UN networks
ಉಳ್ಳಾಲ: ಮಂಗಳೂರು ನಗರ ಪೊಲೀಸ್ ಅಧಿಕಾರಿಗಳಿಂದ ‘ತುರ್ತು ಸ್ಪಂದನ ಬೆಂಬಲ ವ್ಯವಸ್ಥೆ’ (ಇಆರ್‌ಎಸ್‌ಎಸ್)ನ 112 ಸಹಾಯವಾಣಿ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಇಂದು ದಿನವಿಡೀ ಆಯೋಜಿಸಲಾಗಿರುವ ‘ಮಹಿಳಾ ಸುರಕ್ಷತೆಗಾಗಿ ಒಂದು ದಿನ’ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಒಂದು ಗಂಟೆಯೊಳಗೆ ಡಿಸಿಪಿ ಹರಿರಾಂ ಶಂಕರ್ ನೇತೃತ್ವದ ತಂಡ ಉಳ್ಳಾಲ ಠಾಣಾ ವ್ಯಾಪ್ತಿಯ ಉಳಿಯ ಹಿರಿಯ ನಾಗರಿಕರೋರ್ವರ ಕರೆಗೆ 12 ನಿಮಿಷಗಳಲ್ಲಿ ತಲುಪಿ, ಸ್ಪಂಧಿಸಿ ಸಮಸ್ಯೆ ಬಗೆಹರಿಸಿದ್ದಾರೆ.
ಭಾರತೀಯ ಸೇನೆಯ ನಿವೃತ್ತ ಸೈನಿಕರು ಹಿರಿಯರಾಗಿರುವ ಉಳ್ಳಾಲ ಉಳಿಯ ನಿವಾಸಿ ಶೇಸಪ್ಪ ಎಂಬವರು ಇಆರ್ ಎಸ್ಎಸ್ ನ 112 ಸಹಾಯವಾಣಿಗೆ ಕರೆ ಮಾಡಿ ಸ್ಥಳೀಯರಿಂದ ತೊಂದರೆಯುಂಟಾಗುತ್ತಿರುವ ಕುರಿತು ದೂರು ನೀಡಿದ್ದರು. ಇದಕ್ಕೆ ತಕ್ಷಣ ಸ್ಪಂಧಿಸಿ ಡಿಸಿಪಿ ಹರಿರಾಂ ಶಂಕರ್ ನೇತೃತ್ವದಲ್ಲಿ ಉಳ್ಳಾಲ ಪೊಲೀಸ್ ಠಾಣೆಯ ಹೊಯ್ಸಳ ದಳದ ವಾಹನ ಉಳಿಯ ಪ್ರದೇಶಕ್ಕೆ ತೆರಳಿದೆ. ಅಲ್ಲಿ ದೂರುದಾರರ ಮಾಹಿತಿ ಪಡೆದು, ತೊಂದರೆಯುಂಟು ಮಾಡುತ್ತಿರುವವರ ಕುರಿತು ವಿಚಾರಣೆ ನಡೆಸಿ ಅವರಿಗೆ ಎಚ್ಚರಿಕೆ ನೀಡಿ, ಸಮಸ್ಯೆಯನ್ನು ಬಗೆಹರಿಸಲಾಗಿದೆ.
ತಂಡದಲ್ಲಿ ಡಿಸಿಪಿ ಹರಿರಾಂ ಶಂಕರ್, ಉಳ್ಳಾಲ ಹೊಯ್ಸಳ ದಳ ದ ಸ್ಪೂರ್ತಿ ಹೆಗಡೆ, ಸಂತೋಷ್, ರಾಜು ಹೊನ್ನಕಾಂತಿ ಇದ್ದರು.
