
ಉಳ್ಳಾಲ: ಅಂಬ್ಲಮೊಗರು ಜನತೆಗೆ ನೀರಿನ ಸಮಸ್ಯೆ ಉದ್ಭವವಾದಾಗ ಗ್ರಾ.ಪಂ ಆಡಳಿತ ಮುಂದೆ ನಿಂತು ಕೊಳವೆ ಬಾವಿ ವ್ಯವಸ್ಥೆಯನ್ನು ಕಲ್ಪಿಸಿದೆ. ಈ ಮೂಲಕ ಕುಡಿಯುವ ನೀರಿಗಾಗಿ ಇಡಲಾದ ಅನುದಾನವನ್ನು ಸಮರ್ಪಕವಾಗಿ ಉಪಯೋಗಿಸಲಾಗಿದೆ ಎಂದು ಶಾಸಕ ಯು.ಟಿ ಖಾದರ್ ಹೇಳಿದರು.
ಅವರು ಅಂಬ್ಲಮೊಗರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮದಕ ಜಂಕ್ಷನ್ ಸಮೀಪ ಶಾಸಕರ ಅನುದಾನದಲ್ಲಿ ನಿರ್ಮಿಸಲಾದ ಕೊಳವೆ ಬಾವಿಗೆ ಚಾಲನೆ ನೀಡಿ ಭಾನುವಾರ ಮಾತನಾಡಿದರು.
ಉಪಕಾರ ಮಾಡಿದ ಸಂಸ್ಕೃತಿಯನ್ನು ಮರೆಯುವ ಜನರಲ್ಲ ಅಂಬ್ಲಮೊಗರು ಗ್ರಾಮದವರು. ಈ ಭಾಗದ ಮಕ್ಕಳಿಂದ ವಯಸ್ಸಾದವರಿಗೆ ಅಂಬ್ಲಮೊಗರು ಗ್ರಾಮದ ಅಭಿವೃದ್ಧಿಗೆ ಕಾಂಗ್ರೆಸ್ ಶ್ರಮಿಸಿದೆ ಎಂಬುದು ಗೊತ್ತಿದೆ. ಈ ನಿಟ್ಟಿನಲ್ಲಿ ಜನ ಎಂದಿಗೂ ಕಾಂಗ್ರೆಸನ್ನು ಮರೆಯಲು ಅಸಾಧ್ಯ. ಊರಿನ ಹಿರಿಯರಿಂದ ಕಿರಿಯರವರೆಗೆ ತಾಳ್ಮೆಯಿಂದ ಸಹಕರಿಸುತ್ತಿರುವ ಹಿನ್ನೆಲೆಯಲ್ಲಿ ಮುಂದೆಯೂ ಹಂತಹಂತವಾಗಿ ಅಭಿವೃದ್ಧಿ ಕಾರ್ಯ ಮುಂದುವರಿಯಲಿದೆ ಎಂದರು.
ಈ ವೇಳೆ ಅಂಬ್ಲಮೊಗರು ಗ್ರಾ.ಪಂ. ಅಧ್ಯಕ್ಷೆ ಲತಾ, ಉಪಾಧ್ಯಕ್ಷ ಇಕ್ಬಾಲ್, ತಾ.ಪಂ ಮಾಜಿ ಸದಸ್ಯ ಸುದರ್ಶನ್ ಶೆಟ್ಟಿ , ಗ್ರಾ.ಪಂ ಸದಸ್ಯರುಗಳಾದ ಸುಗಂದ್ ಶಟ್ಟಿ, ಸುಭಾಷ್ ಶೆಟ್ಟಿ, ರವಿ ಪೂಜಾರಿ, ರಫೀಕ್ ಎಸ್.ಎಂ, ಹೆಲೆನ್ ಡಿಸೋಜ, ವೀರಾ ಡಿಸೋಜ, ಇಸಾಕ್, ಹರೇಕಳ ಗ್ರಾ.ಪಂ ಅಧ್ಯಕ್ಷ ಬದ್ರುದ್ದೀನ್, ಸದಸ್ಯರ ಅಬೂಬಕರ್ ಸಿದ್ದೀಕ್, ಮಹಮ್ಮದ್ ಹನೀಫ್ ಹಾಗೂ ಉದ್ಯಮಿ ಅಬೂಬಕರ್ ಬೀಡಿ,
ಉಪಸ್ಥಿತರಿದ್ದರು.