ಉಳ್ಳಾಲ: ಭಯೋತ್ಪಾದನೆಯಂತಹ ಕೃತ್ಯಗಳು ದೇಶದ ಯಾವುದೇ ಮೂಲೆಯಲ್ಲಾದರೂ ಕೂಡ ಬಿಜೆಪಿ ಹಾಗೂ ಸಂಘಟನೆಗಳು ಸಹಿಸುವುದಿಲ್ಲ. ಭಯೋತ್ಪಾದನೆಯನ್ನು ಬೇರು ಸಮೇತ ಕಿತ್ತು ಹಾಕಲು ಎಲ್ಲಿಗೆ ಬೇಕಾದರೂ ಹೋಗಲು ತಯಾರಿದ್ದೇವೆ ಎಂದು ಬಿಜೆಪಿ ಮಂಗಳೂರು ಕ್ಷೇತ್ರ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್ ತಿಳಿಸಿದ್ದಾರೆ.
ಸಂಘಪರಿವಾರದ ಕಾರ್ಯಕರ್ತರು ಉಳ್ಳಾಲದ ಎನ್‍ಐಎ ದಾಳಿ ನಡೆದಿರುವ ಮನೆಗೆ ಮುತ್ತಿಗೆ ಹಾಕಿರುವುದರ ವಿರುದ್ಧ ಶಾಸಕ ಯು.ಟಿ ಖಾದರ್ ನೀಡಿರುವ ಹೇಳಿಕೆ ವಿರುದ್ಧ ಮಾತನಾಡಿರುವ ಅವರು ಪತ್ರಿಕಾಗೋಷ್ಟಿಯಲ್ಲಿ ಯು.ಟಿ ಖಾದರ್ ಸಂಘಪರಿವಾರಕ್ಕೆ ಉಳ್ಳಾಲಕ್ಕೆ ಬರಲು ತಾವು ಯಾರು ಎಂದು ಕೇಳಿದ್ದಾರೆ. ಆದರೆ ರಾಷ್ಟ್ರದ ಮೂಲೆ ಮೂಲೆಯ ವಿಷಯದಲ್ಲಿ ಏನೇ ಆದರೂ ಕೈ ಹಾಕುವ ಖಾದರ್ ರವರಿಗೆ ತಮ್ಮ ಕ್ಷೇತ್ರದ ವಿಷಯವು ಮುಖ್ಯವಾಗದೇ ಇರಬಹುದು. ಆದರೆ ಉಳ್ಳಾಲದಲ್ಲಿ ನಡೆಯುವ ದೇಶವಿರೋಧಿ ಕೃತ್ಯಗಳನ್ನು ಸಂಘಪರಿವಾರ ಹಾಗೂ ಬಿಜೆಪಿಗೆ ಸಹಿಸಲು ಸಾಧ್ಯವಿಲ್ಲ . ಅಷ್ಟು ಮಾತ್ರವಲ್ಲದೇ ಉಳ್ಳಾಲ ಭವ್ಯ ಭಾರತದಲ್ಲಿಯೇ ಇದ್ದು ಅಲ್ಲಿಗೆ ಹೋಗಲು ಯಾರು ಕೂಡ ಅನುಮತಿ ನೀಡಬೇಕಾದ ಅನಿವಾರ್ಯತೆ ಒದಗಿ ಬಂದಿಲ್ಲ.
ಲವ್ ಜಿಹಾದ್ ನಿಷೇಧದ ಕಾನೂನು ತರುವಂತೆ ಸರ್ಕಾರವನ್ನು ಒತ್ತಾಯಿಸಲು ಬಿಜೆಪಿ ಕಚೇರಿಯ ಮುಂದೆ ಕುಳಿತುಕೊಳ್ಳುವಂತೆ ಸಂಘಟನೆಯವರಿಗೆ ತಿಳಿಸಿದ್ದಾರೆ. ದೇಶದಲ್ಲಿ ಭಯೋತ್ಪಾದನಾ ನಿರ್ಮೂಲನೆ ಹಾಗೂ ಸಿಎಎಯಂತಹ ಕಠಿಣ ಕಾನೂನುಗಳನ್ನು ತಂದಾಗ ಅದನ್ನು ಪ್ರತಿಭಟಿಸಿ ಹೋರಾಟ ನಡೆಸುತ್ತಿರುವ ಇವರ ಪಕ್ಷದವರಿಗೆ ಇಂತಹ ಹೇಳಿಕೆಗಳನ್ನು ನೀಡಲು ನೈತಿಕತೆ ಇದೆಯೇ ಎಂಬುದನ್ನು ಖಾದರ್ ರವರು ಆತ್ಮವಿಮರ್ಶೆ ಮಾಡಿಕೊಳ್ಳಬೇಕಿದೆ. ಲವ್ ಜಿಹಾದ್ ಗೆ ಒಳಗಾಗಿರುವ ದೀಪ್ತಿ ಅಲಿಯಾಸ್ ಮರಿಯಮ್ಮಳ ಹೆತ್ತವರು ದೂರು ನೀಡಲಿ , ಅದು ಬಿಟ್ಟು ಹಿಂದೂ ಸಂಘಟನೆಗಳು ಯಾರು? ಎಂಬುದನ್ನು ಪ್ರಶ್ನಿಸಿದ್ದಾರೆ. ಅದರಂತೆ ಸಾಧ್ಯವಿದ್ದರೆ ಹಿಂದೂಸಂಘಟನೆಗಳ ವಿರುದ್ಧ ಮಾಜಿ ಶಾಸಕ ಇದಿನಬ್ಬರ ಪುತ್ರ ಮನೆ ಮಾಲೀಕ ದೂರು ನೀಡಲಿ? ಶಾಸಕರಿಗೆ ಯಾಕೆ ಮನೆಮಂದಿಯ ಮೇಲೆ ಅಷ್ಟೊಂದು ಪ್ರೀತಿ . ಮಾಜಿ ಶಾಸಕ ಇದಿನಬ್ಬರ ಮೊಮ್ಮಗಳು ಕುಟುಂಬ ಸಮೇತ ಐಸಿಸ್ ಜತೆ ಸೇರಿಕೊಂಡು ವೈಮಾನಿಕ ದಾಳಿಯಲ್ಲಿ ಮೃತಪಟ್ಟಿರುವ ಬಗ್ಗೆ ಎನ್‍ಐಎ ತಿಳಿಸಿದೆ. ಇಂತಹ ದೇಶ ವಿರೋಧಿ ಕೃತ್ಯಗಳಾಗಿದ್ದರೂ ಕೂಡ ದೇಶವಿರೋಧಿಗಳಿಗೆ ಪೂರಕವಾಗುವಂತಹ ಹೇಳಿಕೆಗಳನ್ನು ನೀಡುವಂತಹ ಶಾಸಕರ ನಡೆ ಖಂಡನೀಯ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
