Site icon Ullalavani

ಯುವಸಮುದಾಯಕ್ಕೆ ಭಾವನಾತ್ಮಕ ವಿಚಾರಗಳನ್ನು ತುಂಬಿಸಿ ದಾರಿ ತಪ್ಪಿಸುವ ಕಾರ್ಯವಾಗುತ್ತಿದೆ: ಮುನೀರ್ ಕಾಟಿಪಳ್ಳ

UN networks

ಉಳ್ಳಾಲ: ಕೆಲವು ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳು ಯುವಕರಿಗೆ ಭಾವನಾತ್ಮಕ ವಿಚಾರಗಳನ್ನು ತಲೆಗೆ ತುಂಬಿಸಿ ದಾರಿ ತಪ್ಪಿಸುತ್ತಿದ್ದಾರೆ. ಯುವ ಸಮುದಾಯ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗರ ಅದರ್ಶವನ್ನು ಮೈಗೂಡಿಸಿ ಜನರ ಬದುಕಿನ ಬಗ್ಗೆ ಮಾತನಾಡಬೇಕು , ಶಿಕ್ಷಣ, ಆರೋಗ್ಯ, ಉದ್ಯೋಗದ ಬಗ್ಗೆ ತಲೆಕೆಡಿಸಿಕೊಳ್ಳಬೇಕು , ಈ ನಿಟ್ಟಿನಲ್ಲಿ ಡಿವೈಎಫ್‍ಐ ನಡೆಸುವ ಉದ್ಯೋಗದ ಹಕ್ಕಿನ ಹೋರಾಟಕ್ಕೆ ಎಲ್ಲರೂ ಕೈ ಜೋಡಿಸಬೇಕಾಗಿದೆ ಎಂದು ಡಿವೈ ಎಫ್ ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಹೇಳಿದ್ದಾರೆ.
ಅವರು   ತುಳುನಾಡಿನ ಅಭಿವೃದ್ಧಿಯಲ್ಲಿ ತುಳುನಾಡಿನ ಯುವಜನರಿಗೆ ದೊಡ್ಡ ಪಾಲು ಉದ್ಯೋಗ    ಸೃಷ್ಟಿಸಿ ಸ್ಥಳೀಯರಿಗೆ ಅದ್ಯತೆ ನೀಡಿ ಎಂಬ ಘೋಷಣೆಯಲ್ಲಿ  ಮುಕಚ್ಚೇರಿಯಲ್ಲಿ ಡಿವೈಎಫ್‍ಐ  ಉಳ್ಳಾಲ ಘಟಕ ಆಶ್ರಯದಲ್ಲಿ ಜರಗಿದ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು.


ಡಿವೈಎಫ್‍ಐ ಜಿಲ್ಲಾ ಉಪಾಧ್ಯಕ್ಷ ಡಾ.ಜೀವನ್ ರಾಜ್ ಕುತ್ತಾರ್, ಜಿಲ್ಲಾ ಜೊತೆ ಕಾರ್ಯದರ್ಶಿ ರಝಾಕ್ ಮೊಂಟೆಪದವು , ಉಳ್ಳಾಲ ವಲಯ ಅಧ್ಯಕ್ಷ ರಫೀಕ್ ಹರೇಕಳ,  ಉಳ್ಳಾಲ ವಲಯ ಕಾರ್ಯದರ್ಶಿ ಸುನೀಲ್ ತೇವುಲ , ವಕೀಲ ನಿತಿನ್ ಕುತ್ತಾರ್, ರಝಾಕ್ ಮುಡಿಪು, ಅಶ್ರಫ್ ಹರೇಕಳ ಉಪಸ್ಥಿತರಿದ್ದರು
 ಈ  ಸಂದರ್ಭ ಡಿವೈಎಫ್‍ಐನ  ನೂತನ ಮುಕಚ್ಚೇರಿ ಘಟಕ ರಚಿಸಲಾಯಿತು. ಅಸ್ವಿದ್ ಮುಕಚ್ಚೇರಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಕಾರ್ಯದರ್ಶಿಯಾಗಿ ಫರಾಜ್ , ಉಪಾಧ್ಯಕ್ಷರುಗಳಾಗಿ  ಅಬುಝಲ್ ಮತ್ತು ಹಾಫಿಲ್, ಜೊತೆ ಕಾರ್ಯದರ್ಶಿಗಳಾಗಿ ಇಯಾಜ್ ಮತ್ತು  ಫಾಝಿಲ್, ಕೋಶಾಧಿಕಾರಿಯಾಗಿ ಅಜ್ಮಲ್ ,  ಸಾಮಾಜಿಕ ಜಾಲತಾಣದ ಸಂಯೋಜಕರಾಗಿ  ಶಾಹಿದ್  ಮತ್ತು ಸಲ್ಮಾನ್ ಎಂಬವರನ್ನು ಆಯ್ಕೆ ಮಾಡಲಾಯಿತು. ಈ ವೇಳೆ 25 ಮಂದಿಯ ಕಮಿಟಿಯನ್ನು ರಚಿಸಲಾಯಿತು.

Exit mobile version