Site icon Ullalavani

ಉಳ್ಳಾಲ ಠಾಣೆಯಲ್ಲಿ ಕಳ್ಳತನ ಆರೋಪಿಗಳ ಪೆರೇಡ್

ಉಳ್ಳಾಲ: ಲಾಕ್ಡೌನ್ ತೆರವು ಬಳಿಕ ಕಳವು ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಂಗಳೂರು ಪೊಲೀಸ್ ಕಮೀಷನರ್ ಅವರ ಆದೇಶದಂತೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ 35 ಮಂದಿ ಕಳವು ಆರೋಪಿಗಳ ಪೆರೇಡ್ ನಡೆಯಿತು.
ಉಳ್ಳಾಲ ಠಾಣಾ ವ್ಯಾಪ್ತಿಯ ಜಾನುವಾರು ಕಳವು ಮತ್ತು ಮನೆ ಕಳವು ಪ್ರಕರಣಗಳು ಇರುವಂತಹ ಆರೋಪಿಗಳನ್ನು ಠಾಣೆಗೆ ಕರೆಯಿಸಿ ಠಾಣಾಧಿಕಾರಿ ಪೆರೇಡ್ ನಡೆಸಿದರು. ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ 60 ಮಂದಿ ಕಳವು ಪ್ರಕರಣಗಳಿಗೆ ಸಂಬಂಧಿಸಿದ ಆರೋಪಿಗಳಿದ್ದಾರೆ. ಅವರೆಲ್ಲರಿಗೂ ಠಾಣಾಧಿಕಾರಿಗಳು ಸೂಚನೆ ನೀಡಿದ ಹಿನ್ನೆಲೆಯಲ್ಲಿ 35 ಮಂದಿ ಠಾಣೆಗೆ ಹಾಜರಾಗಿದ್ದಾರೆ. ಉಳಿದ 25 ಮಂದಿ ಹಾಜರಾಗಲಿಲ್ಲ. . ಎಲ್ಲರನ್ನು ಉಳ್ಳಾಲ ಠಾಣೆಯ ಕಚೇರಿ ಎದುರುಗಡೆ ವಿಚಾರಣೆ ನಡೆಸಿದ ಠಾಣಾಧಿಕಾರಿಗಳು ಎಲ್ಲರಿಗೂ ಎಚ್ಚರಿಕೆ ನೀಡಿ ಮುಂಜಾಗ್ರತಾ ಕ್ರಮವಾಗಿ ಸೆಕ್ಷನ್ 107, 110 ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಿಡಲಾಗಿದೆ.
ಈ ಸಂದರ್ಭ ಠಾಣಾಧಿಕಾರಿ ಸಂದೀಪ್, ಉಪ ನಿರೀಕ್ಷಕರಾದ ಪ್ರದೀಪ್, ರೇವಣ್ಣ ಸಿದ್ಧಯ್ಯ, ಶಿವು ಕುಮಾರ್ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

Exit mobile version