ಉಳ್ಳಾಲ: ಉಳ್ಳಾಲ ನಗರಸಭಾ ವ್ಯಾಪ್ತಿಯ ಚೆಂಬುಗುಡ್ಡೆ ಹಿಂದೂ ರುದ್ರಭೂಮಿಯಲ್ಲಿ ಇನ್‍ಫೆÇೀಸಿಸ್ ಫೌಂಡೇಷನ್ ವತಿಯಿಂದ 1.7 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ವಿದ್ಯುತ್ ಚಿತಾಗಾರಕ್ಕೆ ಸಂಬಂಧಿಸಿದಂತೆ ಶಿಲಾನ್ಯಾಸಕ್ಕೆ ದಿನ ನಿಗದಿಯಾಗುತ್ತಿದ್ದಂತೆ ವಿದ್ಯುತ್ ಚಿತಾಗಾರದ ನಿರ್ಮಾಣವನ್ನು ರುದ್ರಭೂಮಿಯ ಪಕ್ಕದಲ್ಲಿರುವ ಇನ್ನೊಂದು ಸ್ಥಳಕ್ಕೆ ವರ್ಗಾಯಿಸಬೇಕು ಎಂದು ಸಹಿ ಅಭಿಯಾನ ಆರಂಭಗೊಂಡಿದ್ದು, ಗೊಂದಲಗಳ ನಡುವೆ ಶಿಲಾನ್ಯಾಸ ಕಾರ್ಯಕ್ರಮವನ್ನು ಮುಂದೂಡಲಾಗಿದೆ.
ಈಗಿರುವ ರುದ್ರಭೂಮಿಯ ಕಟ್ಟಿಗೆಯಿಂದ ಶವದಹನ ಮಾಡುವ ಸಿಲಿಕಾನ್ ಶವಾಗಾರದ ಬಳಿಯೇ ವಿದ್ಯುತ್ ಚಿತಾಗಾರ ನಿರ್ಮಾಣದಿಂದ ವಿದ್ಯುತ್ ಚಿತಾಗಾರಕ್ಕೆ ಹಾನಿಯಾಗುವ ಸಾಧ್ಯತೆ ಇದೆ. ಈಗಾಗಲೇ ಒಂದೂವರೆ ಎಕೆರೆ ಪ್ರದೇಶ ರುದ್ರಭೂಮಿಯಲ್ಲಿ ಬಹುಗ್ರಾಮ ಕುಡಿಯುವ ನೀರು ಸೇರಿದಂತೆ ಇತರ ಟ್ಯಾಂಕ್‍ಗಳ ನಿರ್ಮಾಣದಿಂದ ಬಹುಪಾಲು ಜಾಗ ಕಳೆದುಕೊಂಡಿದ್ದು, ಇದೀಗ ವಿದ್ಯುತ್ ಚಿತಾಗಾರ ನಿರ್ಮಾಣದಿಂದ ಸ್ಥಳದ ಅಭಾವ ಕಾಡುವುದುರಿಂದ ಪಕ್ಕದಲ್ಲೇ ಇರುವ ಖಾಲಿ ಇರುವ ರುದ್ರಭೂಮಿಯಲ್ಲಿ ವಿದ್ಯುತ್ ಚಿತಾಗಾರ ನಿರ್ಮಿಸಬೇಕು ಎಂದು ಸಹಿ ಸಂಗ್ರಹಣೆ ನಡೆಸಲಾಯಿತು.
ಹಿಂದೂ ರುದ್ರಭೂಮಿ ನಿರ್ವಹಣಾ ಸಮಿತಿ ಅಧ್ಯಕ್ಷ ಚಂದ್ರಹಾಸ ಉಳ್ಳಾಲ್ ಪ್ರತಿಕ್ರಿಯಿಸಿ ಈಗಾಗಲೇ 1.57 ಎಕೆರೆ ರುದ್ರಭೂಮಿಯಲ್ಲಿ ನೀರಿನ ಟ್ಯಾಂಕ್ ನಿರ್ಮಾಣಕ್ಕೆ ಸುಮಾರು 60 ಸೆಂಟ್ಸ್‍ಗೂ ಮಿಕ್ಕಿ ಭೂಮಿ ಮೀಸಲಿಟ್ಟಿದ್ದು, ರುದ್ರಭೂಮಿಯ ಪಕ್ಕದಲ್ಲಿರುವ ಖಾಲಿ ಜಾಗ ಇದೇ ರೀತಿ ಪರಬಾರೆಯಾಗುವ ಸಾಧ್ಯತೆಯಿದ್ದು, ಈಗಿರುವ ರುದ್ರಭೂಮಿಗೆ ಸಂಬಂಧಿಸಿದ ಎಲ್ಲಾ ಜಾಗವನ್ನು ಹಿಂದೂ ರುದ್ರಭೂಮಿಯ ಹೆಸರಲ್ಲಿ ನಮೂದು ಮಾಡಬೇಕು ಬಳಿಕ ಶಿಲಾನ್ಯಾಸಕ್ಕೆ ದಿನ ನಿಗದಿಪಡಿಸಲಾಗುವುದು. ಈ ನಿಟ್ಟಿನಲ್ಲಿ ಮಂಗಳೂರು ತಾಲೂಕು ತಹಶೀಲ್ದಾರ್ ಗುರುಪ್ರಸಾದ್, ಮಂಗಳೂರು ಉಪವಿಭಾಗ ಸಹಾಯಕ ಆಯುಕ್ತ ಮದನ್ ಮೋಹನ್ ಅವರನ್ನ ಭೇಟಿ ನೀಡಿ ಮಾತುಕತೆ ನಡೆಸಿದ್ದು ಅವರು ಆಶ್ವಾಸನೆ ನೀಡಿದ್ದು, ಹಿಂದೂ ರುದ್ರಭೂಮಿಗೆ ಜಾಗ ನೀಡುವ ವಿಚಾರದಲ್ಲಿ ಲಿಖಿತವಾಗಿ ನೀಡಿದ ಬಳಿಕ ಈ ಯೋಜನೆಗೆ ಚಾಲನೆ ನೀಡಲಾಗುವುದು. ಯಾವುದೇ ಕಾರಣಕ್ಕೂ ಇಂತಹ ದೊಡ್ಡ ಯೋಜನೆಯನ್ನು ರದ್ದಾಗಲು ಬಿಡುವುದಿಲ್ಲ ಎಂದರು.