Site icon Ullalavani

ಸೋಮೇಶ್ವರ ಪುರಸಭೆ ವತಿಯಿಂದ ಒಂದೇ ದಿನ 606 ಮಂದಿಗೆ ಲಸಿಕೆ

UN networks

ಸೋಮೇಶ್ವರ : ಜಿಲ್ಲಾಡಳಿತದ ಆದೇಶದಂತೆ ಲಕ್ಷ ಲಸಿಕಾ ಮೇಳದನ್ವಯ ಸೋಮೇಶ್ವರ ಪುರಸಭಾ ವ್ಯಾಪ್ತಿಯ ಮೂರು ಕಡೆಗಳಲ್ಲಿ ನಡೆದ ಕೋವಿಡ್-19 ಲಸಿಕಾ ಶಿಬಿರದಲ್ಲಿ ಸೋಮೇಶ್ವರ ಪುರಸಭಾ ವ್ಯಾಪ್ತಿಯ ಒಟ್ಟು 606 ನಾಗರಿಕರು ಪ್ರಯೋಜನವನ್ನು ಪಡೆದುಕೊಂಡರು. ಇದರಲ್ಲಿ ೧೧ ಮಂದಿ ಅನಾರೋಗ್ಯ ಪೀಡಿತರ ಮನೆಗೆ ಹೋಗಿ ಸಿಬ್ಬಂದಿ ಲಸಿಕೆಯನ್ನು ನೀಡಿದರು.

ಶಿಬಿರದಲ್ಲಿ ವೀರಾಂಜನೇಯ ವ್ಯಾಯಾಮ ಶಾಲೆ, ಹನುಮಾನ್ ನಗರ, ಕುಂಪಲ ಮತ್ತು ಕೊಲ್ಯಶಾರದಾ ಸಭಾ ಭವನ ಇದರ ಅಧ್ಯಕ್ಷರು, ಪದಾಧಿಕಾರಿಗಳು, ಎಲ್ಲಾ ವಾರ್ಡುಗಳ ಮಾಜಿ ಸದಸ್ಯರುಗಳು, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಸಾರ್ವಜನಿಕರು, ಹಾಗೂ ಉಚ್ಚಿಲ ರಹಮಾನಿಯಾ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿ, ಮಾಜಿ ಸದಸ್ಯರು, ಸಾರ್ವಜನಿಕರು, ಕೋಟೆಕಾರು ಆರೋಗ್ಯಕೇಂದ್ರದ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಸಹಕರಿಸಿದರು.
ಈ ಸಂದರ್ಭ ಸೋಮೇಶ್ವರ ಪುರಸಭೆ ಮುಖ್ಯಾಧಿಕಾರಿ ವಾಣಿ ವಿ ಆಳ್ವ ನೇತೃತ್ವದಲ್ಲಿ ಆರೋಗ್ಯ ನಿರೀಕ್ಷಕಿ ಲಿಲ್ಲಿ ನಾಯರ್, ಕಂದಾಯ ನಿರೀಕ್ಷಕ ಸಿದ್ಧರಾಯ ಕಟ್ಟಿಮನಿ ಹಾಗೂ ಸಿಬ್ಬಂದಿ ಶ್ರೀನಾಥ್, ಸುಧಿನ್, ರೇಖಾ, ಸೌಮ್ಯಾ, ಶ್ರೇಯಸ್ ಹಾಗೂ ದೀಕ್ಷಾ ಲಸಿಕಾ ಶಿಬಿರಕ್ಕೆ ಸಹಕರಿಸಿದರು.

Exit mobile version