UN networks
ದೇರಳಕಟ್ಟೆ : ಮಾಹಿತಿಯಿಲ್ಲದೆ ನಡೆದ 20-21ನೇ ಸಾಲಿನ ಜಮಾಬಂದಿಗೆ ಗ್ರಾಮಸ್ಥರು ಹಾಗೂ ಪ್ರತಿಪಕ್ಷಗಳು ವಿರೋಧ ವ್ಯಕ್ತಪಡಿಸಿ, ಜಮಾಬಂದಿಯನ್ನು ರದ್ದುಪಡಿಸಿದ ಪ್ರಸಂಗ ದೇರಳಕಟ್ಟೆಯ ಬೆಳ್ಮ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಮಂಗಳವಾರ ನಡೆದಿದೆ.
ಆ.31 ರಂದು ಬೆಳ್ಮ ಗ್ರಾಮದ ಜಮಾಬಂದಿಯನ್ನು ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಬೆಳ್ಮ ಗ್ರಾ.ಪಂ ಅಧ್ಯಕ್ಷ ಅಬ್ದುಲ್ ಸತ್ತಾರ್ ಅವರ ಅನುಪಸ್ಥಿತಿಯಲ್ಲಿ ಉಪಾಧ್ಯಕ್ಷೆ ಝುಲೈಕಾ ಜಮಾಬಂದಿಯ ಅಧ್ಯಕ್ಷತೆ ವಹಿಸಿದ್ದರು. ಆದರೆ ಮಾಧ್ಯಮಗಳಲ್ಲಿ ಪ್ರಚಾರವಿಲ್ಲದೆ, ಬ್ಯಾನರ್ ಅಳವಡಿಸದೆ, ಗ್ರಾಮಸ್ಥರ ಅರಿವಿಗೆ ಬಾರದಂತೆ, ಹಲವು ಗ್ರಾ.ಪಂ ಸದಸ್ಯರ ಗಮನಕ್ಕೆ ಬಾರದಂತೆ ತಮಗೆ ಬೇಕಾದವರಿಗೆ ಮಾತ್ರ ಆಹ್ವಾನಿಸಿ ಜಮಾಬಂದಿಯನ್ನು ಆಯೋಜಿಸಲಾಗಿತ್ತು. ವಿಚಾರ ತಿಳಿದು ಸಭಾಂಗಣಕ್ಕೆ ಆಗಮಿಸಿದ ಪಂ. ಸದಸ್ಯರು ಹಾಗೂ ಗ್ರಾಮಸ್ಥರು ಆಡಳಿತ ವರ್ಗಕ್ಕೆ ಧಿಕ್ಕಾರ ಕೂಗಿ, ಜಮಾಬಂದಿ ನಡೆಸದಂತೆ ವಿರೋಧ ವ್ಯಕ್ತಪಡಿಸಿದರು. ಪ್ರಚಾರವಿಲ್ಲದೆ ಕದ್ದುಮುಚ್ಚಿ ನಡೆಸುವ ಜಮಾಬಂದಿಯ ಅವಶ್ಯಕತೆಯಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಜಮಾಬಂದಿ ನಡೆಯದಂತೆ ತಡೆಯೊಡ್ಡಿದ್ದಾರೆ. ಬಳಿಕ ಉಪಾಧ್ಯಕ್ಷೆ ಜಮಾಬಂದಿಯನ್ನು ರದ್ದುಗೊಳಿಸುವ ಮೂಲಕ ಪಂಚಾಯಿತಿ ಸಭಾಂಗಣದಲ್ಲಿ ಶಾಂತಿ ವಾತಾವರಣ ನಿರ್ಮಾಣವಾಯಿತು.
