Site icon Ullalavani

ಸಿಪಿಐಎಂ ಪಿಲಾರು ಶಾಖಾ ಸಮ್ಮೇಳನ

UN networks

ಪಿಲಾರು: ಸಿಪಿಐಎಂ ಪಕ್ಷ ರೈತರ, ಕಾರ್ಮಿಕರ, ದುಡಿಯುವ ಜನರ ಪರ ನಿರಂತರ ಹೋರಾಟಗಳನ್ನು ನಡೆಸುತ್ತಾ ಬಂದಿದ್ದು, ಉಳ್ಳಾಲ ವಲಯದಲ್ಲಿ ಪಕ್ಷಕ್ಕೆ ಇತಿಹಾಸ , ಪರಂಪರೆ ಹಾಗೂ ಗೌರವ ಇರುವ ಪ್ರದೇಶ ಎಂದು ಉಳ್ಳಾಲ ವಲಯ ಸಿಪಿಐಎಂ ಕಾರ್ಯದರ್ಶಿ ಕೆ.ಕೃಷ್ಣಪ್ಪ ಸಾಲಿಯಾನ್ ಒತ್ತಾಯಿಸಿದರು.
ಅವರು ಪಿಲಾರು ಬಳಿ ನಡೆದ ಸಿಪಿಐಎಂ ಪಿಲಾರು ವ್ಯಾಯಾಮ ಶಾಲೆಯಲ್ಲಿ ಜರಗಿದ ಶಾಖಾ ಸಮ್ಮೇಳನದಲ್ಲಿ ದಿ. ಕರಿಯಪ್ಪ ಗಟ್ಟಿ ಹಾಗೂ ದಿ. ಬಾವು ಮುಂಡೋಳಿ ವೇದಿಕೆಯಲ್ಲಿ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಸಮ್ಮೇಳನದಲ್ಲಿ ಸೋಮೇಶ್ವರ ಪುರಸಭೆಯ ಮೂಲಭೂತ ಕೆಲಸ ಕಾರ್ಯಗಳನ್ನು ತ್ವರಿತಗೊಳಿಸಲು ಶೀಘ್ರವೇ ಕ್ರಮಕೈಗೊಳ್ಳಬೇಕು ಅನ್ನುವ ಒತ್ತಾಯ ಮಾಡಲಾಯಿತು. ರಸ್ತೆ ಬದಿ ಚರಂಡಿಯಿಲ್ಲದೆ ನೀರು ಹರಿದು ರಸ್ತೆ ಹದಗೆಟ್ಟಿದೆ, ಕಸ ವಿಲೇವಾರಿ ಸರಿಯಾಗಿ ಆಗುತ್ತಿಲ್ಲ. ಮೋರಿ ರಚನೆ ಅಗತ್ಯ ಆಗಬೇಕಿದೆ ಎಂದರು.
ಗಂಗಯ್ಯ ಗಟ್ಟಿ ಪಿಲಾರು ಧ್ವಜಾರೋಹಣ ನೆರವೇರಿಸಿದರು. ಈ ವೇಳೆ ಪುರಂದರ ದಾಸ್, ಬಾಬು ಶೆಟ್ಟಿ, ಧರ್ಮರಾಜ್, ಮನೋಜ್, ಬಾಲಕೃಷ್ಣ ಶೆಟ್ಟಿ, ಬಾಬು ಬೆಳ್ಚಾಡ, ಸುರೇಶ್ ಗಟ್ಟಿ, ಈಶ್ವರ್ ಶೆಟ್ಟಿ , ಚಂದ್ರಹಾಸ್ ಪಿಲಾರ್, ಸಂಜೀವ ಪಿಲಾರ್ ಉಪಸ್ಥಿತರಿದ್ದರು.
ಬಾಬು ಶೆಟ್ಟಿ ಸ್ವಾಗತಿಸಿದರು. ಧರ್ಮರಾಜ್ ವಂದಿಸಿದರು.

Exit mobile version