Site icon Ullalavani

ವೀಕೆಂಡ್ ಕಫ್ರ್ಯೂನಲ್ಲಿ ಗಾಳ ಹಾಕಿ ಮೀನು ಹಿಡಿದ ಉಳ್ಳಾಲ ನಿವಾಸಿಗಳು

ಉಳ್ಳಾಲ: ವೀಕೆಂಡ್ ಕಪ್ರ್ಯೂನ ಎರಡನೇ ದಿನವಾದ ರವಿವಾರವೂ ಉಳ್ಳಾಲದಾದ್ಯಂತ ಅಂಗಡಿ ಮುಗ್ಗಟ್ಟುಗಳು ಸಂಪೂರ್ಣÀ ಬಂದ್ ಆಗಿದ್ದು, ವಾಹನಗಳು ಬೆರಳೆಣಿಕೆಯಷ್ಟೇ ರಸ್ತೆಗಿಳಿದಿದೆ, ಉಳ್ಳಾಲ ಸಮುದ್ರ ತೀರದಲ್ಲಿ ಹವ್ಯಾಸಿ ಮೀನುಗಾರರ ದಂಡೇ ಸಮುದ್ರ ತಟದಲ್ಲಿ ಆಧುನಿಕ ಗಾಳದ ಮೂಲಕ ಮೀನು ಹಿಡಿಯುವ ಮೂಲಕ ವೀಎಂಡ್ ಕಫ್ರ್ಯೂವನ್ನು ಸದುಪಯೋಗಪಡಿಸಿಕೊಂಡರು.
ಉಳ್ಳಾಲ ಮತ್ತು ಕೊಣಾಜೆ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ರವಿವಾರವೂ ಪೆÇಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರಿಂದ ಹೆಚ್ಚಿನ ವಾಹನಗಳು ರಸ್ತೆಗಿಳಿಯಿಲ್ಲ ಅಂಗಡಿ ಮುಗ್ಗಟ್ಟುಗಳು ಬಂದ್ ಇದ್ದ ಕಾರಣ ಬೆಳಗ್ಗಿನ ಜಾವ ಜನಸಂಖ್ಯೆಯೂ ಕಡಿಮೆ ಇತ್ತು. ಮಧ್ಯಾಹ್ನದ ನಂತರ ಕೆಲವು ವಾಹನಗಳು ಪೆÇಲೀಸರ ಕಣ್ಣು ತಪ್ಪಿಸಿ ಸಂಚರಿಸಿದವು. ಮಧ್ಯಾಹ್ನದ ನಂತರ ಉಳ್ಳಾಲ, ತೊಕ್ಕೊಟ್ಟು ಕಡೆಯಿಂದ ಬಂದ 50ಕ್ಕೂ ಹೆಚ್ಚು ಹವ್ಯಾಸಿಗಳು ಆಧುನಿಕ ಗಾಳ ಹಿಡಿದುಕೊಂಡು ಉಳ್ಳಾಲ ಸಮುದ್ರ ತೀರದಲ್ಲಿಮೀನು ಹಿಡಿಯುತ್ತಿರುವುದು ಕಂಡು ಬಂತು.

Exit mobile version