
ಉಳ್ಳಾಲ: ಜೆಸಿಐ ಮಂಗಳಗಂಗೋತ್ರಿ ವತಿಯಿಂದ ಆಶಾ ಕಾರ್ಯಕರ್ತೆಯರಿಗೆ ಧೈರ್ಯದಿಂದ ಮುನ್ನಡೆಯುವ ಆತ್ಮಸ್ಥೈರ್ಯ ಕೊಡುವಂತಹ ಕಾರ್ಯ ಆಗಿದೆ ಎಂದು ಹರೇಕಳ ಶ್ರೀ ರಾಮಕೃಷ್ಣ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ರವೀಂದ್ರ ರೈ ಕಲ್ಲಿಮಾರು ಹೇಳಿದರು.
ಅವರು ನಾಟೆಕಲ್ ಪ್ರಾಥಮಿಕ ಕೇಂದ್ರದಲ್ಲಿ ಬುಧವಾರ ಜೆಸಿಐ ಮಂಗಳಗಂಗೋತ್ರಿ ವತಿಯಿಂದ 30 ಮಂದಿ ಆಶಾ ಕಾರ್ಯಕರ್ತೆಯರಿಗೆ ಕಿಟ್ ವಿತರಣೆ ನಡೆಸಿ ಮಾತನಾಡಿದರು.
ವ್ಯಕ್ತಿತ್ವ ವಿಕಸನ ಸಂಸ್ಥೆಯಾಗಿರುವ ಜೆ.ಸಿ ಐ ಅತ್ಯುತ್ತಮವಾಗಿ ಕಾರ್ಯಾಚರಿಸುತ್ತಿದೆ. ಜೆಸಿಐ ಸೇರಿಕೊಂಡವರು ವ್ಯಕ್ತಿತ್ವ ರೂಪಿಸಿಕೊಂಡವರು
ಜೆಸಿಐನಲ್ಲಿ ತೊಡಗಿಸಿಕೊಂಡ ಅನೇಕರು ಸಮಾಜಕ್ಕೆ ಸ್ಪಂಧಿಸಿ ಶಿಕ್ಷಕರಾದವರು. ಕೊರೊನಾ ಸಂಧಿಗ್ಧ ಕಾಲದಲ್ಲಿ ಕಟ್ಟ ಕಡೆಯದಾಗಿ ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಕಿಟ್ ನೀಡುವುದು ಮಾನವೀಯತೆಗೆ ಸ್ಪರ್ಶ ಕೊಡುವಂತಹ ಕಾರ್ಯಕ್ರಮ. ಆಶಾ ಕಾರ್ಯಕರ್ತೆಯರಿಗೆ ಎಲ್ಲಿಯೂ ತೊಂದರೆಯಾಗದಂತೆ ನೋಡಿಕೊಳ್ಳುವುದು ನಾಗರಿಕರ ಜವಾಬ್ದಾರಿ . ವಿಭಿನ್ನ ಸ್ವಭಾವದ ಜನ ವಿಭಿನ್ನವಾಗಿ ಮಾತನಾಡುತ್ತಾರೆ, ಆಶಾ ಕಾರ್ಯಕರ್ತೆಯರು ತಾಳ್ಮೆಯಲ್ಲಿದ್ದುಕೊಂಡು ದೇವರ ಕೆಲಸ ಎಂದುಕೊಂಡು ಕಾರ್ಯನಿರ್ವಹಿಸಿ ಎಂದರು.
ರೇಚಲ್ ಸಂಸ್ಥೆಯ ನಿರ್ದೇಶಕಿ ನಿರ್ಮಾ ಡಿಸೋಜ ಮಾತನಾಡಿ,ಇತರರ ಸೇವೆ ಮಾಡುವ ಸಂದರ್ಭ ತಮ್ಮಲ್ಲಿ ಆತ್ಮಸ್ಥೈರ್ಯವನ್ನು ತುಂಬಲು ರೇಚಲ್ ಸೇವಾ ಸಂಸ್ಥೆ ಸದಾ ಸಿದ್ಧ. ಮಾನಸಿಕ ಒತ್ತಡಕ್ಕೆ ಒಳಗಾಗಿರುವ ಆಶಾ ಕಾರ್ಯಕರ್ತೆಯರನ್ನು ಕೌನ್ಸಿಲಿಂಗ್ ನಡೆಸಲು ಹಾಗೂ ಅವರ ಕರ್ತವ್ಯಕ್ಕೆ ಸ್ಪೂರ್ತಿ ತುಂಬಿಸಲು ರೇಚಲ್ ಸಂಸ್ಥೆ ಬದ್ಧ ಎಂದರು.
ನಾಟೆಕಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಅಧಿಕಾರಿ ಡಾ. ಮಿಸ್ರಿಯಾ, ಲ್ಯಾಬ್ ಟೆಕ್ನಿಕಲ್ ಅಧಿಕಾರಿ ಜಲೀಲ್ ಇಬ್ರಾಹಿಂ, ಸಿಸ್ಟರ್ ಮರಿಯಮ್ಮ, ಪೊಸಕುರಲ್ ಸಂಸ್ಥೆ ನಿರ್ದೇಶಕ ವಿದ್ಯಾಧರ್ ಶೆಟ್ಟಿ, ಸ್ಥಾಪಕ ಅಧ್ಯಕ್ಷ ತ್ಯಾಗಂ ಹರೇಕಳ, ಕೊಣಾಜೆ ಮಂಗಳಗಂಗೋತ್ರಿ ಜೆಸಿಐ ಅಧ್ಯಕ್ಷ ಫ್ರಾಂಕಿ ಫ್ರಾನ್ಸಿಸ್ ಕುಟಿನ್ಹ, ಕಾರ್ಯದರ್ಶಿ ಪ್ರತಿಮಾ ಹೆಬ್ಬಾರ್, ನಿಕಟಪುರ್ವ ಅಧ್ಯಕ್ಷ ಪವಿತ್ರ ಗಣೇಶ್, ಜಯಲಕ್ಷ್ಮೀ, ಆರೀಫ್ ಕಲ್ಕಟ್ಟ, ವಲಯ ಮಂಡಳಿ ಸದಸ್ಯರುಗಳಾದ ಬಾದ್ ಷಾ ಸಾಂಬಾರುತೋಟ, ನಳಿನಿ, ವಸಂತ್ ರೈ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ 35 ವರ್ಷಗಳ ಕಾಲ ವಿವಿಧ ಆರೋಗ್ಯ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸಿ, ನಾಟೆಕಲ್ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಮೇ.31 ರಂದು ನಿವೃತ್ತಿ ಹೊಂದಲಿರುವ ಯೋಗಿನಿ ಕೆ.ಟಿ ಸುವರ್ಣ ಇವರನ್ನು ಅಭಿನಂದಿಸಲಾಯಿತು.