
ಉಳ್ಳಾಲ : ಪ್ರಯಾಣಿಕರಿಗೆ ಮೂಲಭೂತ ಸೌಕರ್ಯ ಕಲ್ಪಿಸುವ ಕಾರ್ಯವನ್ನು ಊರಿನ ಹಿರಿಯರು ಹಾಗೂ ಮಂದಿರದ ಆಡಳಿತ ಮಂಡಳಿ ಸೇರಿಕೊಂಡು ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದು ಹೆಚ್ ಬಿಎಫ್ ಪ್ರೈ. ಲಿ ನ ಆಡಳಿತ ನಿರ್ದೇಶಕ ಬಾಬ್ ಸಿಂಗ್ ಹೇಳಿದರು.
ಅವರು ಕುಂಪಲ ಶ್ರೀ ಬಾಲಕೃಷ್ಣ ಮಂದಿರದ ರಜತ ವರ್ಷಾಚರಣೆ 1997-2022 ಸೇವಾ ಕಾರ್ಯದ ಅಂಗವಾಗಿ ನೂತನ ಬಸ್ಸು ತಂಗುದಾಣ ನೆರಳು ಇದರ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
ಬಸ್ಸು ತಂಗುದಾಣವನ್ನು ಕೊಡುಗೆಯಾಗಿ ನೀಡಿದ ದಿ| ರಾಮ ಸಾಲಿಯಾನ್ ಕುಂಪಲ ಇವರ ಸೊಸೆ ಶಾಲಿನಿ ಶೇಖರ್ ಬಂಗೇರ, ದಿ. ಮುರಳಿ (ಐಓಸಿ) ಇವರ ಪುತ್ರಿ ಬಿಂದು, ದಿ| ರಾಮ ಭಂಜನ್ ಹನುಮಾನ್‍ನಗರ ಇವರ ಪತ್ನಿ ಅಂಭಾ ಬಂಗೇರ ಮುಖ್ಯ ಅತಿಥಿಗಳಾಗಿದ್ದರು. ಈ ಸಂದರ್ಭ ಮಂದಿರದ ಗೌರವಾಧ್ಯಕ್ಷ ಕೇಶವದಾಸ್ ಬಗಂಬಿಲ, ಗುತ್ತಿಗೆದಾರ ಪ್ರಸಾದ್ ಕಡಬ ಸುಳ್ಯ, ಪ್ರಧಾನ ಕಾರ್ಯದರ್ಶಿ ರವೀಂದ್ರ ಕುಂಪಲ, ಮಹಿಳಾ ಸಮಿತಿ ಅಧ್ಯಕ್ಷೆ ಸುಶೀಲ ಕೆ, ರಜತ ಮಹೋತ್ಸವ ಸಮಿತಿ ಗೌರವಾಧ್ಯಕ್ಷ ಮೋಹನ್ ಶೆಟ್ಟಿ, ಉತ್ಸವ ಸಮಿತಿ ಅಧ್ಯಕ್ಷ ಪ್ರವೀಣ್ ಕುಲಾಲ್ ಉಪಸ್ಥಿತರಿದ್ದರು.
ಬಾಲಕೃಷ್ಣ ಮಂದಿರದ ಅಧ್ಯಕ್ಷ ಸತೀಶ್ ಕುಂಪಲ ಪ್ರಸ್ತಾವನೆಗೈದರು, ಬಗಂಬಿಲ ಹಿಂದೂ ರುದ್ರಭೂಮಿ ಸಮಿತಿಯ ಸಂಚಾಲಕ ಅನಿಲ್ ಬಗಂಬಿಲ ಸ್ವಾಗತಿಸಿದರು. ಸೇವಾ ಕಾರ್ಯದ ಕೃಷ್ಣ ಪೆÇನ್ನತ್ತೋಡು ವಂದಿಸಿದರು.