
ಉಳ್ಳಾಲ: ಇಲ್ಲಿನ ಕೋಟೆಪುರ ಸಮುದ್ರ ತೀರದಲ್ಲಿ ಅಕ್ರಮವಾಗಿ ಮರಳುಗಾರಿಕೆ ನಡೆಸುತ್ತಿದ್ದ ನಾಲ್ಕು ಲಾರಿ ಸಹಿತ ಮರಳು, ನಾಲ್ಕು ಎಸ್ಕಾರ್ಟ್ ದ್ವಿಚಕ್ರ ವಾಹನಗಳು ಸೇರಿದಂತೆ ಓರ್ವನ ಬಂಧನ ಹಾಗೂ 15 ಮಂದಿ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕೋಟೆಪುರ ನಿವಾಸಿ ಶಾರುಖ್ ಬಂಧಿತ. ಆರೋಪಿಗಳು ಕೋಟೆಪುರ ಸಮುದ್ರ ತೀರದಲ್ಲಿ ಅಕ್ರಮವಾಗಿ ಮರಳುಗಾರಿಕೆ ನಡೆಸಿ, ಕೇರಳ ಕಡೆಗೆ ಸಾಗಾಟ ನಡೆಸುತ್ತಿರುವ ಖಚಿತ ಮಾಹಿತಿ ಮೇರೆಗೆ ಉಳ್ಳಾಲ ಪೊಲೀಸರು ಸ್ಥಳಕ್ಕೆ ದಾಳಿ ನಡೆಸಿ ಕಾರ್ಯಾಚರಣೆ ನಡೆಸಿದ್ದಾರೆ. ಈ ಸಂದರ್ಭ ಸ್ಥಳದಲ್ಲಿ ಸಿಕ್ಕ ಎರಡು ಲೋಡ್ ಮರಳು ಇದ್ದ ಲಾರಿಗಳು ಹಾಗೂ ಕೇರಳ ಸಾಗಿಸುವವರೆಗೆ ಇವರಿಗೆ ಪೊಲೀಸರಿರುವ ಕುರಿತು ಮಾಹಿತಿ ನೀಡಲು ಎಸ್ಕಾರ್ಟ್ ಇರುವ ನಾಲ್ಕು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.