Site icon Ullalavani

ಮುಸ್ಲಿಮರಿಗೆ ಬೆಣ್ಣೆ-ಹಿಂದೂಗಳಿಗೆ ಸುಣ್ಣ : ಸಚಿವ ಖಾದರ್ ವಿರುದ್ಧ ವಜ್ರದೇಹಿ ಸ್ವಾಮಿ ಆರೋಪ

ಉಳ್ಳಾಲ್ ನ್ಯೂಸ್ ಡೆಸ್ಕ್
ಉಳ್ಳಾಲ: ಮುಸಲ್ಮಾನರ ಕಣ್ಣಿಗೆ ಬೆಣ್ಣೆ, ಹಿಂದೂಗಳಿಗೆ ಕಣ್ಣಿಗೆ ಸುಣ್ಣ ಅನ್ನುವ ದ್ವಿಮುಖ ನೀತಿಯಲ್ಲಿ ಸಚಿವ ಖಾದರ್ ಆಡಳಿತ ನಡೆಸುತ್ತಿದ್ದು, ಹಿಂದುಗಳು ದುರ್ಬಲರೆಂದು ಮೆಟ್ಟಿ ನಿಲ್ಲುವ ಪ್ರಯತ್ನ ಮುಂದುವರಿದರೆ ಉಗ್ರ ಹೋರಾಟವನ್ನು ನಡೆಸಲಿದ್ದೇವೆ ಎಂದು ಗುರುಪುರ ವಜ್ರದೇಹಿ ಮಠದ ಶ್ರೀರಾಜಶೇಖರಾನಂದ ಹೇಳಿದ್ದಾರೆ.

