Site icon Ullalavani

ತ್ಯಾಜ್ಯಮುಕ್ತ ಬೀಚ್ ಆಗಿ ಪರಿವರ್ತನೆಗೆ ಸ್ಥಳೀಯರು ಮುಂದಾಗಿ : ಯು.ಟಿ ಖಾದರ್

ಉಳ್ಳಾಲ: ಉಳಿಯದ ಅಳಿವೆ ಬಾಗಿಲಿನ ನೇತ್ರಾವತಿ ನದಿ ತಟದ ಬೀಚ್ ಪ್ರವಾಸೋದ್ಯಮಕ್ಕೆ ಪೂರಕವಾಗಿದ್ದು, ಮುಂದಿನ ದಿನಗಳಲ್ಲಿ ಈ ಬೀಚ್ ಅಭಿವೃದ್ಧಿ ಸಂದರ್ಭದಲ್ಲಿ ಅಮಲು ಪದಾರ್ಥ, ಸಿಗರೇಟ್ ಸೇರಿದಂತೆ ತ್ಯಾಜ್ಯಮುಕ್ತ ಸುಂದರ ಬೀಚ್ ಆಗಿ ಪರಿವರ್ತಿಸಲು ಸ್ಥಳೀಯರು ಮುಂದಾಗಬೇಕು ಎಂದು ಶಾಸಕ ಯು.ಟಿ. ಖಾದರ್ ತಿಳಿಸಿದರು.
ಉಳಿಯ ಅಳಿವೆ ಪ್ರದೇಶವಾಗಿರುವ ನೇತ್ರಾವತಿ ನದಿ ತಟದ ರಿವರ್ ಸೈಡ್‍ಗೆ ಭೇಟಿ ನೀಡಿ ಮಾತನಾಡಿ ಸ್ಥಳೀಯರ ಸಮಸ್ಯೆ ಆಲಿಸಿ ಮಾತನಾಡಿದರು. ಈ ಪ್ರದೇಶದಲ್ಲಿ ಇಕ್ಕಟ್ಟಾದ ರಸ್ತೆಯಲ್ಲಿ ಹೊರಗಿನಿಂದ ಬರುವ ದ್ವಿಚಕ್ರ ವಾಹನ ಚಾಲಕರು ಅಡ್ಡಾದಿಡ್ಡಿಯಾಗಿ ಸಂಚರಿಸುತ್ತಾರೆ ಇದಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಶಾಸಕರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಉಳ್ಳಾಲ ನಗರಸಭಾ ಉಪಾಧ್ಯಕ್ಷ ಆಯೂಬ್, ಮಾಜಿ ಅಧ್ಯಕ್ಷ ಬಾಝಿಲ್ ಡಿ.ಸೋಜ, ಸದಸ್ಯರಾದಅಶ್ರಫ್, ವೀಣಾ ಉಳಿಯ, ಭಾರತಿ, ಸ್ವಪ್ನಾ ಹರೀಶ್, ರಾಜೇಶ್ ಯಾನೆ ಅಂತ ಗುರಿಕಾರ, ರಾಜೇಶ್ ಬಂಡಸಾಲೆ,ರಿಯಾಝ್, ಸಲೀಂ, ಕಿಂಗ್ ಸ್ಟಾರ್ ಸೇವಾ ಸಮಿತಿ ಉಳಿಯ ಹೊೈಗೆಪ್ರೇಮ್ ಪ್ರಕಾಶ್ ಡಿ.ಸೋಜ , ಕಾರ್ಯದರ್ಶಿ ಪ್ರಮಿತ್ ಡಿ.ಸೋಜ , ಪ್ರಕಾಶ್ ಡಿ.ಸೋಜ ಮತ್ತಿತರರು ಉಪಸ್ಥಿತರಿದ್ದರು.

Exit mobile version