
ಉಳ್ಳಾಲ : ಕಡಲ್ಕೊರೆತ ಸಂಭಂಧ ಪಟ್ಟ ಹಾಗೆ ತೌಕ್ತೆ ಚಂಡಮಾರುತ ದಿಂದ ಸೋಮೇಶ್ವರ, ಉಳ್ಳಾಲ, ಕೋಟೆಪುರ,ಭಟ್ಟಂಪಾಡಿಯಲ್ಲಿ ಮನೆಗಳಿಗೆ ವ್ಯಾಪಕವಾಗಿ ಹಾನಿಯಾಗಿದೆ. ಮೊಗವೀರ ಪಟ್ನದಿಂದ ಸೋಲಾರ್ ಕ್ಲಬ್ ವರೆಗೆ ಹಾಗೂ ಪೆರಿಬೈಲ್ ರೋಹಿತ್ ಮಾಸ್ಟರ್ ಮನೆ
ಕೋಟೆಬಾಗಿಲು, ನಾಗೇಶ್, ಬೆಟ್ಟಂಪಾಡಿಯವರ ಮನೆ ಅಪಾಯದಲ್ಲಿದೆ, ಇದನ್ನು ಸಂರಕ್ಷಿಸುವ ಕಾರ್ಯ ಸರಕಾರ ಮಾಡಬೇಕಿದೆ
ಈವರೆಗೆ ಸರಿಪಡಿಸುವ ಕಾರ್ಯಕ್ಕೆ ಸರಕಾರ ಮುಂದಾಗಿಲ್ಲ ಎಂದು ಶಾಸಕ ಯು.ಟಿ ಖಾದರ್ ಹೇಳಿದರು.
ಅವರು ಮಂಗಳೂರು ವಿಶ್ವವಿದ್ಯಾನಿಲಯದ ಐ.ಬಿಯಲ್ಲಿ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಇಂದಿನವರೆಗೆ ಮನೆಗಳನ್ನು ಉಳಿಸುವ ಕೆಲಸ ಪ್ರಾರಂಭವಾಗಿಲ್ಲ, ಕಡಲಂಚಿನ ಜನರು ಭಯದ ವಾತಾವರಣದಲ್ಲಿ ಇದ್ದಾರೆ. ಜಿಲ್ಲಾಧಿಕಾರಿ ಕಚೇರಿರಯಲ್ಲಿ ನಡೆದ ಸಭೆಯಲ್ಲಿ ಸ್ಪಷ್ಟವಾಗಿ ಹೇಳಲಾಗಿತ್ತು . ಮೀನುಗಾರಿಕೆ ಹಾಗೂ ಬಂದರು ಇಲಾಖೆಯ ಸಂಬಂಧ ಪಟ್ಟ ಸಭೆ ಮಂಗಳೂರಿನಲ್ಲಿ ನಡೆಯಬೇಕು. ಬೆಂಗಳೂರಿನ ಎ.ಸಿ ಕೋಣೆಯಲ್ಲಿ ಅಧಿಕಾರಿಗಳಿಗೆ ಕಡಲಿನಂಚಿನಲ್ಲಿರುವ ಸಮಸ್ಯೆ ತಿಳಿಯುವುದಿಲ್ಲ. ಆದ್ದರಿಂದ
ಉನ್ನತ ಮಟ್ಟದ ಸಭೆ ಮಂಗಳೂರಿನಲ್ಲಿಯೇ ನಡೆಯಬೇಕು ಎಂದು ಒತ್ತಾಯಿಸಿದ್ದೆ. ಆದರೆ ಈವರೆಗೆ ಬೆಂಗಳೂರಿನಲ್ಲೂ ಸಭೆ ಆಗಿಲ್ಲ, ಮಂಗಳೂರಿನಲ್ಲೂ ಆಗಿಲ್ಲ. ಮೀನುಗಾರರ ಮನೆ ಹಾನಿಯಾದಲ್ಲಿ ರಾಜ್ಯ ಸರಕಾರವೇ ಸಂಪೂರ್ಣ ಹೊಣೆ. ತಕ್ಷಣ ಕೆಲಸ ಮಾಡಬೇಕಿದೆ.
ಕಳದ ಬಾರಿಯ ಪ್ರಕೃತಿ ವಿಕೋಪದಿಂದ ಹಾನಿಯಾದ ಮನೆಗೆ ಪರಿಹಾರ ಸಿಕ್ಕಿಲ್ಲ. ಸೈಕ್ಲೋನ್ ನಿಂದ ಹಾನಿಯಾದ ಮನೆಗಳಿಗೆ ಈವರೆಗೆ ಪರಿಹಾರ ದೊರೆತಿಲ್ಲ. ಬಮ್9 ಹಾಕಿದ ಪ್ರದೇಶದಲ್ಲೂ ಮನೆಗಳಿಗೆ ಹಾನಿಯಾಗಿದೆ. ಅದಕ್ಕಾಗಿ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು.
