Site icon Ullalavani

ಉಳ್ಳಾಲ ನಗರಸಭೆ ವ್ಯಾಪ್ತಿ ರಿಕ್ಷಾ ಚಾಲಕರುಗಳಿಗೆ ಉಚಿತ ವ್ಯಾಕ್ಸಿನ್

ಉಳ್ಳಾಲ: ಉಳ್ಳಾಲ ನಗರಸಭೆ ವ್ಯಾಪ್ತಿಯ ರಿಕ್ಷಾ ಚಾಲಕರ ಮನವಿಗೆ ಸ್ಪಂಧಿಸಿರುವ ಶಾಸಕರು ಉಳ್ಳಾಲ ಸಮುದಾಯ ಆರೋಗ್ಯ ಕೇಂದ್ರದ ಸಹಕಾರದೊಂದಿಗೆ 300 ಕ್ಕೂ ಅಧಿಕ ರಿಕ್ಷಾ ಚಾಲಕರುಗಳಿಗೆ ಉಚಿತ ವ್ಯಾಕ್ಸಿನ್ ಒದಗಿಸಿಕೊಟ್ಟಿದ್ದಾರೆ ಎಂದು ಉಳ್ಳಾಲ ನಗರಸಭೆ ಉಪಾಧ್ಯಕ್ಷ ಅಯೂಬ್ ಮಂಚಿಲ ಹೇಳಿದರು.
ಅವರು ತೊಕ್ಕೊಟ್ಟು ಸಮೀಪದ ಕಲ್ಲಾಪು ಖಾಸಗಿ ಸಭಾಂಗಣದಲ್ಲಿ ಉಳ್ಳಾಲ ನಗರಸಭೆ ವ್ಯಾಪ್ತಿಯ ರಿಕ್ಷಾ ಚಾಲಕರಿಗೆ ಹಮ್ಮಿಕೊಂಡ ಉಚಿತ ವ್ಯಾಕ್ಸಿನ್ ನೀಡುವ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು.
ಉಳ್ಳಾಲ ನಗರಸಭೆ ಅಧ್ಯಕ್ಷೆ ಚಿತ್ರಾ ಚಂದ್ರಕಾಂತ್ ಮಾತನಾಡಿ, ಸಂಧಿಗ್ಧ ಸ್ಥಿತಿಯಲ್ಲಿ ರಿಕ್ಷಾ ಚಾಲಕರು ಹಣ ಕೊಟ್ಟು ವ್ಯಾಕ್ಸಿನ್ ಪಡೆಯಲು ಅಸಾಧ್ಯ. ಅವರ ಕಷ್ಟಕ್ಕೆ ಶಾಸಕರು ಸ್ಪಂಧಿನೆ ಕೃತಜ್ಞಕಾಪೂರ್ವ ಎಂದರು.
ಈ ವೇಳೆ ಉಳ್ಳಾಲ ನಗರಸಭೆ ಅಧ್ಯಕ್ಷೆ ಚಿತ್ರಾ ಚಂದ್ರಕಾಂತ್, ಉಳ್ಳಾಲ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ವಿದ್ಯಾಸಾಗರ್, ಉಳ್ಳಾಲ ನಗರಸಭೆ ಸದಸ್ಯರಾದ ಜಬ್ಬಾರ್, ರವಿಚಂದ್ರ ಗಟ್ಟಿ, ಅಝೀಝ್, ವೀಣಾ ಡಿಸೋಜ, ಭಾರತಿ, ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷರುಗಳಾದ ಮುಸ್ತಾಫ ಅಬ್ದುಲ್ಲಾ, ಉಸ್ಮಾನ್ ಕಲ್ಲಾಪು, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕ ಅಧ್ಯಕ್ಷೆ ದೇವಕಿ ಉಳ್ಳಾಲ್, ಇಂಟಕ್ ಕ್ಷೇತ್ರ ಅಧ್ಯಕ್ಷ ಹರೀಶ್ ರಾವ್ ಮಡ್ಯಾರ್, ಉಪಾಧ್ಯಕ್ಷ ನಝೀರ್ ಬಾರ್ಲಿ ಮುಖಂಡರುಗಳಾದ ರಿಚಡ್9 ಡಿಸೋಜ, ಸುರೇಂದ್ರ ಬಗಂಬಿಲ, ಆಸೀಫ್ ಅಂಬಟ್ಟಾಡಿ, ರಿಕ್ಷಾ ಚಾಲಕ ಹಾಗೂ ಮಾಲಕರ ಸಂಘದ ಅಧ್ಯಕ್ಷರುಗಳಾದ ಛೋಟಾ ಮಂಗಳೂರು ಪಾರ್ಕಿನ ಲಕ್ಷ್ಮಣ್ ಶೆಟ್ಟಿಗಾರ್, ಓವರ್ ಬ್ರಿಡ್ಜ್ ಪಾರ್ಕಿನ ಆನಂದ್, ಕಲ್ಲಾಪು ಪಾರ್ಕಿನ ಮಯ್ಯದ್ದಿ, ಒಳಪೇಟೆ ಪಾಕ್9ನ ಅಬ್ದುಲ್ ರಹಿಮಾನ್ ಮಂಚಿಲ, ಮಾಸ್ತಿಕಟ್ಟೆ ಪಾಕ್9ನ ಹನೀಫ್ , ತೊಕ್ಕೊಟ್ಟು ಬಸ್ ನಿಲ್ದಾಣದ ಮುತ್ತಲಿಬ್ ಉಪಸ್ಥಿತರಿದ್ದರು.

Exit mobile version