Site icon Ullalavani

`ಹೊರಗೆ ಹೋಗುತ್ತಿದ್ದರೆ ಗುಂಡಿನ ದಾಳಿ ನಡೆಸುತ್ತಿದ್ದರು’ ಅಪಘಾನಿಸ್ಥಾನದಿಂದ ವಾಪಸ್ಸಾದ ಕೊಲ್ಯ ನಿವಾಸಿ ಪ್ರಸಾದ್ ಆನಂದ್

UN networks

ಉಳ್ಳಾಲ: ಹೊರಗೆ ಹೋಗುತ್ತಿದ್ದಲ್ಲಿ ತಾಲಿಬಾನಿಗರು ಗುಂಡು ದಾಳಿ ನಡೆಸುತ್ತಿದ್ದರು. ಆದರೆ ನ್ಯಾಟೋ ಏರ್‍ಬೇಸ್ ಕ್ಯಾಂಪಿನ ಒಳಗೆಯೇ ಕೆಲಸವಿರುವುದರಿಂದ ಹೊರಹೋಗುವ ಅವಕಾಶವೂ ಇರಲಿಲ್ಲ. ಮನೆಗೆ ಯಾವಾಗ ತಲುಪುತ್ತೇನೋ ಅನ್ನುವ ಪ್ರಶ್ನೆ ಇತ್ತು. ಭಾರತೀಯ ರಾಯಭಾರಿ ಕಚೇರಿ ಮತ್ತು ಅಮೆರಿಕಾ ವಾಯುಸೇನೆ ಸಹಕಾರದಿಂದ ಆ.17 ರಂದು ಏರ್ ಲಿಫ್ಟ್  ಆಗಿ ಕತಾರ್ ನಲ್ಲಿ ಮೂರು ದಿನಗಳ ಕಾಲ ಉಳಿದು, ಇಂದು ದೆಹಲಿಗೆ ತಲುಪಿ ಅಲ್ಲಿಂದ ಮನೆಗೆ ಮರಳಿದ್ದೇನೆ. ಇದು ಅಫ್ಘಾನಿಸ್ಥಾನದ ನ್ಯಾಟೋ ಪಡೆಯ ಅಧೀನದ ಲಂಡನ್ ಮೂಲದ ಓವರ್ ಸೀಸ್ ಸಪ್ಲೈ ಸರ್ವೀಸಸ್ ಸಂಸ್ಥೆಯಲ್ಲಿ ಅಕೌಂಟೆಂಟ್ ಆಗಿದ್ದ ಕೊಲ್ಯ ಕನೀರುತೋಟ ನಿವಾಸಿ ಪ್ರಸಾದ್ ಅವರ ಮಾತು.  

