Site icon Ullalavani

ಜ್ಯುವೆಲ್ಲರಿ ದರೋಡೆ ಪ್ರಕರಣ ಪ್ರಮುಖ ಆರೋಪಿ ಹಿಂದೆ ಬಿದ್ದ ಉಳ್ಳಾಲ ಪೊಲೀಸರು

ಉಳ್ಳಾಲ: ಕೇರಳದ ಕಾಸರಗೋಡಿನ ಮಂಜೇಶ್ವರದ ಹೊಸಂಗಡಿಯ ರಾಜಧಾನಿ ಜುವೆಲ್ಲರಿ ಮಳಿಗೆಯ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಳ್ಳಾಲ ಪೆÇಲೀಸರು ಪ್ರಮುಖ ಆರೋಪಿ ಫರಂಗಿಪೇಟೆಯ ಮೊಹಮ್ಮದ್ ಗೌಸ್ ತಂಡದ ಪತ್ತೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಇನ್ನೊಂದೆಡೆ ಮಂಜೇಶ್ವರ ಪೆÇಲೀಸರು ಕರ್ನಾಟಕ ಪೆÇಲೀಸರ ಸಹಕಾರ ದೊಂದಿಗೆ ಆರೋಪಿಗಳ ಬೆನ್ನತ್ತಿದ್ದಾರೆ. ಜು. 26 ರಂದು ತಡ ರಾತ್ರಿ ಹೊಸಂಗಡಿಯ ರಾಜಧಾನಿ ಜುವೆಲ್ಲರಿಯ ವಾಚ್‍ಮೆನ್‍ಗೆ ಹಲ್ಲೆ ನಡೆಸಿ ಕಟ್ಟಿ ಹಾಕಿ ದರೋಡೆ ನಡೆಸಿ ಬರುತ್ತಿದ್ದ ವೇಳೆ ಆರೋಪಿಗಳ ಕಾರನ್ನು ತಲಪಾಡಿ ಸಮೀಪದ ಕೆ.ಸಿ. ರೋಡ್ ಜಂಕ್ಷನ್‍ನಲ್ಲಿ ಅಡ್ಡಗಟ್ಟಿದ ಉಳ್ಳಾಲ ಪೆÇಲೀಸರು 7.75 ಕೆಜಿ ಬೆಳ್ಳಿ ಸೇರಿದಂತೆ ಸುಮಾರು 14,35,500 ರೂ. ಮೌಲ್ಯದ ಸೊತ್ತನ್ನು ವಶಪಡಿಸಿಕೊಂಡಿದ್ದರು.ಕಾಟಿಪಳ್ಳ ಮೂಲದ ವ್ಯಕ್ತಿಯಿಂದ ಉಳ್ಳಾಲದಿಂದ ಬಾಬಾಬುಡಾನ್‍ಗಿರಿಗೆ ತೆರಳಲು ಇನ್ನೋವಾ ಕಾರನ್ನು ಬಾಡಿಗೆ ಪಡೆದುಕೊಂಡಿದ್ದ ಆರೋಪಿಗಳು ಕೇರಳಕ್ಕೆ ತೆರಳಿದ್ದು ನಡುರಾತ್ರಿ ಕಾರು ಮಂಜೇಶ್ವರದಿಂದ ತಲಪಾಡಿ ಕಡೆ ಬರುತ್ತಿರುವ ಮಾಹಿತಿ ಜಿಪಿಎಸ್ ಆಧಾರದಲ್ಲಿ ಕಾರಿನ ಮಾಲಿಕನಿಗೆ ಸಂಶಯ ಬಂದು ಉಳ್ಳಾಲ ಪೆÇಲೀಸರಿಗೆ ಮಾಹಿತಿ ನೀಡಿದ್ದರಿಂದ ಪ್ರಕರಣ ಬೆಳಕಿಗೆ ಬಂದಿತ್ತು. ದರೋಡೆಯೇ ಕಾಯಕ : ಪರಂಗಿಪೇಟೆಯ ಮೊಹಮ್ಮದ್ ಗೌಸ್ ದರೋಡೆ ನಡೆಸುವುದರಲ್ಲಿ ನಿಸ್ಸೀಮನಾಗಿದ್ದು ವ್ಯವಸ್ಥಿತವಾದ ತಂಡ ಕಟ್ಟಿಕೊಂಡು ಕೇರಳ ಸೇರಿದಂತೆ ಕರ್ನಾಟಕದಲ್ಲಿ ದರೋಡೆ ನಡೆಸುತ್ತಿದ್ದ. ಈಗಾಗಲೇ ಈತನ ವಿರುದ್ಧ ಶಿವಮೊಗ್ಗ, ಬೇಲೂರು, ಮೈಸೂರು , ಬಂಟ್ವಾಳ ಗ್ರಾಮಾಂತರ ಪೆÇಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣ ಸೇರಿದಂತೆ ವಿವಿಧ ಪ್ರಕರಣಗಳು ದಾಖಲಾಗಿದೆ. ಮಂಜೇಶ್ವರ ಪೆÇಲೀಸರು ಮತ್ತು ಉಳ್ಳಾಲ ಪೆÇಲೀಸರು ಪ್ರತ್ಯೇಕವಾಗಿ ತಂಡ ರಚಿಸಿ ಗೌಸ್ ಪತ್ತೆ ಕಾರ್ಯಕ್ಕೆ ಬಲೆ ಬೀಸಿದ್ದಾರೆ.

Exit mobile version