Site icon Ullalavani

ಮದುವೆ ಮನೆಯಲ್ಲಿ ಡಿ ಜೆ ಮದುಮಗ ಹಾಗೂ ಆತನ ತಂದೆ ವಿರುದ್ಧ ಪ್ರಕರಣ ದಾಖಲು

Un networks

ಮಂಗಳೂರು : ಮದುವೆ ಮನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರನ್ನು ಸೇರಿಸಿ ಡಿ.ಜೆ ಹಾಕಿ ಡ್ಯಾನ್ಸ್ ಮಾಡಿರುವ ಹಿನ್ನೆಲೆಯಲ್ಲಿ ಅಡ್ಯಾರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನೀಡಿರುವ ದೂರಿನಂತೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ರಾಜ್ಯ ಸರಕಾರದ ಕೋವಿಡ್-19 ನಿಂiÀiಮಾವಳಿಗಳನ್ನು ಉಲ್ಲಂಘಿಸಿರುವ ಕಾಯ್ದೆಗಳಡಿ ಮದುಮಗ ಹಾಗೂ ಆತನ ತಂದೆಯ ವಿರುದ್ಧ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಅಡ್ಯಾರು ಗುಡ್ಡೆಮನೆಯ ರಂಜಿತ್ ಎಂಬವರ ಮದುವೆ ಮೇ. 9ರಂದು ಸಿದ್ದಕಟ್ಟೆಯಲ್ಲಿ ನಡೆದಿತ್ತು.ಅದಕ್ಕಾಗಿ ಅಡ್ಯಾರು ಗ್ರಾಮ ಪಂಚಾಯಿತಿನಿಂದ 25 ಮಂದಿ ಭಾಗವಹಿಸುವ ಕುರಿತು ಅನುಮತಿಯನ್ನು ಪಡೆದಿದ್ದರು. ಮದುವೆಯಿಂದ ವಾಪಸ್ಸಾದ ನಂತರ ಮನೆಯಲ್ಲಿ ರಾತ್ರಿ ಮೈಕ್ ಅಳವಡಿಸಿ ಸಾರ್ವಜನಿಕರನ್ನು ಸೇರಿಸಿಕೊಂಡು ಡಿಜೆ ಆಯೋಜಿಸಿದ್ದರು. ಈ ಕುರಿತ ವೀಡಿಯೋ ಒಂದು ವೈರಲ್ ಆದ ಹಿನ್ನೆಲೆಯಲ್ಲಿ ಅಡ್ಯಾರು ಗ್ರಾ.ಪಂ.ನ ಅಭಿವೃದ್ಧಿ ಅಧಿಕಾರಿ ಕೃಷ್ಣ ನಾಯಕ್ ಅವರು ಮದುಮಗ ರಂಜಿತ್ ಮತ್ತವರ ತಂದೆ ದಾಮೋದರ್ ಶೆಟ್ಟಿಗಾರ್ ವಿರುದ್ಧ ದೂರು ದಾಖಲಿಸಿದ್ದರು. ಅದರಂತೆ ವಿಪತ್ತು ನಿರ್ವಹಣಾ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

Exit mobile version