Site icon Ullalavani

ಬಗಂಬಿಲ ಹಿಂದೂ ರುದ್ರಭೂಮಿಯಲ್ಲಿ ವಿಶ್ವ ಪರಿಸರ ದಿನಾಚರಣೆ

ಬಗಂಬಿಲ ಹಿಂದೂ ರುದ್ರಭೂಮಿಯಲ್ಲಿ ಶನಿವಾರ ವಿಶ್ವ ಪರಿಸರದ ದಿನದ ಅಂಗವಾಗಿ ಗಿಡವನ್ನು ನೆಡಲಾಯಿತು.

ಉಳ್ಳಾಲ: ಮಹಾಮಾರಿ ಕೊರೊನಾ ಆಮ್ಲಜನಕದ ಅಗತ್ಯತೆಯನ್ನು ಜನರಿಗೆ ತೋರಿಸಿಕೊಟ್ಟಿದೆ. ಈ ನಿಟ್ಟಿನಲ್ಲಿ ಆಮ್ಲಜನಕ ಪೂರೈಸುವ ಗಿಡಗಳ ಸಂರಕ್ಷಣೆ ಅತ್ಯಗತ್ಯ. ಅದಕ್ಕಾಗಿ ಎಲ್ಲರೂ ಪರಿಸರವನ್ನು ಬೆಳೆಸುವ ಕಾರ್ಯಕ್ಕೆ ಮುಂದಾಗಬೇಕಿದೆ ಎಂದು ಕುಂಪಲ ಶ್ರೀ ಬಾಲಕೃಷ್ಣ ಮಂದಿರದ ಅಧ್ಯಕ್ಷ ಹಾಗೂ ಜಿ.ಪಂ ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ ಹೇಳಿದರು.
ಅವರು ಶ್ರೀ ಬಾಲಕೃಷ್ಣ ಮಂದಿರ ಕುಂಪಲ ಇದರ ರಜತ ವರ್ಷದ ಸಾಮಾಜಿಕ ಕಾರ್ಯಕ್ರಮದ ಅಂಗವಾಗಿ ಭಾರತ ಸರಕಾರದ ನೆಹರು ಯುವ ಕೇಂದ್ರ, ಮಂಗಳೂರು ಇದರ ಸಹಕಾರದೊಂದಿಗೆ ಬಗಂಬಿಲದ ಹಿಂದೂ ರುದ್ರಭೂಮಿಯಲ್ಲಿ ಮೂರುಕಟ್ಟ ಮಿತ್ರ ಮಂಡಲಿ, ಜೈಭಾರತ್ ಫ್ರೆಂಡ್ಸ್ ಕ್ಲಬ್ ಕುಂಪಲ. ವಾಸುಕಿ ಫ್ರೆಂಡ್ಸ್ ಚಿತ್ರಾಂಜಲಿನಗರ, ಮಹಾದೇವಿ ಮಂದಿರ ಬಗಂಬಿಲ, ಬಗಂಬಿಲ ಫ್ರೆಂಡ್ಸ್ ಸರ್ಕಲ್ , ಬಗಂಬಿಲ, ಹಿಂದೂ ಯುವಸೇನೆ ಮಹಾದೇವಿ ಶಾಖೆ ಬಗಂಬಿಲ ಇವುಗಳ ಜಂಟಿ ಆಶ್ರಯದಲ್ಲಿ ಶನಿವಾರ ವಿಶ್ವ ಪರಿಸರ ದಿನಾಚರಣೆಯನ್ನು ಗಿಡ ನೆಡುವುದರ ಮೂಲಕ ಆಚರಿಸಿದರು.
ಪರಿಸರವನ್ನು ಬೆಳೆಸುವ ಕಾರ್ಯಕ್ಕೆ ಕೈ ಹಾಕಿ ಹಿಂದೂ ರುದ್ರಭೂಮಿ ಪರಿಸರ ಒಳ್ಳೆಯ ರೀತಿಯಲ್ಲಿ ಕಾಣುವಂತೆ ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತಿದೆ. ಮಂದಿರದ 25 ನೇ ವರ್ಷದ ಆಚರಣೆಯ ಸಲುವಾಗಿ ವಿವಿಧ ಕಾರ್ಯಕ್ರಮಗಳ ಜೊತೆಗೆ ಇದೂ ಒಂದಾಗಿದೆ. ಉಳ್ಳಾಲ ಭಾಗದ ಎಲ್ಲಾ ಹಿಂದೂ ರುದ್ರ ಭೂಮಿಯಲ್ಲಿ ಪರಿಸರ ಬೆಳೆಸುವ ಕೆಲಸ ಒಗ್ಗಟ್ಟಾಗಿ ಮಾಡಲಿದ್ದೇವೆ. ಆಮ್ಲಜನಕ ಹೆಚ್ಚು ಸಿಗುವುದೇ ಗಿಡಗಳನ್ನು ಬೆಳೆಸುವುದರಿಂದ , ಎಲ್ಲರೂ ಇಂತಹ ಕಾರ್ಯಕ್ಕೆ ಪ್ರೋತ್ಸಾಹಿಸಬೇಕಿದೆ ಎಂದರು.
