Site icon Ullalavani

ತೊಕ್ಕೊಟ್ಟು ಭಗತ್ ಸಿಂಗ್ ಪ್ರತಿಷ್ಠಾನದಿಂದನಿವೃತ್ತ ಶಿಕ್ಷಕರಿಗೆ ಗುರುವಂದನೆ

ಉಳ್ಳಾಲ: ಬೇರೆಯವರು ಪಾಠ ಹೇಳಿದರೂ ಅದರ ಅರಿವು ಜ್ಞಾನ ಪಡೆಯುವುದು ವ್ಯಕ್ತಿಯ ಮನೋಭಾವ ಆಗಿದೆ. ಈ ನಿಟ್ಟಿನಲ್ಲಿ ಅರಿವೇ  ತಿಳುವಳಿಕೆ, ಜ್ಞಾನವೇ ಗುರು ಆಗಿರುತ್ತದೆ. ಇಂತಹ ಗುರು ಪರಂಪರೆಯನ್ನು ಗೌರವಿಸುವ ಕಾರ್ಯ ಭಗತ್ ಸಿಂಗ್ ಪ್ರತಿಷ್ಠಾನದಿಂದ ಆಗಿದೆ ಎಂದು ನಿವೃತ್ತ ಶಿಕ್ಷಕ ವಾಸುದೇವ ರಾವ್ ಅಭಿಪ್ರಾಯಪಟ್ಟರು

