Site icon Ullalavani

ನಿವೇಶನ ಅರ್ಜಿ ಸಲ್ಲಿಸಲು ಬಂದ ಮಹಿಳೆಗೆ ಗ್ರಾ.ಪಂ ಹಿರಿಯ ಸದಸ್ಯನಿಂದ ಲೈಂಗಿಕ ಕಿರುಕುಳ, ಆರೋಪಿ ಬಂಧನ

UN networks

ಮುನ್ನೂರು: ನಿವೇಶನಕ್ಕೆಂದು ಅರ್ಜಿ ನೀಡಲು ಬಂದಿದ್ದ ಮಹಿಳೆಗೆ ಗ್ರಾಮ ಪಂಚಾಯಿತಿ ಹಿರಿಯ ಸದಸ್ಯ ಲೈಂಗಿಕ ಕಿರುಕುಳ ನೀಡಿರುವ ಘಟನೆ ಮುನ್ನೂರು ಗ್ರಾಮ ಪಂಚಾಯಿತಿ ಅಧ್ಯಕ್ಷರ ಕೊಠಡಿಯಲ್ಲಿ ನಡೆದಿದೆ. ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.

ಮಹಿಳೆಯೊಬ್ಬರು ನಿವೇಶನದ ಅರ್ಜಿ ನೀಡಲು ಪಂಚಾಯಿತಿಗೆ ಬಂದಿದ್ದು ಅಲ್ಲಿ ಇದ್ದ ಬಿ.ಜೆ.ಪಿ ಬೆಂಬಲಿತ ಪಂಚಾಯತ್ ಸದಸ್ಯ ಬಾಬು ಶೆಟ್ಟಿ ಆ ಮಹಿಳೆಯನ್ನು ನೇರ ಅಧ್ಯಕ್ಷರಾದ ವಿಲ್ಫ್ರೇಡ್ ಡಿ ಸೋಜರವರ ಕೊಠಡಿಗೆ ಕರೆದುಕೊಂಡು ಹೋಗಿದ್ದರು. ಅಧ್ಯಕ್ಷರು ಈ ಸಂದರ್ಭದಲ್ಲಿ ಹೊರ ಬಂದಿದ್ದರು. ಈ ಸಂದರ್ಭ ಮಹಿಳೆಯೊಂದಿಗೆ ಇದ್ದ ಮಕ್ಕಳನ್ನು ಹೊರಗೆ ಕಳುಹಿಸಿದ ಬಾಬು ಶೆಟ್ಟಿ ಅಧ್ಯಕ್ಷರು ಬರುವವರೆಗೆ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದಾರೆ‌. ಈ ಕುರಿತ ದೃಶ್ಯಾವಳಿ ಗ್ರಾ.ಪಂ ಸಿಸಿಟಿವಿಯಲ್ಲಿ ದಾಖಲಾಗಿದೆ. ತಪ್ಪಿತಸ್ಥನಿಗೆ ಶಿಕ್ಷೆಗೆ ಒಳಪಡಿಸುವಂತೆ ಆಗ್ರಹಿಸಿ ಡಿವೈಎಫ್ ಐ ನಿಯೋಗ ಮುನ್ನೂರು ಗ್ರಾಮದ ಅಧ್ಯಕ್ಷ ವಿಲ್ ಫ್ರೆಡ್ ಅವರಿಗೆ ಮನವಿ ಸಲ್ಲಿಸಿತ್ತು. ಇದೀಗ ಮಹಿಳೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ನೀಡಿರುವ ದೂರಿ‌ನಂತೆ ,ಆರೋಪಿತ ಗ್ರಾ.ಪಂ ಸದಸ್ಯನ ವಿರುದ್ದ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಉಳ್ಳಾಲ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

Exit mobile version