ವೆನ್ಲಾಕ್ ನಲ್ಲಿ 40 ಬ್ಲ್ಯಾಕ್ ಫಂಗಸ್ ಸೋಂಕಿತರು !
ಬ್ಲ್ಯಾಕ್ ಫಂಗಸ್ ಜಿಲ್ಲೆಯಲ್ಲಿ ವಿಪರೀತವಾಗಿ ಕಾಣಿಸುತ್ತಿದೆ. ರಾಜ್ಯದಲ್ಲೂ ಜಾಸ್ತಿಯಾಗುತ್ತಿದೆ. , ವೆನ್ಲಾಕಿನಲ್ಲಿ ನಲ್ಲಿ 40 ರೋಗಿಗಳು ಇದ್ದಾರೆ.
ಬ್ಲ್ಯಾಕ್ವಫಂಗಸ್ ಬೇಕಾದ ಇಂಜೆಕ್ಷನ್ನೂ ಇಲ್ಲ. ಆದ್ದರಿಂದ ರಾಜ್ಯದ ಜನತೆಗೆ ಸ್ಪಷ್ಟವಾದ ಕಾರಣ ತಿಳಿಸಬೇಕು. ಬ್ಲಾಕ್ ಫಂಗಸ್
ಆಕ್ಸಿಜನ್ ಸಿಲಿಂಡರ್ ನಿಂದ ಬಂದಿರಬೇಕು. ಸಮಸ್ಯೆ ಅರ್ಥ ಮಾಡಿಕೊಂಡು ರೋಗಕ್ಕೆ ಕುರಿತ ಗೊಂದಲ ನಿವಾರಣೆ ರಾಜ್ಯ ಸರಕಾರ ಮಾಡಬೇಕು. ರಾಜ್ಯ ಸರಕಾರ ಈಗಾಗಲೇ ಘೋಷಿಸಿದ ಆರ್ಥಿಕ ಪ್ಯಾಕೇಜ್ ಸಮರ್ಪಕವಾಗಿಲ್ಲದಿದ್ದರೂ ಇಷ್ಟಾದರೂ ಸಿಕ್ಕಿತಲ್ಲ ಎಂದು ಸಮಾಧಾನದಲ್ಲಿದ್ದರು. ಆದರೆ ಈಗ ಇದೇ ಪ್ಯಾಕೇಜಿನ ಹೆಸರಿನಲ್ಲಿ ಗ್ರಾಮ ಪಂಚಾಯತಿಗೆ ನಿಗದಿಪಡಿಸಿದ 15ನೇ ಹಣಕಾಸು ಅನುದಾನವನ್ನು ರದ್ದುಪಡಿಸಿರುವುದು ದುರದೃಷ್ಟಕರ. ರಾಜ್ಯ ಸರಕಾರದ ಖಜಾನೆ ಇಷ್ಟೊಂದು ಕಷ್ಟದ ಪರಿಸ್ಥಿತಿಯಲ್ಲಿ ಇದೆ ಅನ್ನುವುದು ಬೇಸರದ ಸಂಗತಿ.
ಈ ವೇಳೆ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ಮಮತಾ ಗಟ್ಟಿ, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಮೊಹಮ್ಮದ್ ಮೋನು, ಜಿಲ್ಲಾ ಪಂ. ಮಾಜಿ ಸದಸ್ಯ ಎನ್.ಎಸ್.ಕರೀಂ, ನರಿಂಗಾನ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಪದ್ಮನಾಭ ನರಿಂಗಾನ, ಕೊಣಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಚಂಚಲಾಕ್ಷಿ, ಸದಸ್ಯರಾದ ಅಚ್ಚುತ ಗಟ್ಟಿ, ಇಕ್ಬಾಲ್ ಕೊಣಾಜೆ, ದೇವಣ್ಣ ಶೆಟ್ಟಿ, ಪ್ರೇಂ, ಸಿದ್ದಾರ್ಥ್ ಶೆಟ್ಟಿ,ಇಕ್ಬಾಲ್, ಪಾವೂರು ಪಂ ಸದಸ್ಯರಾದ ಮಜೀದ್, ರಿಯಾಝ್ ಗಾಡಿಗದ್ದೆ, ಹಾಗೂ ಸಮೀರ್ ಪಜೀರ್, ಇಫ್ತಿಕಾರ್ ಉಪಸ್ಥಿತರಿದ್ದರು.