ಬಿಜೆಪಿ ಮಂಡಲ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್ ಭೇಟಿ

ಶಾಸಕ ಯು.ಟಿ ಖಾದರ್ ಭೇಟಿ


ಕಳೆದ ಎಂಟು ವರ್ಷಗಳಿಂದ ನ್ಯಾಟೋ ಪಡೆಯ ಕಂಪೆನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. 2021ರ ಫೆಬ್ರವರಿಗೆ ಆಗಮಿಸಿದ್ದ ಪ್ರಸಾದ್ ಎಪ್ರಿಲ್ 3ರಂದು ಅಫ್ಘಾನಿಸ್ಥಾನಕ್ಕೆ ತೆರಳಿದ್ದರು. ಅಪಘಾನಿಸ್ತಾನ ತಾಲಿಬಾನಿಗರ ವಶವಾಗುತ್ತಿದ್ದಂತೆ ,  ಕಂಪೆನಿಯಲ್ಲಿದ್ದವರು   ಭಾರತೀಯ ರಾಯಭಾರಿ ಕಚೇರಿ  ರಚಿಸಿದ ವಾಟ್ಸ್ಯಾಗ್ ಗುಂಪಿನಲ್ಲಿ ಸೇರಿದ್ದೆವು.  ಈ ಮೂಲಕ ನಿರಂತರ ಸಂಪರ್ಕವನ್ನು ಇಟ್ಟುಕೊಳ್ಳುತ್ತಾ, ಇಮೇಲ್ ಮೂಲಕ ಪತ್ರವನ್ನು ಬರೆಯುತ್ತಲೇ ಇದ್ದೆವು. ಆ.17 ರಂದು ಅಮೆರಿಕಾದ ಏರ್‍ಫೋರ್ಸ್ ವಿಮಾನ ಸಿ-17   ಕಾಬುಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಏರ್‍ಲಿಫ್ಟ್ ಮಾಡಿತ್ತು.  ಅಲ್ಲಿಂದ ಕತಾರ್ ಕೊಂಡೊಯ್ದು, ಅಲ್ಲಿ ಮೂರು ದಿನಗಳ ಕಾಲ ಉಳಿಯಬೇಕಾಯಿತು.  ಕಂಪೆನಿ ಹೊರಗಡೆ ಎಲ್ಲಿಯೂ ತೆರಳಲು ಅವಕಾಶ ಇಲ್ಲದೇ ಇದ್ದುದರಿಂದ   ಕಂಪೆನಿಯೊಳಗಿದ್ದ ಅಫ್ಘಾನ್ ನಾಗರಿಕರಿಂದ ಹೊರಗೆ ಆಗುತ್ತಿದ್ದ ಬೆಳವಣಿಗೆಗಳನ್ನು ತಿಳಿದುಕೊಳ್ಳುತ್ತಿದ್ದೆವು. ಮನೆಗೆ ತಲುಪುವುದೇ ಸಂಶಯವಿತ್ತು. ಪತ್ನಿ, ಸಂಬಂಧಿಕರು ಹಾಗೂ ಸ್ನೇಹಿತರಿಂದ ಕರೆ ನಿರಂತರ ಬರುತಿತ್ತು. ಆದರೆ  ವಾಯ್ಸ್ ಮೆಸೇಜ್ ಮುಖೇನ ಸಂಪರ್ಕ ಇಟ್ಟುಕೊಳ್ಳುತ್ತಿದ್ದೆವು. ಕಾಬುಲ್ ನಲ್ಲಿ ವಿಮಾನ ಏರಿದ ನಂತರವಷ್ಟೇ ಮನೆಗೆ ತಲುಪುವ ಧೈರ್ಯ ಬಂದಿತ್ತು. ಭಾರತೀಯ ರಾಯಭಾರಿ ಸಂಸ್ಥೆ ಕಾಬುಲ್ ನಲ್ಲಿ
ವಿಮಾನ ನಿಲ್ದಾಣದವರೆಗೆ ತಲುಪಿಸಿ, ಆರ್ ಟಿಪಿಸಿಆರ್ ವರದಿಯಿಂದಲೂ ವಿನಾಯಿತಿ ನೀಡಿ  ಕಳುಹಿಸಿತ್ತು. ಕತಾರ್ ನಲ್ಲಿ  ಮೂರು ದಿನಗಳ ಕಾಲ ಉಳಿದಿದ್ದ ಸಂದರ್ಭವೂ  ಉತ್ತಮ ವ್ಯವಸ್ಥೆಯನ್ನು ಕಲ್ಪಿಸಿತ್ತು. ಆದರೆ ಕಾಬುಲ್ ವಿಮಾನ ನಿಲ್ದಾಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಲ್ಲಿನ ನಾಗರಿಕರು ಜಮಾಯಿಸಿ  ವಿಮಾನಕ್ಕಾಗಿ ಕಾಯುವ ಸ್ಥಿತಿ ಮನಕಲುಕುವಂತಿತ್ತು.  ಬಂದ 5 ವಿಮಾನಗಳಲ್ಲಿ  ಹೆಚ್ಚಿನ ಸಂಖ್ಯೆಯಲ್ಲಿ ಜನ ತೆರಳಿದ್ದರೂ ಅಷ್ಟೇ ಸಂಖ್ಯೆಯಲ್ಲಿ ಮತ್ತೆ ನಾಗರಿಕರು ಅಲ್ಲಿಂದ ಹೊರಬರಲು ಕಾಯುತ್ತಿದ್ದರು ಎಂದು  ತಮ್ಮ ಅನುಭವ ಹಂಚಿಕೊಂಡರು.  

