಭಾಭವನಕ್ಕೆ ರೂ. 40 ಲಕ್ಷ ಅನುದಾನವನ್ನು ನೀಡಿದ್ದಾರೆ. ಅಲ್ಲದೆ ಉಳ್ಳಾಲದಲ್ಲಿ ಚೂರಿ ಇರಿತಕ್ಕೊಳಗಾಗಿ ಕಿಡ್ನಿಗೆ ಗಾಯಗೊಂಡ ಅಭಿಷೇಕ್ ಎಂಬ ಯುವಕನಿಗೆ ರೂ. 35,000 ಚಿಕಿತ್ಸಾ ವೆಚ್ಚವನ್ನು ನೀಡಿದ್ದಾರೆ. ಅದೇ ಬಿಜೆಪಿ ಸರಕಾರದವರು ಕ್ಷೇತ್ರ ವ್ಯಾಪ್ತಿಯಲ್ಲಿ ಹಿಂದೂಗಳಿಗೆ ಇಷ್ಟೊಂದು ಅನುದಾನ ಅಥವಾ ದೌರ್ಜನ್ಯಕ್ಕೊಳಗಾದವರಿಗೆ ಸ್ಪಂಧಿಸಿರುವುದನ್ನು ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು.
ಕಳ್ಳರೊಂದಿಗೆ ಶಾಮೀಲಾಗಿರುವ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸಲು ಹಿಂಜರಿಯುತ್ತಿರುವ ಬಿಜೆಪಿಯವರು , ಸಚಿವರ ವಿರುದ್ಧ ನಡೆಸುತ್ತಿದ್ದಾರೆ. ಸಾಧ್ಯವಿದ್ದರೆ ಕೇಂದ್ರ ಸರಕಾರ ಗೋಹತ್ಯೆ ನಿಷೇಧ ಕಾಯ್ದೆಯನ್ನು ಜಾರಿ ಮಾಡಲಿ ಎಂದರು.
ಈ ಸಂದರ್ಭ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಕ್ಷೇತ್ರ ಕಾರ್ಯದಶರ್ಿ ಅಬ್ದುಲ್ ರೆಹಮಾನ್ ಕೋಡಿಜಾಲ್, ಉಳ್ಳಾಲ ನಗರಸಭೆ ಅಧ್ಯಕ್ಷೆ ಗಿರಿಜಾ ಬಾ, ಹಿಂದುಳಿದ ವರ್ಗಗಳ ಕ್ಷೇತ್ರ ಅಧ್ಯಕ್ಷ ದಿನೇಶ್ ಕುಂಪಲ, ಸೋಮೇಶ್ವರ ಗ್ರಾ. ಪಂ ಸದಸ್ಯ ಪುರುಷೋತ್ತಮ ಶೆಟ್ಟಿ ಪಿಲಾರ್, ಪರಿಶಿಷ್ಟ ಜಾತಿ ಹಾಗೂ ಪಂಗಡದ ಕ್ಷೇತ್ರ ಅಧ್ಯಕ್ಷ ರೋಹಿತ್ ಉಳ್ಳಾಲ, ಪಿಯೂಸ್ ಮೊಂತೇರೊ, ಪದ್ಮನಾಭ ಕೊಣಾಜೆ ಉಪಸ್ಥಿತರಿದ್ದರು.

Exit mobile version