Site icon Ullalavani

ಮಾನವೀಯ ಮೌಲ್ಯಗಳಿಗೆ ಬೆಲೆ ಕೊಡುವ ಕಾರ್ಯ : ಫಾ. ಜಯಪ್ರಕಾಶ್

ಉಳ್ಳಾಲ : ಸಂಕಷ್ಟದ ಕಾಲದಲ್ಲಿ ಮಾನವೀಯ ಮೌಲ್ಯಗಳಿಗೆ ಬೆಲೆ ಕೊಡುವುದು ದೇವರು ಮೆಚ್ಚುವ ಕಾರ್ಯ ಎಂದು ರಾಣಿಪುರ ಚರ್ಚ್‍ನ ಧರ್ಮಗುರು ಫಾ.ಜಯಪ್ರಕಾಶ್ ಅಭಿಪ್ರಾಯಪಟ್ಟರು.
ಅವರು ಯು.ಟಿ.ಕೆ ಹೆಲ್ಪ್ ಲೈನ್ ನಿರ್ದೇಶನದೊಂದಿಗೆ ಮುನ್ನೂರು ಗ್ರಾ.ಪಂ ಅಧ್ಯಕ್ಷ ವಿಲ್ಪ್ರೆಡ್ ಅವರು ವೈಯಕ್ತಿಕವಾಗಿ ಸಂತೋಷನಗರದ ಏಳನೇ ವಾರ್ಡಿನ ಫ್ಲೇವಿ ಡಿಸೋಜ ಎಂಬವರ ಮನೆಯಲ್ಲಿ ನೀಡಿದ ಆಹಾರ ಕಿಟ್ ವಿತರಣೆ ನಡೆಸಿ ಮಾತನಾಡಿದರು.
ಮುನ್ನೂರು ಗ್ರಾ.ಪಂ ಅಧ್ಯಕ್ಷ ವಿಲ್ಫ್ರೆಡ್ ಡಿಸೋಜ ಮಾತನಾಡಿ, ಗ್ರಾಮದಲ್ಲಿ ಯುಟಿಕೆ ಹೆಲ್ಪ್ ಲೈನ್ ಸಹಯೋಗದೊಂದಿಗೆ ಬಹಳಷ್ಟು ಗ್ರಾಮಸ್ಥರಿಗೆ ವಿವಿಧ ರೀತಿಯಲ್ಲಿ ಸಹಕರಿಸಿದ್ದೇವೆ. ಸೋಂಕಿತರ ಮನೆಮಂದಿಗೂ ಎಲ್ಲಾ ರೀತಿಯ ಸಹಕಾರವನ್ನು ಪಂಚಾಯಿತಿ ವತಿಯಿಂದ ಮಾಡಲಾಗಿದೆ ಎಂದರು.
ಈ ಸಂದರ್ಭ ಯುಟಿಕೆ ಹೆಲ್ಪ್ ಲೈನ್ ನ ಮುನ್ನೂರು ವಲಯ ಅಧ್ಯಕ್ಷ ಆರ್.ಕೆ.ಸಿ ಅಝೀಝ್, ನರಿಂಗಾನ ಗ್ರಾ.ಪಂ ಉಪಾಧ್ಯಕ್ಷ ನವಾಝ್, ಉಳ್ಳಾಲ ಬ್ಲಾಕ್ ಇಂಟಕ್ ಅಧ್ಯಕ್ಷ ಸಿದ್ದೀಖ್, ಉಪಾಧ್ಯಕ್ಷ ನೌಷೀರ್, ನದೀಮ್, ಸಿರಾಜ್, ಶಿಯಾಬ್, ಪಂ. ಸದಸ್ಯರುಗಳಾದ ಜಮೀಲಾ , ವಿಜಯಲಕ್ಷ್ಮೀ , ಪುಷ್ಪಾ ಅಂಚನ್, ಫ್ಲೇವಿ, ಸಮಾಜ ಸೇವಕ ಹೆರಾಲ್ಡ್ ಅಲ್ಬುಕರ್ಕ್ ಉಪಸ್ಥಿತರಿದ್ದರು.
ಭಾಸ್ಕರ್ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು.

Exit mobile version