Site icon Ullalavani

ಕೊಣಾಜೆಯಲ್ಲಿ ಮತ್ತೆ ಚೂರಿ ಇರಿತ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಕೊಣಾಜೆ: ಕೊಣಾಜೆ ನಡುಪದವು ಬಳಿ ಸ್ಕೂಟರಿನಲ್ಲಿ ತೆರಳುತ್ತಿದ್ದ ಯುವಕನಿಗೆ ಬೈಕಿನಲ್ಲಿ ಬಂದ ಆಗಂತುಕರಿಬ್ಬರು ಚೂರಿ ಇರಿದ ಘಟನೆ ಶುಕ್ರವಾರ ರಾತ್ರಿ ಸಂಭವಿಸಿದೆ. ಇದು ಮೂರನೇ ದಿನದಲ್ಲಿ ಎರಡನೇ ಪ್ರಕರಣವಾಗಿದೆ.

ನಡುಪದವು ನಿವಾಸಿ ಸಿರಾಜುದ್ದೀನ್ (24) ಚೂರಿ ಇರಿತಕ್ಕೊಳಗಾದವರಾಗಿದ್ದು, ಇವರು ಮಂಗಳೂರಿನ ಕನರ್ಾಟಕ ಏಜನ್ಸೀಸ್ ನಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ರಾತ್ರಿ ಕೆಲಸ ಮುಗಿಸಿ ಮನೆಗೆ ತನ್ನ ಸ್ಕೂಟರಿನಲ್ಲಿ ಬರುತ್ತಿದ್ದಾಗ ನಡುಪದವು ಇಂಜಿನಿಯರಿಂಗ್ ಕಾಲೇಜಿನ ಕ್ರಾಸ್ ಬಳಿ ಹಿಂದಿನಿಂದ ಪಲ್ಸಾರ್ ಬೈಕಿನಲ್ಲಿ ಬಂದ ಆಗಂತುಕರಿಬ್ಬರು ಚೂರಿಯಿಂದ ಇರಿದು ಪರಾರಿಯಾಗಿದ್ದಾರೆ. ಗಂಭೀರ ಗಾಯಗೊಂಡ ಸಿರಾಜುದ್ದೀನ್ ಅವರು ತನ್ನ ಸ್ಕೂಟರಿನಲ್ಲಿ ಸ್ವಲ್ಪ ದೂರ ಚಲಿಸಿ ಬಳಿಕ ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ. ಅವರು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಕೊಣಾಜೆ ಠಾಣಾ ವ್ಯಾಪ್ತಿಯಲ್ಲಿ ಮೂರನೇ ಪ್ರಕರಣ:

ಇನ್ಫೋಸಿಸ್ ಬಳಿ ಸತೀಶ್ ಎಂಬವರಿಗೆ ಕೆಲ ತಿಂಗಳ ಹಿಂದೆ ಇಂತಹದ್ದೇ ಕಪ್ಪು ಪಲ್ಸಾರ್ ಬೈಕಿನಲ್ಲಿ ಬಂದ ಆಗಂತುಕರು ಚೂರಿ ಇರಿದು ಪರಾರಿಯಾಗಿದ್ದರು. ಅದೇ ಹೊಟ್ಟೆಯ ಕೆಳಗಿನ ಭಾಗಕ್ಕೆ ಇರಿದಿದ್ದರು. ಇದರ ಬಳಿಕ ವಿಳಾಸ ಕೇಳುವ ನೆಪದಲ್ಲಿ ಪಜೀರು ಬಳಿ ಇಬ್ರಾಹಿಂ ಎಂಬವರಿಗೆ ಚೂರಿಯಿಂದ ಇರಿಯಲಾಗಿತ್ತು. ಅದರಲ್ಲೂ ಹೊಟ್ಟೆಯ ಕೆಳಗಿನ ಭಾಗಕ್ಕೆ ಇರಿಯಲಾಗಿತ್ತು. ಇದೀಗ ಮೂರನೇ ಘಟನೆ ನಡುಪದವು ಬಳಿ ನಡೆದಿದೆ. ಮೂರರಲ್ಲೂ ಕಪ್ಪು ಪಲ್ಸಾರ್ ಬೈಕಿನಲ್ಲಿ ಆಗಂತುಕರಿಬ್ಬರು ಒಂದೇ ರೀತಿಯಲ್ಲಿ ಕೃತ್ಯ ಎಸಗಿದ್ದಾರೆ.

ಮೂರು ದಿನದಲ್ಲಿ ಎರಡನೇ ಪ್ರಕರಣ:

ಎರಡು ದಿನಗಳ ಹಿಂದೆ ತಲಪಾಡಿಯಲ್ಲಿ ಪ್ರದೀಪ್ ಎಂಬಾತನಿಗೆ ಚೂರಿ ಇರಿತ ನಡೆದಿತ್ತು. ಎಲ್ಲಾ ಘಟನೆಗಳಲ್ಲಿ ಹೊಟ್ಟೆಯ ಕೆಳಗಿನ ಭಾಗವನ್ನೇ ಟಾರ್ಗೆಟ್  ಮಾಡಿ ಚೂರಿ ಇರಿದು ಒಂದೇ ಮಾದರಿಯಲ್ಲಿ ಕೃತ್ಯ ಎಸಗಿರುವುದರ ಹಿಂದೆ ಒಂದೇ ತಂಡ ಕೃತ್ಯದಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ.

ಈವರೆಗೆ ಪತ್ತೆಯಿಲ್ಲ :

ಈ ಹಿಂದೆ ನಡೆದ ಎರಡು ಪ್ರಕರಣಗಳು ಹಾಗೂ ಉಳ್ಳಾಲದಲ್ಲಿ ನಡೆದ ಮೂರು ಪ್ರಕರಣಗಳ ಆರೋಪಿಗಳ ಪತ್ತೆ ಈವರೆಗೆ ಆಗಿಲ್ಲ.

Exit mobile version