ಸುರಕ್ಷಿತವಾಗಿ ಮುಟ್ಟಲು ಕೊರಗಜ್ಜನಿಗೆ ಹರಕೆ ಹೇಳಿದ್ದೆ : ಪತಿ ಪ್ರಸಾದ್ ಕಾಬೂಲಿನಲ್ಲಿ ಸಿಲುಕಿಕೊಂಡ ಸಂದರ್ಭದಲ್ಲಿ ಸುರಕ್ಷಿತವಾಗಿಮರಳಲು ಕೊರಗಜ್ಜನಿಗೆ ಹರಕೆ ಹೇಳಿದ್ದೆ.  ಕಾಬೂಲ್  ತಾಲಿಬಾನ್ ವಶವಾಗುತ್ತಿದ್ದಂತೆ ನಿರಂತರವಾಗಿ ಪ್ರಸಾದ್ ಅವರೊಂದಿಗೆ ಸಂಪರ್ಕ ದಲ್ಲಿದ್ದೆ. ಮೂರು ದಿನಗಳ ಕಾಲ ಏಪೆರ್Çೀರ್ಟನಲ್ಲಿ ಏರ್ ಲಿಫ್ಟ ಗಾಗಿ ಕಾಯುತ್ತಿದ್ದರು. ಕತಾರ್ ಗೆ ಏರ್ ಲಿಫ್ಟ್ ಆಗುತ್ತಿದ್ದಂತೆ ನಿಟ್ಟುಸಿರು ಬಿಟ್ಟಿದ್ದು ಇದೀಗ ಮನೆಗೆ ತಲುಪಿದ್ದರಿಂದ ಮನಸ್ಸಿಗೆ ಸಮಾಧಾನವಾಗಿದೆ ಎಂದು  ಭವಿಳಾ ಪ್ರಸಾದ್ ತಿಳಿಸಿದರು.

ತಾಲಿಬಾನಿಗರ ಆಕ್ರಮಣದ ಕುರಿತು ಮಾಧ್ಯಮಗಳಲ್ಲಿ ಸುದ್ಧಿಯಾಗುತ್ತಿದ್ದಂತೆ ಬೆಚ್ಚಿಬಿದ್ದಿದ್ದೆವು. ರಾತ್ರಿಯಿಡೀ ಟಿ.ವಿ ನೋಡುತ್ತಾ ಕುಳಿತಿದ್ದೆವು. ಊಟ, ತಿಂಡಿ, ನಿದ್ರೆಯನ್ನು ಸರಿಯಾಗಿ ಮಾಡಿರಲಿಲ್ಲ. ನಿತ್ಯ ದೇವರಲ್ಲಿ ಪ್ರಾರ್ಥಿಸುತ್ತಾ  ಅಳಿಯನ ಬರುವಿಕೆಗಾಗಿ ಕಾಯುತ್ತಲೇ ಇದ್ದೆವು. ಇಂದು  ಪ್ರಸಾದ್ ಮನೆ ತಲುಪಿರುವುದು ದೇವರೇ ಬದಂದಂತಾಗಿದೆ ಎಂದು  ಭವಿಳಾ ಅವರ ತಾಯಿ ಪ್ರತಿಕ್ರಿಯಿಸಿದರು.

