Site icon Ullalavani

ಮುಡಿಪು: ಬೇಕಲ್ ಉಸ್ತಾದ್ ಮೆಮೋರಿಯಲ್ ಫೌಂಡೇಶನ್ ಹೆಸರಿನಲ್ಲಿ ಆಂಬ್ಯುಲೆನ್ಸ್ ಲೋಕಾರ್ಪಣೆ

ಉಳ್ಳಾಲ: ಮುಡಿಪು ಒಳಪ್ರದೇಶಗಳ ಜನರ ಬಹುಬೇಡಿಕೆಯ ಆಂಬ್ಯುಲೆನ್ಸ್  ವ್ಯವಸ್ಥೆ  ಇದೀಗ ಫಲಪ್ರದವಾಗಿದೆ. ಸರ್ವಧರ್ಮದವರನ್ನು ಗೌರವಯುತವಾಗಿ ಕಾಣುತ್ತಿದ್ದ ಬೇಕಲ್ ಉಸ್ತಾದರ ಹೆಸರಿನಲ್ಲಿ ಭಾರತ್ ಬೀಡಿ ಸಂಸ್ಥೆ ನೀಡಿರುವ ಆಂಬ್ಯುಲೆನ್ಸ್ ಸೇವೆ ಜನರಿಗೆ ಸಹಕಾರಿಯಾಗಲಿ ಎಂದು ಶಾಸಕ ಯು.ಟಿ ಖಾದರ್ ಹೇಳಿದರು.

ಅವರು ಶ್ರೀ ಅನಂತ್ ಜಿ.ಪೈ ಸ್ಮರಣಾರ್ಥ ಭಾರತ್  ಬೀಡಿ ವಕ್ಸ್ ್ ಪ್ರೈ. ಲಿಮಿಟೆಡ್  ಇವರು ಯು.ಟಿ ಫರೀದ್ ಫೌಂಡೇಶನ್ ಸಹಯೋಗದೊಂದಿಗೆ ದಾನವಾಗಿ   ನೀಡಿದ   ಬೇಕಲ್ ಉಸ್ತಾದ್ ಮೆಮೋರಿಯಲ್ ಫೌಂಡೇಶನ್  ಹೆಸರಿನ ಆಂಬ್ಯುಲೆನ್ಸ್ ಸೇವೆಯನ್ನು ಮುಡಿಪು ಜಂಕ್ಷನ್ನಿನಲ್ಲಿ ಗುರುವಾರ  ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಕರಾವಳಿ ಪ್ರದೇಶದ ಧಾರ್ಮಿಕ ವಿಧ್ವಾಂಸರಲ್ಲಿ  ತನ್ನದೇ ಹೆಸರು ಮೂಡಿಸಿ, ಸರ್ವಧರ್ಮದವರನ್ನು ಗೌರವಯುತವಾಗಿ ಕಾಣುತ್ತಿದ್ದ ಬೇಕಲ್ ಉಸ್ತಾದ ಪರಿಚಿತರಿಲ್ಲದವರು ಯಾರಿಲ್ಲ.  ಜೀವಿತಾವಧಿಯ ಸಂಪೂರ್ಣ ಅವಧಿಯಲ್ಲಿ ಸಹೋದರತೆಯ ಪ್ರೀತಿ ವಿಶ್ವಾಸವನ್ನು  ಬೋಧಿಸಿದ ಬೇಕಲ ಉಸ್ತಾದರು ಕಳೆದ ವರ್ಷ ಅಗಲಿರುವುದು ಎಲ್ಲರಿಗೂ ತುಂಬಲಾರದ ನಷ್ಟವಾಗಿದೆ. ಕುಟುಂಬದವರು ಅವರ ಹೆಸರಿನಲ್ಲಿ ಬೇಕಲ್ ಉಸ್ತಾದ್ ಮೆಮೋರಿಯಲ್ ಟ್ರಸ್ಟ್ ಆರಂಭಿಸಿದ್ದಾರೆ. ಮುಡಿಪು ಅಭಿವೃದ್ಧಿಯ ಪ್ರದೇಶವಾಗಿದೆ. 108 ಆಂಬ್ಯುಲೆನ್ಸ್ ತಂದ ಸಂದರ್ಭ   ಮಂಚಿ, ಸಾಲೆತ್ತೂರು ಭಾಗದ ಜನಪ್ರತಿನಿಧಿಗಳು ಅಲ್ಲಿಗೆ  ಆಂಬ್ಯುಲೆನ್ಸ್ ಸೇವೆ ವಿಳಂಬವಾಗುತ್ತಿರುವ ಅಳಲು ವ್ಯಕ್ತಪಡಿಸಿದ್ದರು.  ಇದೀಗ ಮುಡಿಪು ಜಂಕ್ಷನ್ನಿನಿಂದಲೇ ಸೇವೆಯನ್ನು  ನೀಡಲಿರುವ ಆಂಬ್ಯುಲೆನ್ಸ್ ಒದಗಿಸಿದ ಭಾರತ್ ಬೀಡಿ ಸಂಸ್ಥೆಗೆ ಕೃತಜ್ಞತೆಗಳು ಎಂದರು.

ಈ ಸಂದರ್ಭ ಬಂಟ್ವಾಳ ತಾಲೂಕು ಪಂಚಾಯಿತಿ ಅಧ್ಯಕ್ಷ ಚಂದ್ರಹಾಸ್ ಕರ್ಕೇರ, ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಜವ, ರಾಜೀವ ಗಾಂಧಿ  ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯಗಳ ಸೆನೆಟ್ ಸದಸ್ಯ ಡಾ. ಇಫ್ತಿಕಾರ್ ಆಲಿ,  ಬೇಕಲ್ ಉಸ್ತಾದ್ ಮೆಮೋರಿಯಲ್ ಟ್ರಸ್ಟಿನ ಜಲೀಲ್  ಮೊಂಟೆಪದವು, ಗುತ್ತಿಗೆದಾರ ನಾಸಿರ್ ನಡುಪದವು, ಕುರ್ನಾಡು ಗ್ರಾ.ಪಂ ಅಧ್ಯಕ್ಷ  ಗಣೇಶ್ ರಾಮಯ್ಯ ನಾಯ್ಕ್, ತಾ.ಪಂ ಸದಸ್ಯ ಹೈದರ್ ಕೈರಂಗಳ,  ಉದ್ಯಮಿ ಎಸ್.ಕೆ ಅಬ್ದುಲ್ ಖಾದರ್,   ಸೂಫಿ ಕುಂಞÂ, ಹನೀಫ್ ಚಂದಹಿತ್ಲು, ಅರಾಫ ಜುಬೇರ್, ಅರುಣ್ ಡಿಸೋಜ,  ರಫೀಕ್ ಪಜೀರ್,  ಅಬ್ದುಲ್ ರಹಿಮಾನ್, ಸಿದ್ದೀಖ್ ಹೂಹಾಕುವಕಲ್ಲು, ಬಶೀರ್ ಸಾಜಿ,  ಅಶ್ರಫ್ ದೋಟ,   ಯಾಕೂಬ್ ಮುದುಂಗಾರ್,  ಹನೀಫ್ ಅರಾಫ, ಫಯಾಝ್ ಉಪಸ್ಥಿತರಿದ್ದರು. 

Exit mobile version