ಕುಂಪಲ-ಬಗಂಬಿಲ ಭಾಗದಲ್ಲಿ ಕಳೆದ ವರ್ಷ ನೆಟ್ಟಂತಹ ಗಿಡ ಅತ್ಯುತ್ತಮವಾಗಿ ಪೋಷಿಸಲಾಗುತ್ತಿದೆ. ಪರಿಸರ ಸಂರಕ್ಷಣೆ ಹಾಗೂ ಸ್ವಚ್ಛತೆ ಕಾರ್ಯಕ್ರಮದಲ್ಲಿ ಈ ಭಾಗದ ಜನತೆ ಉತ್ತಮವಾಗಿ ಕೈಜೋಡಿಸಿದ್ದಾರೆ ಎಂದರು.
ಈ ಸಂದರ್ಭ ಬೆಳ್ಳಿ ಹಬ್ಬದ ಗೌರವಧ್ಯಕ್ಷರಾದ ಮೋಹನ್ ಶೆಟ್ಟಿ ಕುಂಪಲ, ಪರಿಸರ ಸಂರಕ್ಷಣೆಯ ಪ್ರದಾನ ಸಂಚಾಲಕ ರಾಜೇಶ್ ರೋಷನ್, ಬೆಳ್ಳಿ ಹಬ್ಬದ ಕಾರ್ಯಧ್ಯಕ್ಷ ಜಗದೀಶ್ ಆಚಾರ್ಯ, ಕೋಟೆಕಾರ್ ಪಟ್ಟಣ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಅನಿಲ್ ಬಗಂಬಿಲ, ಪುರಸಭೆ ಸದಸ್ಯರದ ಕಿಶೋರ್ ಡಿ. ಕೆ, ಹರೀಶ್ ಕುಂಪಲ, ಬಾಲಕೃಷ್ಣ ಮಂದಿರದ ಪ್ರದಾನ ಕಾರ್ಯದರ್ಶಿ ರವೀಂದ್ರ ಕುಂಪಲ, ಉತ್ಸವ ಸಮಿತಿ ಅಧ್ಯಕ್ಷರಾದ ಪ್ರವೀಣ್ ಕುಲಾಲ್, ಸತ್ಯನಾರಾಯಣ ಮಂದಿರದ ಪ್ರವೀಣ್ ಐ ಬಗಂಬಿಲ, ವೇಣುಗೋಪಾಲ್ ಬಗಂಬಿಲ, ಬಗಂಬಿಲ ಫ್ರೆಂಡ್ಸ್ ಸರ್ಕಲ್ ನ ಮಿತ್ರೆಶ್ ಬಗಂಬಿಲ , ಮಹಾದೇವಿ ಭಜನಾ ಮಂದಿರದ ಸುನಂದಾ, ಜಾಲಜಾಕ್ಷಿ, ಬಾಲಕೃಷ್ಣ, ಗಿಲ್ಬಾರ್ಟ್ ಆಪೆÇೀನ್ಸ್, ವೀರಾಂಜನೇಯ ವ್ಯಾಯಾಮ ಶಾಲೆಯ ಮನೋಜ್ ಕುಲಾಲ್, ಮೂರುಕಟ್ಟ ಮಿತ್ರ ಮಂಡಳಿಯ ಗಣೇಶ್ ಕುಲಾಲ್, ಜೈ ಭಾರತ್ ಫ್ರೆಂಡ್ಸ್ ಸರ್ಕಲ್ ನ ಪ್ರಸಾದ್ ವಿದ್ಯಾನಗರ, ವಾಸುಕಿ ಫ್ರೆಂಡ್ಸ್ ಸರ್ಕಲ್ ನ ಕಿರಣ್ ಚಿತ್ರಾಂಜಲಿ ನಗರ, ಓಂ ಫ್ರೆಂಡ್ಸ್ ನ ಚೇತನ್ ಶೆಟ್ಟಿ ಆಶ್ರಯ ಕಾಲನಿ, ಹಿಂದೂ ಯುವ ಸೇನೆ ಯ ನವೀನ್, ಆಶಿತ್, ಸ್ವಸ್ತಿಕ್, ನೆಹರು ಯುವ ಕೇಂದ್ರ ದ ಮಂಗಳೂರು ತಾಲೂಕು ಪ್ರತಿನಿಧಿ ವಿಕಾಸ್ ಕುಂಪಲ ಮೊದಲಾದವರು ಉಪಸ್ಥಿತರಿದ್ದರು.
ಅನಿಲ್ ಬಗಂಬಿಲ ಸ್ವಾಗತಿಸಿ, ಪ್ರವೀಣ್ ಐ ಬಗಂಬಿಲ ಕಾರ್ಯಕ್ರಮವನ್ನು ನಿರೂಪಿಸಿದರು.

Exit mobile version