ಬಿಜೆಪಿ ಅಧ್ಯಕ್ಷರಿಂದ ಸ್ವಾಗತ
 ಪ್ರಸಾದ್ ಅವರು ಅಪಘಾನಿಸ್ತಾನದಿಂದ ಕೊಲ್ಯದ ಮನೆಗೆ  ಬರುತ್ತಿರುವ ಸುದ್ಧಿ ತಿಳಿದು ಸ್ಥಳಕ್ಕೆ ಬಿಜೆಪಿ ಮಂಡಲ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್ ಭೇಟಿ ನೀಡಿ, ಮನೆಗೆ ಆಗಮಿಸುತ್ತಿದ್ದಂತೆ ಸ್ವಾಗತಿಸಿದರು.  ಅಪಘಾನಿಸ್ತಾನದ ಕರಾಳತೆಯ ಮಾಹಿತಿ ಪಡೆದು ಪತ್ನಿ ಹಾಗೂ ಕುಟುಂಬಸ್ಥರಲ್ಲಿ ಧೈರ್ಯ ತುಂಬಿದರು. ಈ ವೇಳೆ ಕೋಟೆಕಾರು ಪಟ್ಟಣ ಪಂ. ಮಾಜಿ ಅಧ್ಯಕ್ಷ ಶೇಖರ್ ಕನೀರುತೋಟ,  ಅಧ್ಯಕ್ಷೆ ಪ್ರಫುಲ್ಲಾದಾಸ್, ಸ್ಥಳೀಯ ರವಿ ಕೊಲ್ಯ ಮುಂತಾದವರು ಉಪಸ್ಥಿತರಿದ್ದರು.

ಶಾಸಕ ಯು.ಟಿ ಖಾದರ್ ಭೇಟಿ
ಹಲವು ಸಂಸ್ಥೆ ಸಿಬ್ಬಂದಿ ರೂಮಿನಲ್ಲಿದ್ದ ಸಂದರ್ಭದಲ್ಲೇ  ಸಂಸ್ಥೆಯ ಅಧಿಕೃತರು ಕಂಪೆನಿಗಳನ್ನು ಮುಚ್ಚಿ ತೆರಳಿದ್ದಾರೆ. ಇದು ಆತಂಕದ ವಿಚಾರ. ಇದರ ನಡುವೆ  ಪ್ರಸಾದ್ ಅವರು ಮನೆ ತಲುಪಿರುವುದು ಸಂತಸದ ವಿಚಾರ. ಕ್ಷೇತ್ರ ವ್ಯಾಪ್ತಿಯ ಇಬ್ಬರು ಈಗಾಗಲೇ  ಸುರಕ್ಷಿತವಾಗಿ ಮನೆ ತಲುಪಿದ್ದಾರೆ.  ಇನ್ನೂ ಹಲವು ಕನ್ನಡಿಗರು ಇರುವ ಕುರಿತು ಮಾಹಿತಿಯಿದೆ.  
ಇವರನ್ನು ಸುರಕ್ಷಿತವಾಗಿ ಮನೆಗೆ ತಲುಪುವಂತೆ ಮಾಡಿದ ಕೇಂದ್ರದ ರಾಯಭಾರಿ ಕಚೇರಿಗೆ  ಕೃತಜ್ಞತೆಗಳು . ರಾಜ್ಯದ ಮುಖ್ಯಮಂತ್ರಿ ಹಾಗೂ ಗೃಹಸಚಿವರನ್ನು ಭೇಟಿಯಾಗಿ   ರಾಜ್ಯದ ವಾಸಿಗಳು ಅಪಘಾನಿಸ್ತಾನದಲ್ಲಿ ಸಿಲುಕಿದ್ದಲ್ಲಿ ಅವರ ಮಾಹಿತಿ ಪಡೆದು ಅವರನ್ನು ಸುರಕ್ಷಿತವಾಗಿ ಕರೆತರುವಂತೆ  ಹಾಗೂ ಮಾಹಿತಿ ಪಡೆಯಲು ನೋಡೆಲ್ ಅಧಿಕಾರಿಯನ್ನು ನೇಮಿಸುವಂತೆ ಕೇಳಿಕೊಂಡಿದ್ದೆನು. ಅದರಂತೆ ಅಧಿಕಾರಿಯನ್ನು ನೇಮಿಸಲಾಗಿದೆ.  ಯಾರೂ ಕೂಡ ಅಪಘಾನಿಸ್ಥಾನದಲ್ಲಿ ಸಿಲುಕಿದ್ದಲ್ಲಿ  ಅನಿಲ್ ಚೌಹಾಣ್ ಅನ್ನುವ ಅಧಿಕಾರಿಯನ್ನು  ಸಂಪರ್ಕಿಸಬಹುದು ಎಂದರು.

Exit mobile version