
ಉಳ್ಳಾಲ: ಯೆನೆಪೋಯ ಸಂಸ್ಥೆಯು ಅಂತರಾಷ್ಟ್ರೀಯವಾಗಿ ಅನುಮೋದಿತ ವಾಗಿರುವ ರಷ್ಯಾದ SPUTNIK – V ಎಂಬ ಕೋವಿಡ್-19 ಲಸಿಕೆಯನ್ನು ನೀಡುವ ಅನುಮತಿಯನ್ನು ಪಡೆದುಕೊಂಡಿದೆ.
ಕೋವಿಡ್ – 19 ಆರಂಭಗೊಂಡ ಸಮಯದಿಂದ ಯೆನೆಪೋಯ ಸಂಸ್ಥೆಗಳು ತಮ್ಮ ಸಂಫೂರ್ಣ ಸಂಪನ್ಮೂಲಗಳನ್ನು ಕೋವಿಡ್ ಪೀಡಿತ ರೋಗಿಗಳ ಸುಧಾರಣೆಗೆ ಮೀಸಲ್ಪಟ್ಟಿದೆ. ಇದೇ ಗುರಿಯನ್ನು ಮುಂದಿಟ್ಟುಕೊಂಡು ಯೆನೆಪೋಯ ಸಂಸ್ಥೆಯು ಲಸಿಕೆಯನ್ನು ನೀಡುವ ಕರ್ನಾಟಕದ ಪ್ರಪ್ರಥಮ ಆರೋಗ್ಯ ಸಂಸ್ಥೆಗಳಲ್ಲಿ ಒಂದಾಗಿದೆ.
ಲಸಿಕೆಯನ್ನು ಪಡೆಯಲು ಇಚ್ಛಿಸುವ ಫಲಾನುಭವಿಗಳಿಗೆ ಸುಲಭವಾಗಿ ದೊರಕುವಂತೆ ಸಂಸ್ಥೆಯು ದೇರಳಕಟ್ಟೆ, ಯೆನೆಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆ ಹಾಗೂ ಯೆನೆಪೋಯ ಸ್ಪೆಷಾಲಿಟಿ ಆಸ್ಪತ್ರೆ, ಮಂಗಳೂರಿನಲ್ಲಿ ಲಸಿಕಾ ಕೇಂದ್ರಗಳನ್ನು ಸ್ಥಾಪಿಸಿದೆ.
ಸೂಕ್ತವಾದ ಸುರಕ್ಷತ ಮಾರ್ಗಸೂಚಿಗಳನ್ನು ಅನುಸರಿಸಿ ಫಲಾನುಭವಿಗಳಿಗೆ ಲಸಿಕೆ ಫಡೆಯಲು ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಸರ್ಕಾರ ಅನುಮೋದಿಸಿದ ದರಗಳಲ್ಲಿ ಲಸಿಕೆ ಲಭ್ಯವಿದೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.