Site icon Ullalavani

ಮಡಂತ್ಯಾರ್ : ಟೆಡ್ಡಿ ಸುಪರ್ ಮಾರ್ಟ್ ಶುಭಾರಂಭ, ಇನ್ನಷ್ಟು ಶಾಖೆಗಳು ಆರಂಭವಾಗಲಿ : ಆಸ್ರಣ್ಣ

ಮಡಂತ್ಯಾರು : ಮಡಂತ್ಯಾರು ಕಾಲೇಜು ರಸ್ತೆಯಲ್ಲಿರುವ ನೋವಾ ಪ್ಲಾಝಾದಲ್ಲಿ ` ಟೆಡ್ಡಿ ಸುಪರ್ ಮಾರ್ಟ್’ ಇದರ ಉದ್ಘಾಟನೆಯನ್ನು ಶ್ರೀ ಕ್ಷೇತ್ರ ಕಟೀಲು ಇಲ್ಲಿನ ಪ್ರಧಾನ ಅರ್ಚಕ ವೇದಮೂರ್ತಿ ಅನಂತ ಪದ್ಮನಾಭ ಆಸ್ರಣ್ಣ ಶನಿವಾರ ಉದ್ಘಾಟಿಸಿದರು.
ಮಡಂತ್ಯಾರು ಗ್ರಾಮೀಣ ಭಾಗದಲ್ಲಿ ಪ್ರಪ್ರಥಮವಾಗಿ ಆರಂಭಗೊಂಡ ದಿನಬಳಕೆ ವಸ್ತುಗಳೆಲ್ಲವೂ ಇರುವಂತಹ ಸುಪರ್ ಮಾರ್ಟ್ ಚಂದ್ರ ಪೂರ್ಣಚಂದ್ರನಾಗಿ ಬೆಳಗುವಂತೆ ಇನ್ನಷ್ಟು ಪ್ರದೇಶಗಳಲ್ಲಿಯೂ ಇಂತಹ ಮಾರುಕಟ್ಟೆ ಶುಭಾರಂಭಗೊಳ್ಳಲಿ. ಗ್ರಾಹಕರಿಗೆ ಉತ್ತಮ ಸೇವೆಯನ್ನು ಒದಗಿಸುವಂತಾಗಲಿ ಎಂದು ಶುಭಹಾರೈಸಿದರು.

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜಾ, ಶ್ರೀ ಕ್ಷೇತ್ರ ಪಣೋಲಿಬೈಲ್ ಇಲ್ಲಿನ ಪ್ರಧಾನ ಅರ್ಚಕ ನಾರಾಯಣ ಮೂಲ್ಯ , ಮಾಜಿ ಶಾಸಕ ವಸಂತ ಬಂಗೇರ, ಕಟೀಲು ಹೊಟೇಲ್ ಸೌಂದರ್ಯ ಪ್ಯಾಲೇಸ್ ಮತ್ತು ಸೌಂದರ್ಯ ರೆಸಾರ್ಟ್ ನ ವ್ಯವಸ್ಥಾಪಕ ನಿರ್ದೇಶಕ ಸೌಂದರ್ಯ ರಮೇಶ್, ಜಿ.ಪಂ ಮಾಜಿ ಸದಸ್ಯರುಗಳಾದ ಪದ್ಮಶೇಖರ್ ಜೈನ್, ತುಂಗಪ್ಪ ಬಂಗೇರ, ಮಡಂತ್ಯಾರು ಗ್ರಾ.ಪಂ ಅಧ್ಯಕ್ಷ ಶಶಿಪ್ರಭಾ ಮುಖ್ಯ ಅತಿಥಿಗಳಾಗಿದ್ದರು.
ಸಚ್ಚ್ ಪ್ರಾಪರ್ಟಿಸ್ ಮಾಲಕ ಕಿರಣ್ ಬಿ.ಎನ್, ನಗರ ಮತ್ತು ಗ್ರಾಮಾಂತರ ಯೋಜನೆ ಇಲಾಖೆಯ ಸಹಾಯಕ ನಿರ್ದೇಶಕ ಗುರು ಎ.ಬಿ, ಮಡಂತ್ಯಾರು ವರ್ತಕರ ಸಂಘದ ಅಧ್ಯಕ್ಷ ಜಯಂತ್ ಶೆಟ್ಟಿ, ಗುರುವಾಯನಕೆರೆ ಎಕ್ಸೆಲ್ ವಿದ್ಯಾಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್, ಬೆಳ್ತಂಗಡಿ ವಾಣಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾದ ಡಿ.ಯಧುಪತಿ ಗೌಡ, ಮಡಂತ್ಯಾರು ಅಧಿಕಾರಿ ಟ್ರೇಡರ್ಸ್‍ನ ಅನಿಲ್ ಕುಮಾರ್ ಅಧಿಕಾರಿ, ಮಡಂತ್ಯಾರು ದುರ್ಗಾ ಟ್ರೇಡರ್ಸ್ ಯಶೋಧರ ಬಂಗೇರ, ಶಟರ್ ಬಾಕ್ಸ್ ಫಿಲಂಸ್ ಯುಟ್ಯೂಬ್ ಚಾನೆಲ್‍ನ ಸಚಿನ್ ಶೆಟ್ಟಿ ಅತಿಥಿಗಳಾಗಿದ್ದರು. ಪ್ರವಿಣ್ ಅಬೂರ, ವಿಠಲ್ ಅಬುರ
ಟೆಡ್ಡಿ ಸುಪರ್‍ಮಾರ್ಟ್ ಮಾಲೀಕರಾದ ಕಾರ್ತಿಕ್ ಸಿ.ಸಾಲ್ಯಾನ್ ಉಪಸ್ಥಿತರಿದ್ದರು.
ಈ ಸಂದರ್ಭ ಸರಕಾರಿ ಮಾದರಿ ಹಿ.ಪ್ರಾ.ಶಾಲೆ ಉಳಿ ಕಕ್ಯೆಪದವು ಇಲ್ಲಿನ ಮುಖ್ಯೋಪಾಧ್ಯಾಯ ಪಿ.ಹಮೀದ್ ಮಾಸ್ಟರ್ , ಖ್ಯಾತ ಕಾರ್ಯಕ್ರಮ ನಿರೂಪಕ ಹಾಗೂ ಸಂಯೋಜಕ ನಿತೇರ್ಶ ಶೆಟ್ಟಿ ಎಕ್ಕಾರ್ ಹಾಗೂ ಮಡಂತ್ಯಾರು ನೋವಾ ಪ್ಲಾಜಾ ಮಾಲೀಕರಾದ ಫ್ರಾನ್ಸಿಸ್ ವಿ.ವಿ ಇವರನ್ನು ಸನ್ಮಾನಿಸಲಾಯಿತು.
ಸುಪರ್ ಮಾರ್ಟ್‍ನಲ್ಲಿ ದಿನಬಳಕೆ ವಸ್ತುಗಳೆಲ್ಲವೂ ಮಿತದರದಲ್ಲಿ ಲಭ್ಯವಿದ್ದು, ಇಂದಿನಿಂದಲೇ ಗ್ರಾಹಕರ ಸೇವೆಗೆ ಲಭ್ಯವಿದೆ.

Exit mobile version