Site icon Ullalavani

ಮುಡಿಪು ಬ್ಲಾಕ್ ಕಾಂಗ್ರೆಸ್ ನಿಂದ ಪೆಟ್ರೋಲ್ ಪಂಪ್ ಎದುರು ಪ್ರತಿಭಟನೆ

ಉಳ್ಳಾಲ: ಕೇಂದ್ರ ಸರಕಾರ ಪೆಟ್ರೋಲ್ ಡೀಸೆಲ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುವ ಮೂಲಕ ಹಗಲು ದರೋಡೆ ಮಾಡುತ್ತಿದ್ದು, ಬೆಲೆ ಕಡಿಮೆ ಮಾಡಿ ಬಡಜನರ ಕಷ್ಟಗಳಿಗೆ ಸ್ಪಂದಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಗ್ರಾಮ ಮಟ್ಟದಿಂದ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಮುಡಿಪು ಬ್ಲಾಕ್ ಕಾಂಗ್ರೆಸ್ ಆಧ್ಯಕ್ಷ ಪ್ರಶಾಂತ್ ಕಾಜವ ಅಭಿಪ್ರಾಯಪಟ್ಟರು.
ಪೆಟ್ರೋಲ್, ಡೀಸೆಲ್, ಗ್ಯಾಸ್ ದರ ಏರಿಸಿದ ಕೇಂದ್ರ ಸರ್ಕಾರ ಮತ್ತು ವಿದ್ಯುತ್ ದರ ಏರಿಸಿದ ರಾಜ್ಯ ಸರ್ಕಾರದ ವಿರುದ್ಧ ಮುಡಿಪು ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಂಗಳವಾರ ಮುಡಿಪು ಜಂಕ್ಷನ್ ನಲ್ಲಿರುವ ಪೆಟ್ರೋಲ್ ಪಂಪ್ ಮುಂಭಾಗದಲ್ಲಿ ನಡೆದ ‘ಪೆಟ್ರೋಲ್ ನಾಟ್ ಔಟ್ 100’ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.
ಕಳೆದ ಏಳು ವರ್ಷದ ಬಿಜೆಪಿ ನೇತೃತ್ವದ ನರೇಂದ್ರ ಮೋದಿ ಸರಕಾರದ ದುರಾಡಳಿತದಿಂದ ಜನರು ಬೀದಿಗೆ ಇಳಿದು ಹೋರಾಟ ನಡೆಸುವ ಸ್ಥಿತಿ ನಿರ್ಮಾಣವಾಗಿದೆ. ಕೆಲವೇ ಜನರ ಹಿತದೃಷ್ಟಿ ಕಾಯುವ ಈ ಸರಕಾರ ಬಡ ಮತ್ತು ಮದ್ಯಮ ವರ್ಗದ ಜನರ ಬದುಕನ್ನು ದುಸ್ತರಗೊಳಿಸಿದೆ. ಕಾಂಗ್ರೆಸ್ ಅ„ಕಾರವ„ಯಲ್ಲಿ ಪೆಟ್ರೋಲ್ ವಿಚಾರದಲ್ಲಿ ಸೈಕಲ್ ಏರಿ ಪ್ರತಿಭಟಿಸಿದ್ದ ಬಿಜೆಪಿಯವರು ಈಗ ಎಲ್ಲಿದ್ದಾರೆ ಎಂದ ಅವರು ದರ ಏರಿಕೆಯ ವಿರುದ್ಧ ಕೇವಲ ಕಾಂಗ್ರೆಸ್ ಮಾತ್ರ ಪ್ರತಿಭಟನೆ ನಡೆಸಿದರೆ ಸಾಲದು ಜನಸಾಮಾನ್ಯರು ಬೀದಿಗಿಳಿದು ಹೋರಾಟ ನಡೆಸಿದರೆ ಮಾತ್ರ ಸರಕಾರ ಕಣ್ಣು ತೆರೆಯಲು ಸಾಧ್ಯವಿದ್ದು ಇದು ಸಾಂಕೇತಿಕ ಹೋರಾಟವಾಗಿದ್ದು, ಮುಂದಿನ ದಿನಗಳಲ್ಲಿ ಹೋರಾಟ ಮಾಡುವ ಪ್ರತಿಯೊಬ್ಬರಿಗೂ ಕಾಂಗ್ರೆಸ್ ಬೆಂಬಲ ನೀಡಲಿದೆ ಎಂದರು.
ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಮಮತಾ ಗಟ್ಟಿ ಮಾತನಾಡಿ ಬೆÉಲೆ ಕಡಿಮೆ ಮಾಡುತ್ತೇವೆ ಎಂದು ಸುಳ್ಳು ಹೇಳಿ ಜನರ ಮತ ಪಡೆದು ಇದೀಗ ತೈಲ, ಗ್ಯಾಸ್ ದರ ಏರಿಸುವ ಮೂಲಕ ಜನರನ್ನು ಬೀದಿಗೆ ಹಾಕಿದ್ದು, ದೇಶದಲ್ಲಿ ಕಾಂಗ್ರೆಸ್ ಮಾತ್ರವಲ್ಲ ಪ್ರತೀ ಜನಸಾಮಾನ್ಯರು ಬೆಲೆ ಏರಿಕೆಯ ವಿರುದ್ಧ ಹೋರಾಟ ನಡೆಸಬೇಕು ಎಂದರು.
ಬಂಟ್ವಾಳ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಚಂದ್ರಹಾಸ ಕರ್ಕೇರ ಮಾತನಾಡಿ ದೇಶದ ಆಡಳಿತ ಯಾರ ಕೈಗೆ ಕೊಟ್ರೆ ಅಚ್ಚೇ ದಿನ್ ಆಗುತ್ತದೆ ಎನ್ನುವುದು ಜನರು ಅಥರ ಮಾಡಿಕೊಂಡಿದ್ದು, ದರ ಏರಿಕೆಯ ಮೂಲಕ ಬಡವರ ಪಾಲಿಗೆ ಕಷ್ಟದ ದಿನ ಆರಂಬವಾಗಿದೆ ಎಂದರು.
ಕೆಪಿಸಿಸಿ ಅಲ್ಪಸಂಖ್ಯಾತ ವಿಭಾಗದ ಉಪಾಧ್ಯಕ್ಷ ಅಬ್ದುಲ್ ಜಲೀಲ್ ಮೋಂಟುಗೋಳಿ,ತಾ.ಪಂ.ಮಾಜಿ ಸದಸ್ಯ ಹೈದರ್ ಕೈರಂಗಳ, ಕಾರ್ಮಿಕ ಘಟಕದ ಅಧ್ಯಕ್ಷ ನಾಸೀರ್ ನಡುಪದವು,ಹಿರಿಯ ಮುಖಂಡ ಪದ್ಮನಾಭ ನರಿಂಗಾನ, ಕುರ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷ ಗಣೇಶ್ ನಾಯ್ಕ್, ಮಾಜಿ ಅಧ್ಯಕ್ಷ ಜುಬೇರ್, ಪಜೀರು ಗ್ರಾಮ ಪಂಚಾಯತ್ ಅಧ್ಯಕ್ಷೆ ಮೇರಿ ಫೆರ್ನಾಂಡೀಸ್, ಮಾಜಿ ಅಧ್ಯಕ್ಷ ಭರತ್ ರಾಜ್ ಶೆಟ್ಟಿ ಪಜೀರುಗುತ್ತು, ಸೀತಾರಾಮ ಶೆಟ್ಟಿ, ಇಮ್ತಿಯಾಝ್ ಪಜೀರು, ಉಪಾಧ್ಯಕ್ಷ ರಫೀಕ್, ನರಿಂಗಾನ ಉಪಾಧ್ಯಕ್ಷ ನವಾಝ್, ಪ್ರಮುಖರಾದ ಅರುಣ್ ಡಿಸೋಜ, ಶರೀಫ್ ಚೆಂಬೆತೋಟ, ಮುರಳೀಧರ ಶೆಟ್ಟಿ ಮೋರ್ಲ, ಸಮೀರ್ ಪಜೀರ್, ಹನೀಫ್ ಚಂದಹಿತ್ಲು, ರಹ್ಮಾನ್, ಬಾದುಶಾ ಸಾಂಬಾರತೋಟ,

Exit mobile version