Site icon Ullalavani

ಉಳ್ಳಾಲ: ಮಳೆಗೆ ವ್ಯಾಪಕ ಹಾನಿ

ಉಳ್ಳಾಲ: ಉಳ್ಳಾಲದಾದ್ಯಂತ ಮಳೆ ಮುಂದುವರೆದಿದ್ದು, ಗಾಳಿ ಮಳೆಯಿಂದ ಉಳ್ಳಾಲ ಉಳಿಯ ಮತ್ತು ಹೊೈಗೆಯಲ್ಲಿ ಎರಡು ಮನೆಗಳಿಗೆ ಹಾನಿಯಾಗಿದ್ದು , ಸೋಮೇಶ್ವರ ಮತ್ತು ಉಳ್ಳಾಲದಲ್ಲಿ ಸಮುದ್ರದ ಅಬ್ಬರ ಮುಂದುವರೆದಿದ್ದು ಯಾವುದೇ ಹಾನಿ ವರದಿಯಾಗಿಲ್ಲ.
ಉಳಿಯದ ಶೈನಿ ಡಿ.ಸೋಜಾ ವರ ಮನೆಯ ಛಾವಣಿ ಕುಸಿದು ಬಿದ್ದು ಹಾನಿಯಾದರೆ, ಹೊೈಗೆಯ ಫೆಲಿಕ್ಸ್ ಡಿ.ಸೋಜಾ ಅವರ ಮನೆಗೆ ಗಾಳಿ ಮಳೆಯಿಂದ ಹಾನಿಯಾಗಿದೆ. ಉಳಿದಂತೆ ಉಳ್ಳಾಲದಲ್ಲಿ ಸಣ್ಣಪುಟ್ಟ ಘಟನೆಗಳನ್ನು ಹೊರತುಪಡಿಸಿದರೆ ಶುಕ್ರವಾರ ಯಾವುದೇ ಹಾನಿ ಸಂಭವಿಸಿಲ್ಲ. ಸೋಮೇಶ್ವರ ಉಚ್ಚಿಲ ಬಟ್ಟಪ್ಪಾಡಿಯಲ್ಲಿ ಬೀಚ್ ರಸ್ತೆ ಸಂಪೂಣರ ಬಂದ್ ಆಗಿದ್ದು ಸ್ಥ;ಳೀಯ ನಿವಾಸಿಗಳು ಖಾಸಗಿ ಜಾಗದಲ್ಲಿ ನಡೆದುಕೊಂಡು ಮನೆ ಸೇರುತ್ತಿದ್ದಾರೆ.

Exit mobile version