ತೊಕ್ಕೊಟ್ಟು ಭಗತ್ ಸಿಂಗ್ ಸೇವಾ ಪ್ರತಿಷ್ಠಾನ ಆಶ್ರಯದಲ್ಲಿ ಗುರು ಪೂರ್ಣಿಮೆ ಪ್ರಯುಕ್ತ ಉಳ್ಳಾಲದ ಸುಂದರಿಭಾಗ್ ಶ್ರೀ ವೀರಾಂಜನೇಯ ಸೇವಾ ಟ್ರಸ್ಟ್ ನ ವ್ಯಾಯಾಮ ಶಾಲೆ ಸಭಾಂಗಣದಲ್ಲಿ ಹಮ್ಮಿಕೊಂಡ  ಗುರುವಂದನೆಯನ್ನು ಸ್ವೀಕರಿಸಿ ಮಾತನಾಡಿದರು.
ವ್ಯಾಸರು ಬರೆದ ನಾಲ್ಕು ವೇದಗಳನ್ನು ಬರೆದು ಕೊನೆಯಾಗಿಸಿದ ದಿನವೇ  ಗುರುಪೂರ್ಣಿಮೆ ದಿನ. ಸಾವಿರಾರು ವರ್ಷಗಳಿಂದ ಗುರುಗಳ ದಿನಾಚರಣೆಯನ್ನು ಆಚರಿಸಿಕೊಂಡು ಬರಲಾಗುತ್ತಿದೆ. ವ್ಯಕ್ತಿಯೋರ್ವನಿಗೆ ಸಂಪರ್ಕದಲ್ಲಿರುವವರು ಎಲ್ಲರೂ ಗುರುಗಳೇ. ವಿವಿಧ ಅನಿಭವಗಳನ್ನು ಕೊಡುವವರು ಗುರುಗಳೇ ಆಗಿರುತ್ತಾರೆ.  ಪ್ರಕೃತಿಯೂ ಗುರು ಸಮಾನ,  ನಿಸರ್ಗದಿಂದ ಹಲವು ವಿಚಾರಗಳನ್ನು ಕಲಿಯುತ್ತೇವೆ ಎಂದರು .
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಭಗತ್ ಸಿಂಗ್ ಸೇವಾ ಪ್ರತಿಷ್ಠಾನ ದ ಅಧ್ಯಕ್ಷ ಜೀವನ್ ಕುಮಾರ್ ಕೆರೆಬೈಲು ಮಾತನಾಡಿಶಿಕ್ಷಕ ವಾಸುದೇವರಾವ್ ಅವರ ಸೇವಾ ಸಾಧನೆಗಳು ಕಿರಿಯರಿಗೆ ಮಾದರಿ. ಸರಳ ವ್ಯಕ್ತಿತ್ವದ ಗುರುಗಳಾಗಿದ್ದು, ಪ್ರತಿದಿನ ಹೊಸತನ ವನ್ನು ವಿದ್ಯಾರ್ಥಿಗಳಿಗೆ ನೀಡಿ ಶಾಲೆಗೆ ಬರಲು ಉತ್ಸಾಹ ತುಂಬಿದವರು‌. ಎಲ್ಲಾ ಸಂಘ ಸಂಸ್ಥೆಗಳ ಜೊತೆಗೆ ಒಡನಾಟ ಇಟ್ಟುಕೊಂಡವರು. ಶಿಕ್ಷಕರಾಗಿ ನಿವೃತ್ತರಾದ ಬಳಿಕ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡವರು.  ಸ್ವಚ್ಛತೆ ಮತ್ತು ತ್ಯಾಜ್ಯ ಕುರಿತು ಉಳ್ಳಾಲ ನಗರಸಭೆಯ ಜೊತೆಗೆ ಕೈ ಜೋಡಿಸಿಕೊಂಡವರು ಎಂದರು. ಮುಖ್ಯ ಅತಿಥಿಗಳಾಗಿಭಗವತಿ ಕ್ಷೇತ್ರದ ಕಾರ್ನವರ್ ಬಾಲು, ಸುಂದರಿಭಾಗ್ ವೀರಾಂಜನೇಯ ವ್ಯಾಯಾಮ ಶಾಲೆ ಅಧ್ಯಕ್ಷ ಪುಷ್ಪರಾಜ್ ಉಳ್ಳಾಲ್,  ಪ್ರ.ಕಾ  ರಾಕೇಶ್ ಬೈಪಾಸ್ , ಉಳ್ಳಾಲ ನಗರಸಭೆಯ ಪರಿಸರ ರಾಯಭಾರಿ  ಮಾಧವ ಉಳ್ಳಾಲ್ , ಉಳ್ಳಾಲ ಪುರಸಭೆ ಮಾಜಿ ಕೌನ್ಸಿಲರ್ ದಯಾನಂದ ತೊಕ್ಕೊಟ್ಟು,ಹರೀಶ್ ಅಂಬ್ಲಮೊಗರು, ಗೋಪಿನಾಥ್ ಬಗಂಬಿಲ,  ಶಿವಾಜಿ, ದಾಮೋದರ್, ನಾರಾಯಣ್ ಬಿ., ಲಕ್ಷ್ಮೀ ನಾರಾಯಣ್, ಗಂಗಾಧರ್,  ಶಿಕ್ಷಕಿಯರಾದ ಭಾರತ್ ಹೈಸ್ಕೂಲ್ ಮುಖ್ಯೋಪಾಧ್ಯಾಯಿನಿ ವಿನಯ ಕುಮಾರಿ ,  ನಿವೃತ್ತ ಶಿಕ್ಷಕಿ ಜಾನಕಿ ಪುತ್ರನ್,ವೀರಾಂಜನೇಯ ವ್ಯಾಯಾಮ ಶಾಲೆಯ ಶಿಕ್ಷಕರು ವಿಜಯ ಅಮೀನ್ ಉಪಸ್ಥಿತರಿದ್ದರು.
ಭಗತ್ ಸಿಂಗ್ ಸೇವಾ ಪ್ರತಿಷ್ಠಾನದ ಗೌರವ ಸಲಹೆಗಾರ ಆನಂದ ಅಸೈಗೋಳಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಗಣೇಶ್ ಕಾಪಿಕಾಡ್ ಸ್ವಾಗತಿಸಿದರು. ಕಿರಣ್ ಕೊಲ್ಯ ವಂದಿಸಿದರು

Exit mobile version