
ಪಾವೂರು: ಎಸ್‍ಡಿಪಿಐ ಪಾವೂರು ಗ್ರಾಮ ಸಮಿತಿಯಿಂದ ಪಾವೂರು ಪಂಚಾಯತ್ ಬಳಿ ಆರಂಭಿಸಲಾದ ಮಾಹಿತಿ ಮತ್ತು ಸೇವಾ ಕೇಂದ್ರವನ್ನು ಎಸ್‍ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಹನ್ನಾನ್ ಉದ್ಘಾಟಿಸಿದರು.
ಎಸ್‍ಡಿಪಿಐ ಪಾವೂರು ಗ್ರಾಮಾಧ್ಯಕ್ಷ ಎಂ. ಕೆ.ಕಮರುದ್ದೀನ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಕಾರ್ಯದರ್ಶಿ ಅಶ್ರಫ್ ಮಾಚಾರ್, ಜಿಲ್ಲಾಧ್ಯಕ್ಷ ಅತ್ತಾವುಲ್ಲಾ ಜೋಕಟ್ಟೆ, ಉಪಾಧ್ಯಕ್ಷ ಇಕ್ಬಾಲ್, ಕ್ಷೇತ್ರಾಧ್ಯಕ್ಷ ಅಬ್ಬಾಸ್ ಕಿನ್ಯ, ಪ್ರಧಾನ ಕಾರ್ಯದರ್ಶಿ ಲತೀಫ್ ಕೋಡಿಜಾಲ್, ಎಸ್‍ಡಿಟಿಯು ಕ್ಷೇತ್ರಾಧ್ಯಕ್ಷ ಇರ್ಷಾದ್ ಅಬೂಬಕ್ಕರ್, ಪಾವೂರು ಗ್ರಾಮ ಪಂಚಾಯತ್‍ಅಧ್ಯಕ್ಷೆ ಖಮರುನ್ನಿಸಾ, ಉಪಾಧ್ಯಕ್ಷ ಮುಹಮ್ಮದ್ ಅನ್ಸಾ ರ್, ಸದಸ್ಯರಾದ ಇಕ್ಬಾಲ್ ಇನೋಳಿ, ರಿಝ್ವಾನ್ ಮಲಾರ್, ವಲೇರಿಯನ್ ಡಿಸೋಜ, ಖತೀಜಾ ಲತೀಫ್, ಮಾಜಿ ಸದಸ್ಯರಾದ ನಾಸೀರ್ ಮಲಾರ್, ಮಹಮ್ಮದ್ ಬದ್ರಿಯಾ ನಗರ, ಬದ್ರಿಯಾ ಜುಮಾ ಮಸೀದಿಯ ಉಪಾಧ್ಯಕ್ಷ ಶರೀಫ್, ಮೆಹರುನ್ನಿಸಾ ಬಶೀರ್, ಅಕ್ರಂ ಹಸನ್, ಸಿರಾಜುದ್ದೀನ್ ಅರ್ಖಾನ, ಹೈದರ್ ಅಡ್ಕರೆಪಡ್ಪು ಮೊದಲಾದವರು ಉಪಸ್ಥಿತರಿದ್ದರು. ಸಮೀರ್ ಟಿಪ್ಪುನಗರ ಕಾರ್ಯಕ್ರಮ ನಿರೂಪಿಸಿದರು.