Site icon Ullalavani

ಸೋಮೇಶ್ವರ ಪುರಸಭೆ ಸಮೃದ್ಧಿ ವಿಶೇಷ ಮೇಳಕ್ಕೆ ಚಾಲನೆ

ಸೋಮೇಶ್ವರ,: ಪ್ರಧಾನ ಮಂತ್ರಿ ಸ್ವ-ನಿ„ ಯೋಜನೆಯಲ್ಲಿ ದ.ಕ ಜಿಲ್ಲೆಯ ಹೆಚ್ಚಿನ ಬ್ಯಾಂಕುಗಳು ಸಾಲ ಮಂಜೂರು ಮಾಡಿದ್ದರಿಂದ ಈ ಯೋಜನೆಯ ಪ್ರಗತಿಯಲ್ಲಿ ಕರ್ನಾಟಕದಲ್ಲೇ ದ.ಕ. ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ, ಇದಕ್ಕೆ ಸಾಲಾ ನೀಡುರಯವ ಬ್ಯಾಂಕುಗಳ ಪಾತ್ರವೂ ಮಹತ್ವದ್ದಾಗಿದ್ದು, ವ್ಯಾಪಾರಸ್ಥರು ಪಡೆದ ಸಾಲವನ್ನು ಸದುಪಯೋಗಡಿಸುವುದರೊಂದಿಗೆ ಕೊರೋನಾ ಮಾರ್ಗಸೂಚಿ ಪಾಲಿಸಿ, ಕೊರೋನಾ ಲಸಿಕೆ ಖಡ್ಡಾಯವಾಗಿ ಹಾಕಿಸಿ ಸೋಮೇಶ್ವರ ಪುರಸಭಾ ವ್ಯಾಪ್ತಿಯಲ್ಲಿ ವ್ಯಾಪಾರನಡೆಸಬೇಕು ಎಂದು ್ನ ಸೋಮೇಶ್ವರ ಪುರಸಭಾ ಮುಖ್ಯಾ„ಕಾರಿ ವಾಣಿ.ವಿ.ಆಳ್ವ ಅಭಿಪ್ರಾಯಪಟ್ಟರು.
ಕೇಂದ್ರ ವಸತಿ ಮತ್ತು ವ್ಯವಹಾರ ಮಂತ್ರಾಲಯ, ಭಾರತ ಸರಕಾರ, ನವದೆಹಲಿ ಆಯುಕ್ತಾಲಯ ಉದ್ಯಮಶೀಲತೆ ಮತ್ತು ಜೀವನೋಪಾಯ ಬೆಂಗಳೂರು, ದ.ಕ.ಜಿಲ್ಲಾಡಳಿತ ಮತ್ತು ಸೋಮೇಶ್ವರ ಪುರಸಭೆ ವತಿಯಿಂದ ಸೋಮೇಶ್ವರ ಪುರಸಭಾ ಸಭಾಂಗಣದಲ್ಲಿ ಶುಕ್ರವಾರ ನಡೆದದೀನ್ ದಯಾಳ್ ಅಂತ್ಯೋದಯ ಯೋಜನೆ- ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ(ಡೇ ನಲ್ಮ್) ಪ್ರಧಾನ ಮಂತ್ರಿ ಬೀದಿ ಬದಿ ವ್ಯಾಪಾರಿಗಳ ಆತ್ಮ ನಿರ್ಭರ್ ನಿಃ ಯೋಜನೆಯಡಿ “ಸಂಕಲ್ಪದಿಂದ ಸಿದ್ಧಿ” ನಾನೂ ಕೂಡ ಡಿಜಿಟಲ್ 2.0 ಮತ್ತು ಸ್ವ-ನಿಃಯಿಂದ ಸಮೃದ್ಧಿ ವಿಶೇಷ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದರು.
ಸೋಮೇಶ್ವರ ಪುರಸಭಾ ವ್ಯಾಪ್ತಿಯಲ್ಲಿ ಬೀದಿ ಬದಿ ವ್ಯಾಪಾರಿಗಳು ಸಾಲ ಸೌಲಭ್ಯಕ್ಕಾಗಿ 249 ಅರ್ಜಿಗಳು ಬಂದಿದ್ದವು ಅದರಲ್ಲಿ 143 ಅರ್ಜಿದಾರರಿಗೆ ಸಮಾಜದ ಮುಖ್ಯವಾಹಿನಿಯಲ್ಲಿ ಆರ್ಥಿಕವಾಗಿ ಸ್ವಲ್ಪ ಮಟ್ಟದಲ್ಲಿ ಮುಂದೆ ಬರಲು ಪ್ರಧಾನ ಮಂತ್ರಿ ಸ್ವ-ನಿ„ ಯೋಜನೆಯಲ್ಲಿ ತಲಾ 10,000ದ ಹಾಗೆ ಸಾಲ ಸೌಲಭ್ಯ ದೊರತಿದ್ದವು, ಸಾಲವನ್ನು ಕರಾರುವತ್ತಾಗಿ ಕಟ್ಟಿದ 71 ಫಲಾನುಭವಿಗಳಿಗೆ ಈ ಬಾರಿ ತಲಾ 20,000 ದ ಹಾಗೆ ಬಂದಿರುತ್ತದೆ. ಸಾಲ ಮರುಪಾವತಿ ನಮ್ಮ ಗುರಿಯಾಗಿರಬೇಕು ಎಂದರು.
ಡೇ ನಲ್ಮ್ ದ.ಕ ಜಿಲ್ಲಾ ಅಭಿಯಾನದ ವ್ಯವಸ್ಥಾಪಕಿ ಐರಿನ್ ರೆಬೆಲ್ಲೋ ಸಂಕಲ್ಪ ಸಿದ್ಧಿ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.
ಮಂಗಳೂರು ಆರ್ಥಿಕ ಸಾಕ್ಷರತಾ ಸಂಪನ್ಮೂಲ ಕೇಂದ್ರದ ಸಮಾಲೋಚಕ ಲತೇಶ್ ಡಿಜಿಟಲ್ ವ್ಯವಹಾರ ಮತ್ತು ಬ್ಯಾಂಕಿಂಗ್ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
ಬ್ಯಾಂಕ್ ಆಫ್ ಬರೋಡ ತಲಪಾಡಿ ಶಾಖೆಯ ಮೆನೇಜರ್ ಸಂದೇಶ್ ಶೆಟ್ಟಿ, ಸೋಮೇಶ್ವರ ಪುರಸಭೆಯ ಸಿಬಂದಿ ಶ್ರೀನಾಥ್ ಉಪಸ್ಥಿತರಿದ್ದರು.
ಸೋಮೇಶ್ವರ ಪುರಸಭೆ ಸಮುದಾಯ ಸಂಘಟಕರಾದ ರೋಹಿನಾಥ್ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿದರು. ಸೋಮೇಶ್ವರ ಪುರಸಭಾ ಸಿಬಂದಿ ರೂಪ ವಂದಿಸಿದರು.

Exit mobile version