Site icon Ullalavani

ತೊಕ್ಕೊಟ್ಟು : ಮನೆ ಕಳವು ಆರೋಪಿ ಬಂಧನ

ಉಬೇದುಲ್ಲ

ಉಳ್ಳಾಲ: ಮನೆ ಕಳವು ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಯನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.
ಬಂಟ್ವಾಳ ನಂದಾವರ ನಿವಾಸಿ ಬದ್ರುದ್ದೀನ್ (27) ಬಂಧಿತ. ಮಾ. 19 ರಂದು ತೊಕ್ಕೊಟ್ಟು ಒಳಪೇಟೆಯ ಜಯರಾಜ್ ಎಂಬವರ ಮನೆ ಬಾಗಿಲು ಮುರಿದು ಒಳನುಗ್ಗಿದ್ದ ಕಳ್ಳ 120 ಗ್ರಾಂ ತೂಕದ ಚಿನ್ನಾಭರಣ ಮತ್ತು 3 ಮೊಬೈಲುಗಳನ್ನು ಕಳವು ನಡೆಸಿದ್ದನು.
. ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇಂದು ಆರೋಪಿಯನ್ನು ಬಂಧಿಸಿರುವ ಉಳ್ಳಾಲ ಪೊಲೀಸರು ಆತನ ಬಳಿಯಿದ್ದ 95 ಗ್ರಾಂ ಚಿನ್ನ, ಎರಡು ಮೊಬೈಲ್ , ಒಂದು ಬೈಕ್ ಮತ್ತು ರಿಕ್ಷಾವನ್ನು ವಶಪಡಿಸಿಕೊಂಡಿದ್ದಾರೆ.
ರಿಕ್ಷಾ ಚಾಲಕನಾಗಿರುವ ಕುಡಿತದ ದಾಸನಾಗಿದ್ದನು. ಕಳವು ನಡೆಸಿರುವ ಮೂರು ಮೊಬೈಲ್‍ಗಳ ಪೈಕಿ ಒಂದು ಮೊಬೈಲನ್ನು ತನ್ನ ಭಾವ ಇಸ್ಮಾಯಿಲ್ ಎಂಬಾತನಿಗೆ ನೀಡಿದ್ದನು. ಆತ ಅದಕ್ಕೆ ಸಿಮ್ ಹಾಕಿ ಬಳಕೆ ಮಾಡುತ್ತಿದ್ದನು. ಕಳವಾಗಿರುವ ಮೊಬೈಲ್‍ನ ಐಎಂಇಐ ಸಂಖ್ಯೆ ಟ್ರೇಸಿಂಗ್ ನಲ್ಲಿದ್ದುದರಿಂದ ಆರೋಪಿ ಸುಳಿವು ಲಭ್ಯವಾಗಿದೆ.

Exit mobile version