Site icon Ullalavani

ಮದುವೆಗೆ ಅನುಮತಿ ಪಡೆದು ಮೆಹಂದಿ ಸಮಾರಂಭದಲ್ಲಿ ನೃತ್ಯ: ಕೋಣಾಜೆ ಠಾಣೆಯಲ್ಲಿ ದೂರು ದಾಖಲು


ಕೊಣಾಜೆ ಪಾವೂರಿನಲ್ಲಿ ಮೇ 20ರಂದು ತಮ್ಮ ಮಗಳ ಮದುವೆ ಕಾರ್ಯಕ್ರಮ ನಡೆಸಲು ಶೋಭ ಎಂಬುವರು ಪಾವೂರು ಪಂಚಾಯತಿಯಿಂದ ಅನುಮತಿ ‌ಪಡೆದಿದ್ದರು. ಮದುವೆಗೆ ಮಾತ್ರ ಅನುಮತಿ ಪಡೆದ ವಧುವಿನ ಕಡೆಯವರು ಮದುವೆಯ ಮುನ್ನ ದಿನ ರಾತ್ರಿ ಮೆಹಂದಿ ಕಾರ್ಯಕ್ರಮದಲ್ಲಿ ಸಾಮೂಹಿಕ ನೃತ್ಯ ಮಾಡಿ, ಲಾಕ್​ಡೌನ್ ನಿಯಮ ಉಲ್ಲಂಘಿಸಿದ್ದಾರೆ.ಅನುಮತಿ ಇಲ್ಲದಿದ್ದರೂ ಧ್ವನಿವರ್ಧಕ ಬಳಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ನೃತ್ಯ ಮಾಡಿದ್ದಾರೆ. ಇದರ ವಿಡಿಯೋ ಗಮನಕ್ಕೆ ಬಂದ ಬಳಿಕ ಪಾವೂರು ಪಂಚಾಯತಿ ಪಿಡಿಓ ಸುಧಾರಾಣಿ ಅವರು ಕೋವಿಡ್ ನಿಯಮಾವಳಿ ಉಲ್ಲಂಘಿಸಿರುವುದರಿಂದ ಕಾನೂನು ಕ್ರಮ ಕೈಗೊಳ್ಳುವಂತೆ ಕೋಣಾಜೆ ಪೊಲೀಸ್ ಠಾಣೆಯಲ್ಲಿ ಸೂಚಿಸಿದ್ದಾರೆ. ಅವರ ಆದೇಶ ಅನ್ವಯ ದೂರು ದಾಖಲಿಸಿಕೊಳ್ಳಲಾಗಿದೆ.

Exit mobile version