ಅವರು ತೊಕ್ಕೊಟ್ಟುವಿನ ಬಸ್ ನಿಲ್ದಾಣದ ಬಳಿ ವಿಶ್ವ ಹಿಂದು ಪರಿಷತ್, ಬಜರಂಗದಳ, ಹಿಂದೂ ಜಾಗರಣಾ ವೇದಿಕೆ ಉಳ್ಳಾಲ ಪ್ರಖಂಡ ಇದರ ಜಂಟಿ ಆಶ್ರಯದಲ್ಲಿ ಮಂಗಳೂರು ಕ್ಷೇತ್ರದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸಿ ಸಚಿವ ಯು.ಟಿ.ಖಾದರ್ ಅವರನ್ನು ಸಚಿವ ಸಂಪುಟದಿಂದ ಕೈಬಿಡಬೇಕು ಮತ್ತು ಅವರ ಮೇಲೆ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ಆಗ್ರಹಿಸಿ ಸೋಮವಾರ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಭಾಗವಹಿಸಿದರು.
ದುರ್ನಡತೆಯ ಪರವಾಗಿರುವ ರಾಜ್ಯ ಸರಕಾರದಲ್ಲಿ ಪೊಲೀಸ್ ಅಧಿಕಾರಿಗಳಿಗೆ ರಕ್ಷಣೆ ಇಲ್ಲದಂತಾಗಿದೆ. ತೊಕ್ಕೊಟ್ಟು, ತಲಪಾಡಿ ಭಾಗದಲ್ಲಿಯೇ ಹಿಂದೂಗಳ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ. ಜನಪ್ರತಿನಿಧಿಗಳು ಸಮಸ್ಯೆಯನ್ನು ನಿಭಾಯಿಸಬೇಕೇ ಹೊರತು, ಜನರಿಗೆ ಸಮಸ್ಯೆಯಾಗಬಾರದು. ಬೋರ್ವೆಲ್ ನಿಮರ್ಿಸಿದಕ್ಕೆ ಸಚಿವರಿಗೆ ಅಭಿನಂದನೆ ಬ್ಯಾನರ್ ಹಾಕುವ ಹಿಂದೂಗಳು, ಅವರ ಸಮಾಜಕ್ಕೆ ಗೌರವ ನೀಡಿದಲ್ಲಿ ಮೆರವಣಿಗೆ ಮಾಡಿ ಗೌರವ ಸಲ್ಲಿಸುವ ಮನೋಭಾವದವರು. ಅಪರಾಧಿಗಳನ್ನು ಹಿಡಿಯಲು ಪೊಲೀಸ್ ಇಲಾಖೆ ಸಶಕ್ತವಾಗಿದೆ ಆದರೆ ಸರಕಾರ ಅವರ ಕೈಗಳನ್ನು ಕಟ್ಟಿ ಹಾಕಿದೆ. ಮಂಗಳೂರು ಒನ್ ಶಾಲೆಯ ಪ್ರಕರಣದಲ್ಲಿ ಮಗುವಿಗೆ ಕುಚರ್ಿ ತಾಗಿದೆ ಅಂದರೂ ಕೇವಲ ಹಿಂದು ಅನ್ನುವ ಕಾರಣಕ್ಕೆ ಶಾಲಾ ವ್ಯಾನ್ ಚಾಲಕನ ಮೇಲೆ ಅತ್ಯಾಚಾರ ಪ್ರಕರಣ ದಾಖಲಿಸಿ ಬಂಧಿಸಿರುವುದು ಖಂಡನೀಯ. ಇದೀಗ ತೊಕ್ಕೊಟ್ಟುವಿನಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ, ದೌರ್ಜನ್ಯಗಳಿಗೆ ಕೊನೆ ಸಿಗದೇ ಇದ್ದಲ್ಲಿ ಸಚಿವರ ಮನೆ ಎದುರು ನಡೆಸಲು ಸಿದ್ಧರಿದ್ದೇವೆ. ಅದಕ್ಕೂ ಮುನ್ನ ಸಚಿವರು ನ್ಯಾಯವನ್ನು ಎತ್ತಿಹಿಡಿಯಿರಿ, ದೌರ್ಜನ್ಯ ಕಡೆಗೆ ಗಮನಹರಿಸಿ ಅನ್ಯಾಯವಾದ ಕಡೆಯವರಿಗೆ ಒಲವು ಕೊಡಿ ಎಂದ ಅವರು ಸಚಿವರು ಶಾಂತಿಯನ್ನು ಕದಡಲು ಯತ್ನಿಸಬೇಡಿ. ಕೋಲ, ಮದುವೆಗೆ ಹೋದರೆ ಸಾಲದು ಹಿಂದೂಗಳ ಸಮಸ್ಯೆಗಳಿಗೆ ಗಮನಹರಿಸಿ ಎಂದರು.
ಬಜರಂಗದಳದ ಕನರ್ಾಟಕ ದಕ್ಷಿಣ ಪ್ರಾಂತ ಸಂಚಾಲಕ ಶರಣ್ ಪಂಪ್ ವೆಲ್ ಮಾತನಾಡಿ ಕುದುರೆಯ ಮದವನ್ನು ಹತ್ತಿಕ್ಕಲು ಅಂಕುಶದ ಅಗತ್ಯವಿದೆ. ಅದೇ ರೀತಿಯಲ್ಲಿ ಉಳ್ಳಾಲದ ದುಷ್ಕಮರ್ಿಗಳ ಕೃತ್ಯವನ್ನು ಹತ್ತಿಕ್ಕಲು ಖಡ್ಗದ ಅವಶ್ಯಕತೆ ಇದೆ. ರಂಝಾನ್ ತಿಂಗಳನ್ನು ಪವಿತ್ರ ಅನ್ನುವವರು ಅದೇ ತಿಂಗಳಲ್ಲಿ ಗೋಸಾಗಾಟ, ಯುವತಿಯರ ಮೇಲೆ ಅತ್ಯಾಚಾರಕ್ಕೆ ಯತ್ನಿಸುತ್ತಿದ್ದಾರೆ. ತಾಕತ್ತಿದ್ದರೆ ಅಂತಹವರನ್ನು ಇಸ್ಲಾಂ ಧರ್ಮದಿಂದ ಹೊರಹಾಕಿ, ತದನಂತರ ಇಸ್ಲಾಂ ತತ್ವಗಳನ್ನು ಒಪ್ಪುತ್ತೇವೆ. ಸಚಿವ ಯು.ಟಿ.ಖಾದರ್ ಸದನ ವೀರ ಅಲ್ಲ, ನಾಟಕ ವೀರ . ರಸ್ತೆಗಳ ನಿಮರ್ಾಣ ಮಾಡುತ್ತಾರೆ. ಅದೇ ರಸ್ತೆಯಲ್ಲಿ ಹಿಂದೂ ಯುವಕರಿಗೆ ಚೂರಿ ಹಾಕುತ್ತಾರೆ. ಬೈಕ್ ಅಪಘಾತವಾದರೂ ಸಚಿವರ ಲಾಭಿಯನ್ನು ಉಳ್ಳಾಲ ಠಾಣೆಯಲ್ಲಿ ಮಾಡುವವರಿದ್ದಾರೆ ಅಂದರೆ ನಿಜಕ್ಕೂ ಖೇದಕರ ಎಂದರು.
ಈ ಸಂದರ್ಭ ಹಿಂದೂ ಜಾಗರಣಾ ವೇದಿಕೆ ರಾಜ್ಯ ಸಹಸಂಚಾಲಕ ಸತ್ಯಜಿತ್ ಸುರತ್ಕಲ್, ಭಜರಂಗದಳದ ಜಿಲ್ಲಾ ಸಂಚಾಲಕ ಭುಜಂಗ ಕುಲಾಲ್, ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯದಶರ್ಿ ಗೋಪಾಲ ಕುತ್ತಾರ್, ಜಿಲ್ಲಾ ಸುರಕ್ಷಾ ಪ್ರಮುಖ್ ಉಮೇಶ್ ಜೆಪ್ಪಿನಮೊಗರು, ಜಿಲ್ಲಾ ಸಹಸಂಚಾಲಕ ಪುನಿತ್ ಅತ್ತಾವರ, ವಿ.ಹಿಂ.ಪ ಉಳ್ಳಾಲ ಪ್ರಖಂಡ ಕಾರ್ಯದಶರ್ಿ ಚಂದ್ರಹಾಸ್ ಉಳ್ಳಾಲ್ ಮೊದಲಾದವರು ಉಪಸ್ಥಿತರಿದ್ದರು.
ಪ್ರತಿಭಟನೆ ಬಳಿಕ ತೊಕ್ಕೊಟ್ಟು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಂಕೇತಿಕವಾಗಿ ರಸ್ತೆ ತಡೆ ನಡೆಸಲಾಯಿತು. ಈ ವೇಳೆ ಪೊಲೀಸರ ಹಾಗೂ ಸಂಘಟನೆ ಕಾರ್ಯಕರ್ತರ ನಡುವೆ ವಾಗ್ವಾದವೂ ನಡೆಯಿತು.

Exit mobile version