
ಉಳ್ಳಾಲ: ಉಳ್ಳಾಲ ನಗರ ಸಭಾ ವ್ಯಾಪ್ತಿಯಲ್ಲಿ ಬೀದಿ ಬದಿ ವ್ಯಾಪಾರಿಗಳು ತಮ್ಮ ಬದುಕನ್ನು ರೂಪಿಸಿಕೊಳ್ಳಲು ಬೀದಿ ಬದಿ ವ್ಯಾಪಾರ ಮಾಡುತ್ತಾ ಬಂದಿದ್ದು ಇವರಿಗೆ ನಮ್ಮ ನಗರ ಸಭೆಯ ಆಡಳಿತ ಉತ್ತಮ ಸಹಕಾರ ನೀಡುತ್ತಾ ಬಂದಿದ್ದು, ಮುಂದಿನ ದಿನಗಳಲ್ಲಿಯೂ ವ್ಯಾಪಾರಿಗಳು ಸರಕಾರದ ಯೋಜನೆಯನ್ನು ಸದುಪಯೋಗಪಡಿಸಿಕೊಂಡು ಉತ್ತಮ ಕಾರ್ಯವನ್ನು ಮುಂದುವರೆಸಿಕೊಂಡು ನಗರಸಭೆಯ ಅ„ಕಾರಿಗಳೊಂದಿಗೆ ಅನ್ಯೋನ್ಯತೆಯನ್ನು ಉಳಿಸಿಕೊಂಡು ಹೋಗಬೇಕು ಎಂದು ಉಳ್ಳಾಲ ನಗರಸಭಾ ಉಪಾಧ್ಯಕ್ಷ ಅಯ್ಯೂಬ್ ಮಂಚಿಲ ಅಭಿಪ್ರಾಯಪಟ್ಟರು.
ಕೇಂದ್ರ ವಸತಿ ಮತ್ತು ವ್ಯವಹಾರ ಮಂತ್ರಾಲಯ, ಭಾರತ ಸರಕಾರ , ನವದೆಹಲಿ ಆಯುಕ್ತಾಲಯ ಉದ್ಯಮಶೀಲತೆ ಮತ್ತು ಜೀವನೋಪಾಯ ಬೆಂಗಳೂರು, ದ.ಕ.ಜಿಲ್ಲಾಡಳಿತ ಮತ್ತು ಉಳ್ಳಾಲ ನಗರ ಸಭೆ ವತಿಯಿಂದ ಉಳ್ಳಾಲ ನಗರ ಸಭಾ ಸಮುದಾಯ ಭವನದಲ್ಲಿ ಶನಿವಾರ ನಡೆದ ದೀನ್ ದಯಾಳ್ ಅಂತ್ಯೋದಯ ಯೋಜನೆ- ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ(ಡೇ ನಲ್ಮ್) ಪ್ರಧಾನ ಮಂತ್ರಿ ಬೀದಿ ಬದಿ ವ್ಯಾಪಾರಿಗಳ ಆತ್ಮ ನಿರ್ಭರ್ ನಿ„ ಯೋಜನೆಯಡಿ “ಸಂಕಲ್ಪದಿಂದ ಸಿದ್ಧಿ” ನಾನೂ ಕೂಡ ಡಿಜಿಟಲ್ 2.0 ಮತ್ತು ಸ್ವ-ನಿ„ಯಿಂದ ಸಮೃದ್ಧಿ ವಿಶೇಷ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.
ಡೇ ನಲ್ಮ್ ದ.ಕ ಜಿಲ್ಲಾ ಅಭಿಯಾನದ ವ್ಯವಸ್ಥಾಪಕಿ ಐರಿನ್ ರೆಬೆಲ್ಲೋ ಸಂಕಲ್ಪ ಸಿದ್ಧಿ ಕಾರ್ಯಕ್ರಮದ ಬಗ್ಗೆ ಮಾತನಾಡಿ ಬೀದಿ ಬದಿ ವ್ಯಾಪಾರಿಗಳು ತನ್ನ ಜೀವನೋಪಾಯಕ್ಕೆ ಸುರಕ್ಷಿತವಾದ ರೀತಿಯಲ್ಲಿ ವ್ಯಾಪಾರ ಮಾಡಿ, ತಾನು ಪಡೆದ ಸಾಲವನ್ನು ಕರಾರುವತ್ತಾಗಿ ಮರುಪಾವತಿ ಮಾಡಿ, ಇದರ ಆದಾರದ ಮೇಲೆ ಹೆಚ್ಚಿನ ಸಾಲವನ್ನು ಪಡೆದು ತನ್ನ ವ್ಯಾಪಾರವನ್ನು ಅಭಿವೃದ್ಧಿ ಪಡಿಸಿ ಜೀವನಮಟ್ಟವನ್ನು ಸುದಾರಣೆ ಮಾಡಿ ಎಂದರು.
ಇದೇ ಸಂದರ್ಭದಲ್ಲಿ 61 ಬೀದಿ ಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ಮತ್ತು ಮಾರಾಟ ಪ್ರಮಾಣ ಪತ್ರವನ್ನು ವಿತರಿಸಲಾಯಿತು. ಮಂಗಳೂರು ಆರ್ಥಿಕ ಸಾಕ್ಷರತಾ ಸಂಪನ್ಮೂಲ ಕೇಂದ್ರದ ಸಮಾಲೋಚಕ ಲತೇಶ್ ಡಿಜಿಟಲ್ ವ್ಯವಹಾರ ಮತ್ತು ಬ್ಯಾಂಕಿಂಗ್ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.ಸ್ವರ್ಣ ಸ್ವ-ಸಹಾಯ ಗುಂಪುಗಳ ನಗರ ಮಟ್ಟದ ಒಕ್ಕೂಟದ ಅಧ್ಯಕ್ಷೆ ಭಾರತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ಧರು.
ಬ್ಯಾಂಕ್ ಆಫ್ ಬರೋಡ ತೊಕ್ಕೋಟ್ಟು ಶಾಖೆಯ ಮೆನೇಜರ್ ಲೋಹಿತ್ ಕುಮಾರ್, ಕರ್ನಾಟಕ ಬ್ಯಾಂಕ್ ತೊಕ್ಕೋಟ್ಟು ಶಾಖೆಯ ಮೆನೇಜರ್ ರಮಾನಾಥ ಶೆಣೈ ಉಪಸ್ಥಿತರಿದ್ದರು.
ಉಳ್ಳಾಲ ನಗರ ಸಭೆಯ ಸಮುದಾಯ ಸಂಘಟಕರಾದ ರೋಹಿನಾಥ್ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿದರು. ಉಳ್ಳಾಲ ನಗರ ಸಭೆಯ ಸಿಬ್ಬಂದಿ ಸಪ್ನಾ ಪ್ರಾರ್ಥನೆ ನೆರವೇರಿಸಿ ವಂದಿಸಿದರು.