Site icon Ullalavani

ವಿವಾಹಿತೆ ನಾಪತ್ತೆ

ಉಳ್ಳಾಲ: ಬಾಡಿಗೆ ಮನೆಯಲ್ಲಿ ವಾಸವಿದ್ದ ಮಹಿಳೆಯೊಬ್ಬರು ನಾಪತ್ತೆಯಾಗಿರುವ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಉಳ್ಳಾಲದ ಅಬ್ಬಕ್ಕ ವೃತ್ತ ಬಳಿಯಿರುವ ಪದ್ಮಶಾಲಿ ಕಂಪೌಂಡ್ ಎಂಬಲ್ಲಿನ ಬಾಡಿಗೆ ಮನೆಯಲ್ಲಿ ವಾಸವಿದ್ದ ನಾಗೇಂದ್ರ ಎಂಬವರ ಪತ್ನಿ ಪ್ರೇಮ(30) ನಾಪತ್ತೆಯಾದವರು. ಜು.10 ರಂದು ಮನೆಯಿಂದ ಹೊರಹೋದವರು ವಾಪಸ್ಸಾಗದೆ ನಾಪತ್ತೆಯಾಗಿದ್ದಾರೆ. ಇವರನ್ನು ಸ್ವಂತ ಊರು ದಾವಣಗೆರೆಯಲ್ಲಿ ಮತ್ತು ಸಂಬಂಧಿಕರ ಮನೆಗಳಲ್ಲಿ ಹುಡುಕಾಡಿದರೂ ಪತ್ತೆಯಾಗಿಲ್ಲ. ಎಲ್ಲಿಯಾದರೂ ಪತ್ತೆಯಾದಲ್ಲಿ ಉಳ್ಳಾಲ ಪೊಲೀಸರಿಗೆ ಮಾಹಿತಿ ನೀಡುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Exit mobile version